ನಾಟಿ ಕೋಳಿ ಸಾರು ಮಾಡುವ ವಿಧಾನ:
(Nati koli saaru Recipe in Kannada )
ಇಂದು ನಾವು ತುಂಬ ಕಡಿಮೆ ಮಸಾಲೆ ಗಳನ್ನೂ ಬಳಸಿಯೂ ಕೂಡ, ತುಂಬ ರುಚಿಕರವಾದಂತ, ಪೌಷ್ಟಿಕಉಳ್ಳ ನಾಟಿ ಕೋಳಿ ಸಾಂಬಾರ್ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ.
ಹುಚ್ಚೆಳ್ಳಿನ ಹಾಲು ಮಾಡುವ ವಿಧಾನ:
ಹುಚ್ಚೆಳ್ಳು:1 ಕಪ್ (10 ನಿಮಿಷ ನೀರಲ್ಲಿ ಹಾಕಿ ಹುನಿಯಲು ಬಿಡಿ)
ಹುಚ್ಚೆಳ್ಳನ್ನು ಮಿಕ್ಸಿಯಲ್ಲಿ ರುಬ್ಬಿ, ಸೋಸಿ ಅದರ ಹಾಲು ಎತ್ತಿಡಿ
ನಾಟಿ ಕೋಳಿ ಮಾಡುವ ವಿಧಾನ :
-> ಒಲೆ ಹಚ್ಚಿ ಪ್ರೆಷರ್ ಕುಕ್ಕರ್ ಅನ್ನು ಸ್ವಲ್ಪ ಬಿಸಿಯಾಗಲು ಬಿಡಿ.
-> ನಂತರ 3-4 ಸ್ಪೂನ್ ಎಣ್ಣೆ ಹಾಕಿ 2 ಈರುಳ್ಳಿಯನ್ನು ಹಾಕಿ ಹುರಿಯಿರಿ.
(2 ಈರುಳ್ಳಿ ಯನ್ನು ಕತ್ತರಿಸಿ ಎಣ್ಣೆಯಲ್ಲಿ ಹುರಿಯಿರಿ. ಹುರಿದಿರುವ ಅರ್ಧ ಭಾಗ ಈರುಳ್ಳಿ ಯನ್ನು ಮಿಕ್ಸಿಗೆ ಹಾಕಿ ರುಬ್ಬಲು ಎತ್ತಿಡಿ)
-> ನಂತರ ಪ್ರೆಷರ್ ಕುಕ್ಕರ್ ಗೆ ರುಬ್ಬಿರುವ ಶುಂಠಿ ಬೆಳ್ಳುಳ್ಳಿ paste ಹಾಕಿ ಹುರಿಯಿರಿ.
->ನಂತರ ಚೆನ್ನಾಗಿ ತೊಳೆದಿರುವ ಕೋಳಿ ಮಾಂಸ ಹಾಕಿ, ಉಪ್ಪು ಅರಿಶಿಣ ಹಾಕಿ ನೀರು ಹಿಂಗುವವರೆಗೆ ಚೆನ್ನಾಗಿ ಹುರಿಯಿರಿ.
->ಮೇಲೆ ತಿಳಿಸಿರುವ ಮಸಾಲೆ ಸಾಮಾನುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
->ನಂತರ ಅದಕ್ಕೆ ರುಬ್ಬಿರುವ ಮಸಾಲಾ, ಸಾರಿನ ಖಾರದ ಪುಡಿ, ಸ್ವಲ್ಪ ನೀರು ಹಾಕಿ ಪ್ರೆಷರ್ ಕುಕ್ಕರ್ ಮುಚ್ಚಳ ಮುಚ್ಚಿ, 4-5 ವಿಷಲ್ ಬರುವ ವರೆಗೆ ಬೇಯಲು ಬಿಡಿ.
->ನಂತರ ಅದಕ್ಕೆ ರುಬ್ಬಿರುವ ಮಸಾಲಾ, ಸಾರಿನ ಖಾರದ ಪುಡಿ, ಸ್ವಲ್ಪ ನೀರು ಹಾಕಿ ಪ್ರೆಷರ್ ಕುಕ್ಕರ್ ಮುಚ್ಚಳ ಮುಚ್ಚಿ, 4-5 ವಿಷಲ್ ಬರುವ ವರೆಗೆ ಬೇಯಲು ಬಿಡಿ.
->ಕುಕ್ಕರ್ ಅನ್ನು ತೆಗೆದ ಮೇಲೆ ಹುಚ್ಚೆಳ್ಳಿನ ಹಾಲು ಬೆರೆಸಿ ಮತ್ತೆ ಕುದಿಯಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ಈಗ ನಾಟಿ ಕೋಳಿ ಸಾರು ತಿನ್ನಲು ರೆಡಿ
ಇದನ್ನು ಬಿಸಿ ಮುದ್ದೆ, ಅನ್ನ ದ ಜೊತೆ ತಿನ್ನಲು ಕೊಡಿ.
ಈ ಸಾಂಬಾರ್ ಪೌಷ್ಟಿಕವಾಗಿರುವುದರಿಂದ ಒಳ್ಳೆಯ ಅರೋಗ್ಯ ಮತ್ತು ಶಕ್ತಿ ಕೊಡುತ್ತದೆ. ಶೀತದ ಸಮಯ ದಲ್ಲಿ ಈ ಸಾಂಬಾರ್ ಅನ್ನು ಮಕ್ಕಳಿಗೆ, ಬಾಣಂತಿಯರಿಗೆ, ಮತ್ತು ಎಲ್ಲರಿಗೂ ಸೂಪ್ ಥರವೂ ಕೂಡ ಕುಡಿಯಲು ಕೊಡಬಹುದು.
You might also like the recipes below: