ವೆಜ್ ಫ್ರೈಡ್ ರೈಸ್ - Veg Fried Rice Recipe in kannada | ವೆಜ್ ಫ್ರೈಡ್ ರೈಸ್ ಮಾಡುವ ವಿಧಾನ ಕನ್ನಡದಲ್ಲಿ
Veg Fried Rice( ವೆಜ್ ಫ್ರೈಡ್ ರೈಸ್ )
ಹೊರಗೆ ಹೋಟೆಲ್ ನಲ್ಲಿ, ಸ್ಟಾಲ್ ಗಳಲ್ಲಿ ಎಲ್ಲರು ತಿನ್ನುವ ಅಥವಾ ತಿನ್ನಲು ಬಯಸುವ ಸಾಮಾನ್ಯ ತಿನಿಸು ವೆಜ್ ಫ್ರೈಡ್ ರೈಸ್...!!!
ಎಲ್ಲರಿಗೂ ಇಷ್ಟವಾಗುವ ಈ ತಿನಿಸು ಮಾಡುವ ವಿಧಾನ ತುಂಬ ಸುಲಭ. ಹೇಗೆ ಎಂದು ತಿಳಿಯಲು ಕೆಳಗಿನ ಈ ಬ್ಲಾಗ್ ಓದಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಶುಂಠಿ(ಸಣ್ಣಗೆ ಹೆಚ್ಚಿರೋದು )-1 tbl spoon
ಬೆಳ್ಳುಳ್ಳಿ(ಸಣ್ಣಗೆ ಹೆಚ್ಚಿರೋದು )-1 tbl spoon
ಅನ್ನ- 2 cup
ತರಕಾರಿಗಳು:
ಎಲೆ ಕೋಸು -1 ಸಣ್ಣ ಕಪ್
ಕ್ಯಾರಟ್ -1 ಸಣ್ಣ ಕಪ್
ಬೀನ್ಸ್ -1 ಸಣ್ಣ ಕಪ್
ದಪ್ಪ ಮೆಣಸಿನ ಕಾಯಿ(capsicum)-1 ಸಣ್ಣ ಕಪ್
ಕಾಳು ಮೆಣಸಿನ ಪುಡಿ
ಉಪ್ಪು
ನಿಂಬೆ ರಸ
vinegar (optional)
ಸೋಯಾ ಸಾಸ್ (optional)
ರೆಡ್ ಚಿಲ್ಲಿ ಸಾಸ್ (optional)
ಮಾಡುವ ವಿಧಾನ:
ಎಲ್ಲ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಕೋಸನ್ನು ಸಣ್ಣಗೆ ಉದ್ದವಾಗಿ ಕತ್ತರಿಸಿಕೊಳ್ಳಿ.
ಒಲೆಯ ಮೇಲೆ ಬಾಣಲೆ ಇಟ್ಟು ಕಾಯಲು ಬಿಡಿ. ನಂತರ ಬಾಣಲೆ ಯಲ್ಲಿ 2-3 ಸ್ಪೂನ್ ಎಣ್ಣೆ ಹಾಕಿ. ಸಣ್ಣಗೆ ಕತ್ತರಿಸಿರುವ ಶುಂಠಿ ಬೆಳ್ಳುಳ್ಳಿ ಹಾಕಿ ಸ್ವಲ್ಪ ಬಾಡಿಸಿ.
ತರಕಾರಿಯಲ್ಲಿ ಬೀನ್ಸ್ ಅನ್ನು ಮೊದಲು ಹಾಕಿ. ಸ್ವಲ್ಪ ಹುರಿದು ನಂತರ ಉಳಿದ ತರಕಾರಿ ಹಾಕಿ. ತರಕಾರಿಗಳನ್ನು ದೊಡ್ಡ ಉರಿಯಲ್ಲಿ ಹುರಿಯಿರಿ.
ನಂತರ ಇದಕ್ಕೆ ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, 1 ಸ್ಪೂನ್ ವಿನೆಗಾರ್ ಹಾಕಿ(ಇದು ಚೈನೀಸ್ ಸ್ಟೈಲ್). ಇವನ್ನು ಹಾಕುವುದು ಬೇಡವಾದರೆ ನಿಂಬೆ ರಸ(2spoon ) ಹಾಕಿ.
ಚೈನೀಸ್ ಸ್ಟೈಲಿನಲ್ಲಿ ಫ್ರೈಡ್ ಗೆ ರೈಸ್ ಗೆ ಕೆಂಪಗಿನ ಬಣ್ಣ ಮತ್ತು ಸ್ವಲ್ಪ ಖಾರದ ರುಚಿ ಬರಲು, ರೆಡ್ ಚಿಲ್ಲಿ ಸಾಸ್ 1 ಸ್ಪೂನ್ ಹೆಚ್ಚಾಗಿ ಹಾಕಿ.
ನಂತರ ತಯಾರಿಸಿ ಇಟ್ಟುಕೊಂಡಿರುವ ಅನ್ನ ಹಾಕಿ. ಅದರ ಮೇಲೆ ಕಾಳು ಮೆಣಸಿನ ಪುಡಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಚೆನ್ನಾಗಿ ಕಲಸಿ.
ಈಗ ವೆಜ್ ಫ್ರೈಡ್ ರೈಸ್ ತಿನ್ನಲು ರೆಡಿ.