Vegetarian Manchurian(ವೆಜ್ ಮಂಚೂರಿಯನ್ ಮಾಡುವ ವಿಧಾನ ಕನ್ನಡದಲ್ಲಿ) | Healthy snacks at home | snacks recipe in Kannada

 





ಬೇಕಾಗುವ ಸಾಮಗ್ರಿಗಳು:

ವೆಜ್ ಮಂಚೂರಿಯನ್ ಉಂಡೆಗೆ:
ಎಲೆ ಕೋಸು- 1/2 ಕಪ್ 
ಕ್ಯಾರಟ್ -1/2 ಕಪ್ 
ದಪ್ಪ ಮೆಣಸಿನ ಕಾಯಿ-1/4 ಕಪ್ 
ಬೀನ್ಸ್-1/4 ಕಪ್ 
ಈರುಳ್ಳಿ ಎಲೆ ಅಥವಾ  ಈರುಳ್ಳಿ -1/4 ಕಪ್ (ಈ ಅಡುಗೆ ಯಲ್ಲಿ ಈರುಳ್ಳಿ ಎಲೆ ಬಳಸಿಲ್ಲ) 

ವೆಜ್ ಮಂಚೂರಿಯನ್ ಗ್ರೇವಿ ಗೆ(ಗೊಜ್ಜು):
1 tbl spoon ಸಣ್ಣಗೆ ಉತ್ತರಿಸಿರುವ ಶುಂಠಿ 
1 tbl spoon ಸಣ್ಣಗೆ ಉತ್ತರಿಸಿರುವ ಬೆಳ್ಳುಳ್ಳಿ 
4 tbl spoon ಸಣ್ಣಗೆ ಉತ್ತರಿಸಿರುವ ಈರುಳ್ಳಿ 
2 ಹಸಿ ಮೆಣಸಿನ ಕಾಯಿ 
1 tbl spoon ಸಣ್ಣಗೆ ಉತ್ತರಿಸಿರುವ ಕೊತ್ತಂಬರಿ ಸೊಪ್ಪು 
1-2 tbl spoon ಎಣ್ಣೆ 
1 tbl spoon ಕಾಳು ಮೆಣಸು ಪೌಡರ್ 

1/2 tbl spoon ಸೋಯಾ ಸಾಸ್ 
1 tbl spoon ಟೊಮೇಟೊ ಸಾಸ್ 
3 spoons ರೆಡ್ ಚಿಲ್ಲಿ ಸಾಸ್ 

ಮಾಡುವ ವಿಧಾನ:
-> ಎಲ್ಲ ತರಕಾರಿಗಳನ್ನು ಸಣ್ಣಗೆ ಉತ್ತರಿಸಿ. ಒಂದು ಸಣ್ಣ ಪಾತ್ರೆಗೆ ಹಾಕಿ.  

-> 2 spoon ಮೈದ ,1 spoon ಕಾರ್ನ್ flour, 1/2 spoon ಕಾಳು ಮೆಣಸು ಪೌಡರ್, ಉಪ್ಪು ಹಾಕಿ. ಮಿಕ್ಸ್ ಮಾಡಿ. 


-> ಮಿಕ್ಸ್ ಮಾಡಿರುವ ತರಕಾರಿ ಯಿಂದ ಉಂಡೆ ಕಟ್ಟಿ.  ಉಂಡೆ ಕಟ್ಟಲು ಕಷ್ಟವಾದರೆ ಸ್ವಲ್ಪ ಮೈದಾ ಹಾಕಿಕೊಳ್ಳಿ. Mixture ಒಣಗಿದೆ ಅನಿಸಿದರೆ 1-2 spoon ನೀರು ಹಾಕಿ ಕೊಳ್ಳಿ. ತರಕಾರಿ ನೀರು ಬಿಡುವುದರಿಂದ ನೀರನ್ನು ಉಂಡೆ ಕಟ್ಟಲು ಅನುಕೂಲವಾಗುವಷ್ಟು ಮಾತ್ರ ಹಾಕಿ.


-> ಉಂಡೆ ತಯಾರಾದ ಮೇಲೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. 
ಕಾದ ನಂತರ ಉಂಡೆಯನ್ನು ಹಾಕಿ ಫ್ರೈ ಮಾಡಿ. ಅದು ಫ್ರೈ ಆದ ಮೇಲೆ ತಟ್ಟೆ ಮೇಲೆ tissue ಪೇಪರ್ ಹರಡಿ . ಬೆಂದಿರುವ ಉಂಡೆ ಹಾಕಿ ಹೆಚ್ಚಿನ ಎಣ್ಣೆ ಹೀರಲು ಹಾಕಿ ಎತ್ತಿಡಿ. 



ಕಾರ್ನ್ ಪೌಡರ್ ನ ಪೇಸ್ಟ್ ಗೆ: 
1 tbl spoon ಕಾರ್ನ್ ಪೌಡರ್ (ಜೋಳದ ಹಿಟ್ಟು)
2 tbl spoon ನೀರು 
ಸಣ್ಣ ಕಪ್ ನಲ್ಲಿ ಕಾರ್ನ್ ಪೌಡರ್, ನೀರು ಹಾಕಿ ಮಿಕ್ಸ್ ಮಾಡಿ ಎತ್ತಿಡಿ. 


ವೆಜ್ ಮಂಚೂರಿಯನ್ ಗ್ರೇವಿಗೆ (ಗೋಜ್ಜಿಗೆ):

-> ಪ್ಯಾನ್ನಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಹೆಚ್ಚಿರುವ ಶುಂಠಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. 
ಹೆಚ್ಚಿರುವ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. 
(ಹಸಿ ಮೆಣಸಿನಕಾಯಿ ಬೇಕಿದ್ರೆ ಬಿಟ್ಟು ಹಾಕಿ ) 



-> 1/2 spoon ಸೋಯಾ ಸಾಸ್, 1 tbl spoon ಟೊಮೇಟೊ ಸಾಸ್, 2-3 spoon ರೆಡ್ ಚಿಲ್ಲಿ ಸಾಸ್ ಹಾಕಿ. ನಂತರ ಕಾರ್ನ್ flour ಹಾಕಿ, ಚೆನ್ನಾಗಿ ಕಲಸಿ. 



-> ಕಾಳು ಮೆಣಸು ಪೌಡರ್ ಬೇಕಿದ್ರೆ ಹಾಕಿ. 

-> ಮಂಚೂರಿಯನ್ ಉಂಡೆ ಹಾಕಿ ತಿರುವಿ.

-> ಕೊತ್ತಂಬರಿ ಸೊಪ್ಪು ಹೆಚ್ಚಿ ಉದುರಿಸಿ. ಬಿಸಿ ಇರುವಾಗಲೇ ರುಚಿಯಾದ ವೇಗ್ ಮಂಚೂರಿಯನ್ ಬಡಿಸಿ 








 ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ