Kesari Bath or Kesari Baat recipe in Kannada | ಕೇಸರಿ ಭಾತ್ ಮಾಡುವ ವಿಧಾನ


ಕೇಸರಿ ಭಾತ್ ಮಾಡುವ ವಿಧಾನ:


ಕೇಸರಿ ಭಾತ್ ದಕ್ಷಿಣ ಭಾರತದ ಸಾಮಾನ್ಯವಾಗಿ ತಯಾರಿಸೋ  ಒಂದು ಸಿಹಿ ತಿನಿಸು. ಇದನ್ನು ಮಾಡುವುದು ಸುಲಭ. ಸಾಮಾನ್ಯವಾಗಿ ಇದನ್ನ ಉಪ್ಪಿಟ್ಟು ಮಾಡುವ ದಿನ ಜೊತೆಗೆ ಮಾಡಿ ಚೌ ಚೌ ಭಾತ್ ಅಂತ ಮಾಡಿ ಬಡಿಸುತ್ತಾರೆ. 

ಇಲ್ಲಾ ಹಬ್ಬದ ದಿನ, ವಿಶೇಷವಾದ ದಿನಗಳಲ್ಲೂ ಮಾಡುವುದು ಉಂಟು. 


ಬೇಕಾಗುವ ಸಾಮಗ್ರಿಗಳು :

ರವೆ - 1 glass 
ಹಾಲು - 2 glass
ನೀರು - 1/2 glass(ಹಾಲು ಕಡಿಮೆ ಇದ್ದರೆ ನೀರನ್ನೂ ಜಾಸ್ತಿ ಬಳಸಬಹುದು). 

ಸಕ್ಕರೆ - 1 glass
ತುಪ್ಪ - 3-4 ಸ್ಪೂನ್ 

ಗೋಡಂಬಿ,ದ್ರಾಕ್ಷಿ  - 1 ಸಣ್ಣ cup
ಚಕ್ಕೆ,ಲವಂಗ - 2-3
ಏಲಕ್ಕಿ, ಏಲಕ್ಕಿ ಸಿಪ್ಪೆ - 1-2
ಕೇಸರಿ ದಳ-8-10
 ಅಥವಾ ಕೇಸರಿ ಬಣ್ಣ -ಚಿಟಿಕೆ 

ಮಾಡುವ ವಿಧಾನ: 
1) ರವೆ ಸ್ವಲ್ಪ 1 ಸ್ಪೂನ್ ಎಣ್ಣೆ ಅಥವಾ ತುಪ್ಪ ದಲ್ಲಿ  ಹುರಿದು ಕೊಂಡು ಎತ್ತಿಡಿ. ಸಣ್ಣ ಉರಿಯಲ್ಲಿ ರವೆ  ಹುರಿಯಿರಿ. 


2) ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು ಬೇರೆ ಬೇರೆಯಾಗಿ ಹುರಿದು ಎತ್ತಿಡಿ.  


 3) ನಂತರ ಹಾಲು ಸಕ್ಕರೆ, ತುಪ್ಪ ಹಾಕಿ. 

 ನಿಮ್ ಹತ್ರ ಕೇಸರಿ ದಳ ಇದ್ರೆ , 3-4 ಘಂಟೆ ಗೆ ಮುನ್ನ 7-8 ದಳ ಹಾಕಿ ಹುನಿಯಲು ಬಿಡಿ. ಆಗ ಅದು ಕೇಸರಿ ಬಣ್ಣ ಬಿಡುತ್ತೆ. ಆ ಕೇಸರಿ ನೀರನ್ನು ನೀವು ಇಲ್ಲಿ ಹಾಕಿ . 
(ಕೇಸರಿ ಬಣ್ಣ ಇದ್ದರೆ ಕೇಸರಿ ಹಾಕಿ,ಇಲ್ಲಾಂದ್ರೆ ಅರಿಶಿನ ಆದರೂ ಹಾಕಬಹುದು )

 4) ಏಲಕ್ಕಿ ಸಿಪ್ಪೆ, ಚಕ್ಕೆ ಲವಂಗ ಹಾಕಿ ಕುದಿಯಲು ಬಿಡಿ. ಲವಂಗ ಏಲಕ್ಕಿ ಕೇಸರಿ ಭಾತ್ ಗೆ ಒಳ್ಳೆ ಪರಿಮಳ  ಕೊಡುತ್ತದೆ. 


5) ಹಾಲು ಕುದಿ ಬಂದ ಮೇಲೆ ರವೆಯನ್ನು ನಿಧಾನವಾಗಿ ಹಾಕಿ ಗಂಟು ಬಾರದ ಹಾಗೆ ತಿರುವಿ. ಹುರಿದಿಟ್ಟಿರುವ ದ್ರಾಕ್ಷಿ ಗೋಡಂಬಿ ಹಾಕಿ

6) ತುಪ್ಪ ಬೇಕಿದ್ದರೆ 1-2 ಸ್ಪೂನ್ ಬೆರೆಸಿಕೊಳ್ಳಿ. 



ಈಗ ರುಚಿಯಾದ ಕೇಸರಿ  
ಕೇಸರಿ ಭಾತ್ ರೆಡಿ



                                               



                                 



ಮೊಟ್ಟೆ ಫ್ರೈಡ್ ರೈಸ್ | ಎಗ್ ಫ್ರೈಡ್ ಮಾಡುವ ಸುಲಭ ವಿಧಾನ | Egg dishes- Kannada recipes

 Egg Fried Rice Recipe

ಎಗ್ ಫ್ರೈಡ್ ರೈಸ್ ಮಾಡುವ ವಿಧಾನ  - ಮೊಟ್ಟೆ ಫ್ರೈಡ್ ರೈಸ್ 


ಮೊಟ್ಟೆ ಆರೋಗ್ಯಕ್ಕೆ ಒಳ್ಳೇದು ಅಂತ ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ನಿಮಗೆ ಮೊಟ್ಟೆ ಹಾಗೆ ಬೇಯಿಸಿ ತಿನ್ನಲು ಇಷ್ಟ ಇಲ್ಲಾಂದ್ರೆ,ಅಥವಾ ಮಕ್ಕಳು ಮೊಟ್ಟೆ ಅಂದರೆ, ಅದನ್ನ ಬೇರೆ ರೀತಿಯಾಜಿ ರುಚಿಯಾಗಿ ತಯಾರಿಸಿ ಕೊಟ್ಟರೆ ಖಂಡಿತಾ ಎಲ್ಲರು ಅದನ್ನ ಇಷ್ಟ ಪಡ್ತಾರೆ. 

Egg Nutrition Value(ಮೊಟ್ಟೆಯಲ್ಲಿರುವ ಪೋಷಕಾಂಶ ಗಳು):
1 ಮೊಟ್ಟೆ- 75 ಕ್ಯಾಲೋರಿಸ್ 
 7 ಗ್ರಾಂ ಉತ್ತಮ ಪ್ರೊಟೀನ್ 
5 ಗ್ರಾಂ ಫ್ಯಾಟ್ 
1.6 ಗ್ರಾಂ ಸ್ಯಾಚುರೇಟೆಡ್ fat 
ಕಬ್ಬಿನಾಂಶ, ವಿರಮಿನ್ಗಳು ಮಿನರಲ್ ಗಳನ್ನೂ ಹೊಂದಿರುತ್ತೆ 

  
ಎಗ್ ಫ್ರೈಡ್ ರೈಸ್ ಒಂದು ಬೇಗನೆ ಮಾಡಬಹುದಂತಹ ರೈಸ್ ವಿಧಾನ ದಲ್ಲಿ ಒಂದು . ಕಡಿಮೆ ಸಮಯದಲ್ಲಿ ಇದನ್ನ ಮಾಡಬಹುದು. 
ಮಕ್ಕಳಿಂದ ಎಲ್ಲರಿಗು ಇದು ಇಷ್ಟ ವಾಗುತ್ತೆ. 


ಬೇಕಾಗುವ ಸಾಮಗ್ರಿಗಳು:

ಶುಂಠಿ - 1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )
ಬೆಳ್ಳುಳ್ಳಿ -1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )

ಮಾಡಿಟ್ಟಿರುವ ಅನ್ನ - 2 cup

ಮೊಟ್ಟೆ - 3-4
ಈರುಳ್ಳಿ (ಸಣ್ಣಗೆ ಕತ್ತರಿಸಿ ಕೊಳ್ಳಿ )- 1
ಮಿಕ್ಸ್ ತರಕಾರಿಗಳು- 1 cup(Optional-ತರಕಾರಿಗಳು ಬೇಡ ಅಂದರೆ skip ಮಾಡಿ )
ಹಸಿ ಮೆಣಸಿನ ಕಾಯಿ - 4-5

ಗರಂ ಮಸಾಲಾ ಪೌಡರ್ - 1 spoon
ಕಾಲು ಮೆಣಸಿನ ಪುಡಿ - 1 spoon
ನಿಂಬೆ - Half 
ಉಪ್ಪು - for paste

ಮಾಡುವ ವಿಧಾನ: 


1)  ಫ್ರಯಿಂಗ್ ಪಾನ್ ಅನ್ನು ಹೀಟ್ ಮಾಡಲು ಇಡಿ. 2-3 ಸ್ಪೂನ್ ಎಣ್ಣೆ ಹಾಕಿ. ನಂತರ ಹೆಚ್ಚಿರುವ ಶುಂಠಿ ಬೆಳ್ಳುಳ್ಳಿ ಹಾಕಿ 

2) ಅದು ಸ್ವಲ್ಪ ಬೆಂದ ನಂತರ ಈರುಳ್ಳಿ ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ 

3) ನಂತರ ಮಿಕ್ಸ್ ತರಕಾರಿ ಗಳನ್ನೂ ಹಾಕಿ ಫ್ರೈ ಮಾಡಿ. ತರಕಾರಿ ಇಲ್ಲಾಂದ್ರೆ ಈ ಸ್ಟೆಪ್ ಅನ್ನು ಸ್ಕಿಪ್ ಮಾಡಿ. ಇಲ್ಲಿ ತರಕಾರಿ ಗಳನ್ನ 4-5 ನಿಮಿಷ ಹೈ ಫ್ಲೇಮ್ ಅಲ್ಲಿ ಹುರಿಯಿರಿ. 
ಹೈ ಫ್ಲೇಮ್ ಅಲ್ಲಿ ತರಕಾರಿ ಯನ್ನು ಹುರಿದರೆ ಅದು crispy  ಆಗಿರುತ್ತೆ. 

4) ಮೊಟ್ಟೆ ಅನ್ನು ಒಡೆದು ಹಾಕಿ ಹಸಿ ವಾಸನೆ ಹೋಗೋವರೆಗೆ ಚೆನ್ನಾಗಿ ಹುರಿಯಿರಿ. 




5) ಸ್ವಲ್ಪ ಗರಂ ಮಸಾಲಾ ಹಾಕಿ ಫ್ರೈ ಮಾಡಿ 



6) ನಂತರ ಬೇಯಿಸಿರುವ ಅನ್ನ, ಪೆಪ್ಪರ್ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲ ಸೇರಿಸಿ ಚೆನ್ನಾಗಿ ಕಲಸಿ. 



7) ಚೈನೀಸ್ ಸ್ಟೈಲ್ ಅಲ್ಲಿ ಮಾಡೋ ಹಾಗಿದ್ರೆ ನಿಮ್ಮ ಹತ್ರ ಇರುವ ಸೌಸೆ ಗಳು ಹಾಕಬಹುದು.
ಇಲ್ಲಾಂದ್ರೆ ನಿಂಬೆ ಜ್ಯೂಸ್ ಹಾಕಿ  ಮಿಕ್ಸ್ ಮಾಡಿ. ಹೈ ಫ್ಲೇಮ್ ಅಲ್ಲಿ ೪-೫ ನಿಮಿಷ ಫ್ರೈ ಮಾಡಿ ಓಲೆ ಆರಿಸಿರಿ. 




8) ಈಗ ಎಗ್ ಫ್ರೈಡ್ ರೈಸ್ ತಿನ್ನಲು ರೆಡಿ ಆಗಿದೆ . ನಿಮ್ ಹತ್ರ ಇರುವ ಟೊಮೇಟೊ ಸಾಸ್, ಚಿಲ್ಲಿ ಸಾಸ್ ಜೊತೆ ಸರ್ವ್ ಮಾಡಿ. ಇದು  ಬಿಸಿ  ಇರುವಾಗಲೇ ತಿಂದರೆ ಚೆನ್ನ .. 






                                                   



Article tags: #Egg fried rice, #Egg fried rice maduva vidhana, #Prepare Egg fried rice with available vegetables and egg at home