Moong dal payasa.. Hesaru bele payasa recipe | ಹೆಸರು ಬೇಳೆ ಪಾಯಸ | maduva sulabha vidhana kannadadalli

 


ಹೆಸರು ಬೇಳೆ ಪಾಯಸ ಬೇಕಾಗುವ ಸಾಮಗ್ರಿಗಳು:

ಹೆಸರು ಬೇಳೆ- 1 ಕಪ್
ಹಾಲು-1 ಕಪ್(optional)
ಬೆಲ್ಲ- 2 ಅಚ್ಚು 
ನೀರು- 1.5 ಕಪ್
ಕಾಯಿ ತುರಿ - 2-3 ಸ್ಪೂನ್ 


ಡ್ರೈ ಫ್ರೂಟ್ಸ್ - 2-3 spoon 
(ಗೋಡಂಬಿ, ದ್ರಾಕ್ಷಿ,ಪಿಸ್ತಾ )

ಏಲಕ್ಕಿ ಪುಡಿ - ೧ ಸ್ಮಾಲ್ ಟೀ ಸ್ಪೂನ್ 
ತುಪ್ಪ-2 ಸ್ಪೂನ್


ಮಾಡುವ ವಿಧಾನ:

Dry fruits ಅನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ಎತ್ತಿಟ್ಟುಕೊಳ್ಳಿ.ಎಲ್ಲವನ್ನೂ ಬೇರೆ ಬೇರೆಯಾಗಿ ಕಡಿಮೆ ಉರಿಯಲ್ಲಿ ಹುರಿದು ಕೊಳ್ಳಿ.  
ಹೆಸರು ಬೇಳೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ.



ನಂತರ ಪಾತ್ರೆಯಲ್ಲಿ  ಹಾಲು, ಅಳತೆಗೆ ತಕ್ಕಸ್ಟು ನೀರು(ಒಟ್ಟು 2.5 ಲೋಟ ) ಹಾಕಿ ಬೇಯಲು ಬಿಡಿ. ಪ್ರೆಷರ್ ಕುಕ್ ಮಾಡಿದರೆ ಇದು ಬೇಗ ಬೇಯುತ್ತದೆ,
ಹಾಲು ಇಲ್ಲವಾದರೆ ಬರೀ ನೀರನ್ನು ಹಾಕಿ ಕೂಡ ಪಾಯಸ ಮಾಡಬಹುದು.
 
ಬೆಲ್ಲ ದಲ್ಲಿ ಕಲ್ಲು/ಕಲ್ಮಶ ಇರೋದಂದರಿಂದ ಬೆಲ್ಲವನ್ನು ನೀರಿಗೆ ಹಾಕಿ ಕರಗಲು ಬಿಡಿ. ನಂತರ ಶೋಧಿಶಿ ಬೆಂದಿರುವ ಹೆಸರು ಬೇಳೆಗೆ ಬೆರೆಸಿಕೊಳ್ಳಿ. 


ಕೊನೆಗೆ ಕಾಯಿ ತುರಿ, ಏಲಕ್ಕಿ ಪುಡಿ, ಹುರಿದಿರುವ ಡ್ರೈ ಫ್ರೂಟ್ಸ್ ಹಾಕಿ ಚೆನ್ನಾಗಿ ತಿರುವಿ.  
(ನಾನು ಇಲ್ಲಿನ ರೆಸಿಪಿ ಯಲ್ಲಿ ಕಾಯಿ ತುರಿ ಹಾಕಿಲ್ಲ. ಇದು ಕೂಡ optional )



ಸರ್ವಿಂಗ್ ಬೌಲ್ ಗೆ ಪಾಯಸ ಹಾಕಿ ಸವಿಯಲು ಕೊಡಿ.