ಚಿಕನ್ ಪಕೋಡ | Chicken Pakoda Recipe in kannada | Crispy chicken Pakora Recipe | yummy chicken starters recipe in kannada

                                 ಚಿಕನ್ ಪಕೋಡ 

ಈ ಥರ ಚಿಕನ್ ಪಕೋಡ ನೀವು ಯಾವತ್ತಾದ್ರೂ ಮಾಡಿದ್ದೀರಾ? ಟ್ರೈ ಮಾಡಿ ಈ ಹೊಸ ರುಚಿ ।
ನೋಡಲು ಥೇಟ್ ಪಕೋಡ ಥರಾನೇ ಇರುತ್ತೆ !! ಮತ್ತು ತಿನ್ನಲು ಬಹಳಾ ರುಚಿ ಇದು....  


ಚಿಕನ್ ನಲ್ಲಿ ಬರಿಯ ಕಬಾಬ್ ಅನ್ನು ಸ್ಟಾರ್ಟರ್ ಥರ ಮಾಡುವವರಿಗೆ, ಬೇರೆ ಏನಾದರೂ ಚಿಕನ್ ಸೈಡ್ ಡಿಶ್  ಮಾಡಬೇಕು ಅಂದು ಕೊಂಡಿದ್ರೆ  ನೀವು ಒಮ್ಮೆ ಈ ಚಿಕನ್ ಪಕೋಡ ಟ್ರೈ ಮಾಡ್ಲೆ ಬೇಕು. 

ಇದು ಮಾಡಲು  ಸುಲಭ, ಹಾಗೆ ಸ್ವಲ್ಪ ಬೇರೆ ಥರದ ಸೂಪರ್ ರೆಸಿಪಿ. 


ಬೇಕಾಗುವ ಸಾಮಗ್ರಿಗಳು:

ಚಿಕನ್-  250 gram (ಸಣ್ಣ ತುಂಡು ಗಳು)
ಕರಿ ಬೇವು - 1 ಹಿಡಿ(ಸಣ್ಣಗೆ ಹೆಚ್ಚಿಕೊಳ್ಳಿ)
ಈರುಳ್ಳಿ- 1( ಸಣ್ಣಗೆ ಉದ್ದಕ್ಕೆ ಹೆಚ್ಚಿರುವುದು)
ನಿಂಬೆ ಹಣ್ಣು- ಅರ್ಧ ಹೋಳು

ಕಡ್ಲೆ ಹಿಟ್ಟು-  2-3 ಸ್ಪೂನ್ಸ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ -  2 tblspoon
ಕೆಂಪು  ಮೆಣಸಿನ ಪುಡಿ- 1 tblಸ್ಪೂನ್
ಗರಂ ಮಸಾಲ ಪೌಡರ್- 1 tbl ಸ್ಪೂನ್
ಧನಿಯಾ ಪೌಡರ್ - 1 tblಸ್ಪೂನ್
ರುಚಿಗೆ ತಕ್ಕಷ್ಟು

ಕರಿಯಲು ಎಣ್ಣೆ

ಮಾಡುವ ವಿಧಾನ:

1) 1 ಬಟ್ಟಲಿನಲ್ಲಿ ಚೆನ್ನಾಗಿ ತೊಳೆದು ನೀರು ತೆಗೆದಿರುವ ಚಿಕನ್ ಹಾಕಿಕೊಳ್ಳಿ.  
2) ಕಡ್ಲೆ ಹಿಟ್ಟು, ಕರಿ ಬೇವು, ಮೇಲೆ ತಿಳಿಸಿರುವ ಮಸಾಲಾ ಪೌಡರ್, ಬೆಳ್ಳುಳ್ಳಿ ಪೇಸ್ಟ್ ಹಾಕಿ.


3) ಈರುಳ್ಳಿ, ಕರಿಬೇವು  ನಿಂಬೆ ರಸ ಹಾಕಿ ಬೆರೆಸಿ.




 4) ಈ ಸಮಯದಲ್ಲಿ ಈರುಳ್ಳಿ,ಚಿಕನ್ ನೀರು ಬಿಟ್ಟುಕೊಂಡಿದೆ ಅನಿಸಿದರೆ ಇನ್ನೂ ಸ್ವಲ್ಪ ಕಡ್ಲೆ ಹಿಟ್ಟು ಹಾಕಿ ಗಟ್ಟಿಯಾಗಿ ಕಲಸಿ ಕೊಳ್ಳಿ. 

5) 30 ನಿಮಿಷ ಚಿಕನ್ ಮಸಾಲಾ ಸೆಟ್ ಆಗಲು ಬಿಡಿ. ಸಮಯ ಇಲ್ಲ ಅಂದ್ರೆ ಬೇಗ ಕೂಡ ಕರಿಯಲು ಹಾಕಬಹುದು   



6) ನಂತರ ಒಂದು ಬಾಣಲೆ ಗೆ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಕಾಯಲು ಬಿಡಿ.

7) ನಂತರ ಬಾಣಲೆಗೆ ಚಿಕನ್ ತುಂಡು ಗಳನ್ನು ಹಾಕಿ ಕೆಂಪಗಾಗುವರೆಗೆ ಹುರಿಯಿರಿ.

8) ಟಿಶ್ಯೂ ಪೇಪರ್ ಮೇಲೆ ಇಟ್ಟು 
ಎಣ್ಣೆ ಹೀರಿಕೊಳ್ಳಲು ಬಿಡಿ 
ಈಗ ರುಚಿಯಾದ ಚಿಕನ್ ಪಕೋಡ ತಿನ್ನಲು ರೆಡಿ.