Fish Fry with tamarind| How to make catla Fish Fry in kannad| Authentic karnataka style recipes | Easy and quick fish recipes

ಕ್ಯಾಟ್ಲಾ ಮೀನಿನ ಫ್ರೈ:




ಮೀನಿನ ಫ್ರೈ ಅಥವಾ ಮೀನಿನ ಯಾವುದೇ ಅಡುಗೆಯನ್ನು ನಾವು ಯಾವಾಗಲು ಕಷ್ಟ ಎಂದು ಭಾವಿಸುತ್ತೇವೆ. ಆದರೆ ಅದೆಲ್ಲಾ ಸುಳ್ಳು. ಬೇರೆಲ್ಲ ಅಡುಗೆ ಗಿಂತ ಅತಿ ಬೇಗ ಮೀನಿನ ಅಡುಗೆಗಳನ್ನು ಮಾಡಬಹುದು. 


ಈಗ ನಾವು ಫಿಶ್ ಫ್ರೈ ಅನ್ನು ಹೇಗೆ ತಯಾರಿಸೋದು ನೋಡೋಣ ಬನ್ನಿ 

ಅದರಲ್ಲೂ ಕೆಳಗಿನ ರೆಸಿಪಿ ಯಲ್ಲಿ ನಾನು ತುಂಬಾ ಕಡಿಮೆ ಎಣ್ಣೆ ಉಪಯೋಗಿಸಿದ್ದೇನೆ. 


ಮಾಡಲು ಬೇಕಾಗಿವೆ ಸಮಯ: 30 min

ಬೇಕಾಗುವ ಸಾಮಗ್ರಿಗಳು:


ಮೀನಿನ ತುಂಡು : 4-6
(ಇಲ್ಲಿ ಕ್ಯಾಟ್ಲಾ ಮೀನನ್ನು ಬಳಸಿದ್ದೇನೆ)

ಮೀನಿನ ಕೆಬಾಬ್ ಪುಡಿ - 1 pack
ಉಪ್ಪು -ರುಚಿಗೆ ತಕ್ಕಸ್ಟು 
ಹುಣಸೆ ಹಣ್ಣಿನ ರಸ-1 cup
ಚಿರೋಟಿ ರವೆ- 1 cup

ಎಣ್ಣೆ- 5 tbl spoon

( ಕಬಾಬ್ ಪೌಡರ್ ಬೇಡ ಅನಿಸಿದರೆ, ಮಸಾಲ ಮಿಶ್ರಣ ನೀವೇ ತಯಾರಿಯಿಸಿ ಕೊಳ್ಳಿ. 1 tbl spoon ಗರಂ ಮಸಾಲಾ ಪೌಡರ್,  1 tbl spoon ಕೆಂಪು ಮೆಣಸಿನ ಪುಡಿ, 1 tspn -ಅರೀಶಿನ ಪುಡಿ,  1/2 spoon ಧನಿಯಾ ಪುಡಿ ಬೆರೆಸಿದರೆ ರುಚಿಯಾದ ಮಸಾಲ ಮಿಶ್ರಣ ರೆಡಿ )

ಹುಣಸೆ ರಸಕ್ಕೆ : ಸಣ್ಣ ಕಪ್ ನ ಅಳತೆಯಲಿ ಹುಣಸೆ ಹಣ್ಣು ತೆಗೆದು ಕೊಂಡು ನೀರಲ್ಲಿ ನೆನೆ ಹಾಕಿ, ರಸವನ್ನು ಹಿಂದಿ ತೆಗೆದು ಇಟ್ಟು  ಕೊಳ್ಲಿ.


ಮಾಡುವ ವಿಧಾನ: 

1. ಮೀನನು ಚೆನ್ನಾಗಿ ಕ್ಲೀನ್ ಮಾಡಿ ಪಕ್ಕಕ್ಕೆ ಇಡಿ. 

2. ಪಾತ್ರೆಯೊಂದರಲ್ಲಿ ಕಬಾಬ್ ಪೌಡರ್, ಹುಣಸೆ ರಾಸ್, ಉಪ್ಪು ಹಾಕಿ ಗಟ್ಟಿ ಮಿಶ್ರಣ ಮಾಡಿಕೊಳ್ಳಿ. 

3. ಇದು ತಯಾರಾಗುವ ತನಕ, ತವಾದಲ್ಲಿ 4-5 ಸ್ಪೂನ್ ಎಣ್ಣೆ ಹಾಕಿ ಕಾಯಲು ಬಿಡಿ. ( ಇಲ್ಲಿ ನಾನು ಪೂರ್ತಿ ಕಡಿಮೆ ಎಣ್ಣೆ ಬಳಸಿ shallow ಫ್ರೈ ಮಾಡ್ತಾ ಇದ್ದೇನೆ )

4. ಒಂದು ತಟ್ಟೆಯಲ್ಲಿ ಚಿರೋಟಿ ರವೆ ಎತ್ತೆಟ್ಟುಕೊಳ್ಳಿ.  

5. ಮೀನನ್ನು ಮಸಾಲಾ ಗೆ ಅದ್ದಿ ನಂತರ ಚಿರೋಟಿ  ರವೆ ಯ ತಟ್ಟೆಯಲ್ಲಿ ಒಂದು ಹೊರಳು  ಹಾಕಿಸಿ.

ಹೀಗೆ ರವೆಯಲ್ಲಿ ಹೊರಲು ಹಾಕಿಸಿದರೆ ಫಿಶ್ ಫ್ರೈ ಗರಿಗರಿಯಾಗಿ ಬರುತ್ತದೆ.  



6. ಈಗ ಕಾದಿರುವ ಪಾನ್ ನಲ್ಲಿ ಮೀನು ಹಾಕಿ ಫ್ರೈ ಆಗಲು ಬಿಡಿ. ಫಿಶ್ ಚಿನ್ನದ ಬಣ್ಣ, ಇಲ್ಲವೇ  ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ. 

ಈ ನಡುವೆ ಬೇಕಿದ್ದರೆ 1-2 ಸ್ಪೂನ್ ಎಣ್ಣೆ ಹಾಕಿ ಕೊಳ್ಳಿ. ಮತ್ತೆ ಅದನ್ನು ತಿರುಗಿಸಿ ಎರಡು ಕಡೆ ಚೆನ್ನಾಗಿ ಫ್ರೈ ಮಾಡಿ. 



7. ಬೆಂದ ಫ್ರೈ ಅನ್ನು ಟಿಶ್ಯೂ ಪೇಪರ್ ಮೇಲೆ ಎಣ್ಣೆ ಹೀರಲು ಬಿಡಿ. ಈಗ ಫಿಶ್ ಫ್ರೈ ಅನ್ನು ನಿಂಬೆ ಹಣ್ಣು, ಈರುಳ್ಳಿ ಜೊತೆ ತಿನ್ನಲು ಕೊಡಿ.