Showing posts with label ಕನ್ನಡ Recipes. Show all posts
Showing posts with label ಕನ್ನಡ Recipes. Show all posts

ಮೊಟ್ಟೆ ಫ್ರೈಡ್ ರೈಸ್ | ಎಗ್ ಫ್ರೈಡ್ ಮಾಡುವ ಸುಲಭ ವಿಧಾನ | Egg dishes- Kannada recipes

 Egg Fried Rice Recipe

ಎಗ್ ಫ್ರೈಡ್ ರೈಸ್ ಮಾಡುವ ವಿಧಾನ  - ಮೊಟ್ಟೆ ಫ್ರೈಡ್ ರೈಸ್ 


ಮೊಟ್ಟೆ ಆರೋಗ್ಯಕ್ಕೆ ಒಳ್ಳೇದು ಅಂತ ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ನಿಮಗೆ ಮೊಟ್ಟೆ ಹಾಗೆ ಬೇಯಿಸಿ ತಿನ್ನಲು ಇಷ್ಟ ಇಲ್ಲಾಂದ್ರೆ,ಅಥವಾ ಮಕ್ಕಳು ಮೊಟ್ಟೆ ಅಂದರೆ, ಅದನ್ನ ಬೇರೆ ರೀತಿಯಾಜಿ ರುಚಿಯಾಗಿ ತಯಾರಿಸಿ ಕೊಟ್ಟರೆ ಖಂಡಿತಾ ಎಲ್ಲರು ಅದನ್ನ ಇಷ್ಟ ಪಡ್ತಾರೆ. 

Egg Nutrition Value(ಮೊಟ್ಟೆಯಲ್ಲಿರುವ ಪೋಷಕಾಂಶ ಗಳು):
1 ಮೊಟ್ಟೆ- 75 ಕ್ಯಾಲೋರಿಸ್ 
 7 ಗ್ರಾಂ ಉತ್ತಮ ಪ್ರೊಟೀನ್ 
5 ಗ್ರಾಂ ಫ್ಯಾಟ್ 
1.6 ಗ್ರಾಂ ಸ್ಯಾಚುರೇಟೆಡ್ fat 
ಕಬ್ಬಿನಾಂಶ, ವಿರಮಿನ್ಗಳು ಮಿನರಲ್ ಗಳನ್ನೂ ಹೊಂದಿರುತ್ತೆ 

  
ಎಗ್ ಫ್ರೈಡ್ ರೈಸ್ ಒಂದು ಬೇಗನೆ ಮಾಡಬಹುದಂತಹ ರೈಸ್ ವಿಧಾನ ದಲ್ಲಿ ಒಂದು . ಕಡಿಮೆ ಸಮಯದಲ್ಲಿ ಇದನ್ನ ಮಾಡಬಹುದು. 
ಮಕ್ಕಳಿಂದ ಎಲ್ಲರಿಗು ಇದು ಇಷ್ಟ ವಾಗುತ್ತೆ. 


ಬೇಕಾಗುವ ಸಾಮಗ್ರಿಗಳು:

ಶುಂಠಿ - 1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )
ಬೆಳ್ಳುಳ್ಳಿ -1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )

ಮಾಡಿಟ್ಟಿರುವ ಅನ್ನ - 2 cup

ಮೊಟ್ಟೆ - 3-4
ಈರುಳ್ಳಿ (ಸಣ್ಣಗೆ ಕತ್ತರಿಸಿ ಕೊಳ್ಳಿ )- 1
ಮಿಕ್ಸ್ ತರಕಾರಿಗಳು- 1 cup(Optional-ತರಕಾರಿಗಳು ಬೇಡ ಅಂದರೆ skip ಮಾಡಿ )
ಹಸಿ ಮೆಣಸಿನ ಕಾಯಿ - 4-5

ಗರಂ ಮಸಾಲಾ ಪೌಡರ್ - 1 spoon
ಕಾಲು ಮೆಣಸಿನ ಪುಡಿ - 1 spoon
ನಿಂಬೆ - Half 
ಉಪ್ಪು - for paste

ಮಾಡುವ ವಿಧಾನ: 


1)  ಫ್ರಯಿಂಗ್ ಪಾನ್ ಅನ್ನು ಹೀಟ್ ಮಾಡಲು ಇಡಿ. 2-3 ಸ್ಪೂನ್ ಎಣ್ಣೆ ಹಾಕಿ. ನಂತರ ಹೆಚ್ಚಿರುವ ಶುಂಠಿ ಬೆಳ್ಳುಳ್ಳಿ ಹಾಕಿ 

2) ಅದು ಸ್ವಲ್ಪ ಬೆಂದ ನಂತರ ಈರುಳ್ಳಿ ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ 

3) ನಂತರ ಮಿಕ್ಸ್ ತರಕಾರಿ ಗಳನ್ನೂ ಹಾಕಿ ಫ್ರೈ ಮಾಡಿ. ತರಕಾರಿ ಇಲ್ಲಾಂದ್ರೆ ಈ ಸ್ಟೆಪ್ ಅನ್ನು ಸ್ಕಿಪ್ ಮಾಡಿ. ಇಲ್ಲಿ ತರಕಾರಿ ಗಳನ್ನ 4-5 ನಿಮಿಷ ಹೈ ಫ್ಲೇಮ್ ಅಲ್ಲಿ ಹುರಿಯಿರಿ. 
ಹೈ ಫ್ಲೇಮ್ ಅಲ್ಲಿ ತರಕಾರಿ ಯನ್ನು ಹುರಿದರೆ ಅದು crispy  ಆಗಿರುತ್ತೆ. 

4) ಮೊಟ್ಟೆ ಅನ್ನು ಒಡೆದು ಹಾಕಿ ಹಸಿ ವಾಸನೆ ಹೋಗೋವರೆಗೆ ಚೆನ್ನಾಗಿ ಹುರಿಯಿರಿ. 




5) ಸ್ವಲ್ಪ ಗರಂ ಮಸಾಲಾ ಹಾಕಿ ಫ್ರೈ ಮಾಡಿ 



6) ನಂತರ ಬೇಯಿಸಿರುವ ಅನ್ನ, ಪೆಪ್ಪರ್ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲ ಸೇರಿಸಿ ಚೆನ್ನಾಗಿ ಕಲಸಿ. 



7) ಚೈನೀಸ್ ಸ್ಟೈಲ್ ಅಲ್ಲಿ ಮಾಡೋ ಹಾಗಿದ್ರೆ ನಿಮ್ಮ ಹತ್ರ ಇರುವ ಸೌಸೆ ಗಳು ಹಾಕಬಹುದು.
ಇಲ್ಲಾಂದ್ರೆ ನಿಂಬೆ ಜ್ಯೂಸ್ ಹಾಕಿ  ಮಿಕ್ಸ್ ಮಾಡಿ. ಹೈ ಫ್ಲೇಮ್ ಅಲ್ಲಿ ೪-೫ ನಿಮಿಷ ಫ್ರೈ ಮಾಡಿ ಓಲೆ ಆರಿಸಿರಿ. 




8) ಈಗ ಎಗ್ ಫ್ರೈಡ್ ರೈಸ್ ತಿನ್ನಲು ರೆಡಿ ಆಗಿದೆ . ನಿಮ್ ಹತ್ರ ಇರುವ ಟೊಮೇಟೊ ಸಾಸ್, ಚಿಲ್ಲಿ ಸಾಸ್ ಜೊತೆ ಸರ್ವ್ ಮಾಡಿ. ಇದು  ಬಿಸಿ  ಇರುವಾಗಲೇ ತಿಂದರೆ ಚೆನ್ನ .. 






                                                   



Article tags: #Egg fried rice, #Egg fried rice maduva vidhana, #Prepare Egg fried rice with available vegetables and egg at home 


ಬೇಳೆ ಸಾರು । ದಾಲ್ ಸಾಂಬಾರ್ ಮಾಡುವ ವಿಧಾನ | Easy Toor Dal Sambar recipe in Kannada | ಸುಲಭವಾದ ಬೇಳೆ ಸಾಂಬಾರ್ ಮಾಡುವ ವಿಧಾನ ಕನ್ನಡದಲ್ಲಿ

 ಬೇಳೆ ಸಾರು   । ದಾಲ್ ಸಾಂಬಾರ್ ಮಾಡುವ ವಿಧಾನ 



ಬೇಕಾಗುವ ಸಾಮಗ್ರಿಗಳು:

ಬೇಳೆ- 1 ಕಪ್
ನೀರು-2 ಕಪ್

ಒಗ್ಗರಣೆಗೆ:
ಸಾಸಿವೆ-1 ಸಣ್ಣ ಟೀ ಸ್ಪೂನ್
ಕರಿಬೇವು - 2 ಕಡ್ಡಿ 
ಜೀರಿಗೆ -1 ಸಣ್ಣ ಟೀ ಸ್ಪೂನ್
ಈರುಳ್ಳಿ-1 
ಕೊತ್ತಂಬರಿ ಸೊಪ್ಪು- ಸ್ವಲ್ಪ 

ಬೆಳ್ಳುಳ್ಳಿ - 2,3 ಎಸಳು
ಶುಂಠಿ - 1 ಸ್ಪೂನ್ 
ಒಣ ಮೆಣಸಿನ ಕಾಯಿ -2
ಅರಿಶಿನ -1 ಚಿಟಿಕೆ
ತುಪ್ಪ - 1-2 ಸ್ಪೂನ್ 
ಹಿಂಗು - 1 ಚಿಟಿಕೆ 

ದಾಲ್ 
ಸಾರು ಮಾಡುವ ವಿಧಾನ:

ಮಾಡುವ ವಿಧಾನ :
1) ಪ್ರೆಷರ್ ಕುಕ್ಕರ್ ನಲ್ಲಿ ಬೇಳೆ,ನೀರು ಹಾಕಿ 2 ವಿಸಲ್ ಬರುವ ವರೆಗೆ ಬೇಯಲು ಬಿಡಿ. 

2) ಮತ್ತೊಂದು ಪಾತ್ರೆಯನ್ನು ಓಲೆ ಮೇಲಿಟ್ಟು ಕಾದ ನಂತರ ಸಾಸಿವೆ,ಜೀರಿಗೆ, ಎಣ್ಣೆ ಹಾಕಿ. 

3)ಸಾಸಿವೆ ಸಿಡಿಯಲು ಶುರುವಾದ ನಂತರ ಈರುಳ್ಳಿ, ಬೆಳ್ಳುಳ್ಳಿ,ಕರಿ ಬೇವು ,ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿಯಿರಿ. 

4) ಕೊನೆಯಲ್ಲಿ 1 ಚಿಟಿಕೆ ಹಿಂಗು ಹಾಕಿ.  

5)ನಂತರ ಬೆಂದಿರುವ ಬೇಳೆ ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಬಿಡಿ. (ಬೇಳೆಯನ್ನು ಬೇಕಿದ್ದರೆ ಸೌಟಿನಲ್ಲಿ ತಿರುವಿ ಮ್ಯಾಶ್  ಮಾಡಿಕೊಳ್ಳಿ). ಕೊನೆಯಲ್ಲಿ ತುಪ್ಪ, ಕೊತ್ತಂಬರಿ ಸೊಪ್ಪು  ಹಾಕಿಕೊಳ್ಳಿ 

6) ಈಗ ತುಂಬ ಸುಲಭವಾದ ಬೇಳೆ ಸಾರು ತಿನ್ನಲು ರೆಡಿ. ಇದನ್ನು ಅನ್ನ,ಮುದ್ದೆ, ಅಥವಾ ರೋಟಿ/ಚಪಾತಿಯ  ಜೊತೆ ತಿನ್ನಲು ಕೊಡಿ. ರೋಟಿ ಜೊತೆಗೆ ಬೇಳೆ ಕಟ್ಟು ಗಟ್ಟಿ ಇದ್ದರೆ ಚೆನ್ನ.


ಚಿಕನ್ ಪಕೋಡ | Chicken Pakoda Recipe in kannada | Crispy chicken Pakora Recipe | yummy chicken starters recipe in kannada

                                 ಚಿಕನ್ ಪಕೋಡ 

ಈ ಥರ ಚಿಕನ್ ಪಕೋಡ ನೀವು ಯಾವತ್ತಾದ್ರೂ ಮಾಡಿದ್ದೀರಾ? ಟ್ರೈ ಮಾಡಿ ಈ ಹೊಸ ರುಚಿ ।
ನೋಡಲು ಥೇಟ್ ಪಕೋಡ ಥರಾನೇ ಇರುತ್ತೆ !! ಮತ್ತು ತಿನ್ನಲು ಬಹಳಾ ರುಚಿ ಇದು....  

Bangada Fish fry Recipie in kannada | Bangda Fish fry - Easy n Delicious method (ಬಂಗುಡೆ ಮೀನಿನ ಫ್ರೈ) | How to prepare Bangda fish fry-steps by step process with pictures

 Bangda fish fry easy way |  ಬಂಗುಡೆ ಮೀನಿನ ಫ್ರೈ ಮಾಡುವ ವಿಧಾನ 



Bangda/Bangude Fish Fry Recipe is one of the easiest and quickest fish fry recipes.  Read and learn how to do Bangude fry recipe in Kannada.

How to make Fish Tava fry in Kannada /Quick Fish recipes in Kannada/ Spicy and tastier Fish Fry Recipe in Kannada

Tomato Gojju(ಟೊಮೇಟೊ ಗೊಜ್ಜು) | ಟೊಮೇಟೊ ಗೊಜ್ಜು ಮಾಡುವ ವಿಧಾನ ಕನ್ನಡ ದಲ್ಲಿ:

 ಟೊಮೇಟೊ ಗೊಜ್ಜು ಮಾಡುವ ವಿಧಾನ ಕನ್ನಡ ದಲ್ಲಿ:


ಬೇಕಾಗುವ ಸಾಮಗ್ರಿಗಳು:

ಟೊಮೇಟೊ-೨-೩
ಈರುಳ್ಳಿ-೧. 
ಮೆಣಸಿನ ಕಾಯಿ-೨-೩

ಒಗ್ಗರಣೆಗೆ:

ಎಣ್ಣೆ-೨ ಸ್ಪೂನ್ 
ಸಾಸಿವೆ 
ಕಡ್ಲೆ ಕಾಳು
ಜೀರಿಗೆ 
ಕರಿ ಬೇವು 

ಮಾಡುವ ವಿಧಾನ:
ಈರುಳ್ಳಿ,ಟೊಮೇಟೊ ಅನ್ನು ಸಣ್ಣಗೆ ಗೆ ಹೆಚ್ಚಿ ರೆಡಿ ಮಾಡಿಕೊಳ್ಳಿ. 

ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಹಾಕಿ ಸಿಡಿಯಲು ಬಿಡಿ. ಅದಕ್ಕೆ ಕಡ್ಲೆ ಕಾಳು, ಜೀರಿಗೆ, ಕರಿ ಬೇವು ಹಾಕಿ. 
ನಂತರ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. 

ನಂತರ ಟೊಮೇಟೊ ಹಾಕಿ ಚೆನ್ನಾಗಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 

ಈಗ ಟೊಮೇಟೊ ಗೊಜ್ಜು ರೆಡಿ. 




ಚಪಾತಿ /ರೊಟ್ಟಿ/ಅಥವಾ ಅನ್ನದ  ಜೊತೆ ಇದನ್ನು ತಿನ್ನಬಹುದು. 

Methi Egg Bhurji(ಮೆಂತ್ಯ ಮೊಟ್ಟೆ ಬುರ್ಜಿ) Recipe | Easy Egg Burji recipe in Kannada | Mentya soppu mattu motteya palya




ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1
ಮೆಂತ್ಯ ಸೊಪ್ಪು - 2 ಕಟ್ಟು 
ಹಸಿ ಮೆಣಸಿನ ಕಾಯಿ- 2-3
ಎಣ್ಣೆ - 2-3 spoon
ಮೊಟ್ಟೆ - 4


ಮಾಡುವ ವಿಧಾನ:

1. 
ಮೆಂತ್ಯ ಸೊಪ್ಪನ್ನು ಚೆನ್ನಾಗಿ ಸೋಸಿ ತೊಳೆದು ತುಂಡರಿಸಿ ಇಟ್ಟುಕೊಳ್ಳಿ 



2. ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ,ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ.





2. ಈರುಳ್ಳಿ ಬೆಂದ ನಂತರ ರುಚಿಗೆ ಉಪ್ಪು ಹಾಕಿ. ನಂತರ ಮೆಂತ್ಯ ಸೊಪ್ಪು ಹಾಕಿ ಹುರಿಯಿರಿ.



3. ಸೊಪ್ಪಿನಲ್ಲಿರುವ ನೀರು ಇಂಗಬೇಕು. ಸೊಪ್ಪು ಬೆಂದ ಮೇಲೆ ಮೊಟ್ಟೆ ಯನ್ನು ಒಡೆದು  ಬಾಣಲೆಗೆ ಸುರಿದು ಚೆನ್ನಾಗಿ ತಿರುವಿತ್ತಿರಿ.


4. ನೀರಿನ ಅಂಶ ಆರಿ, ಸ್ವಲ್ಪ ಮೊಟ್ಟೆ ಯ ಬಣ್ಣ ಕಂದು ಮಿಶ್ರಿತ ಬಣ್ಣ ಬರೋವರೆಗೆ ತಿರುವಿ.




5. ಈಗ ಮೆಂತ್ಯ ಮೊಟ್ಟೆ ಪಲ್ಯ ತಿನ್ನಲು ರೆಡಿ