Oyster mushroom fry | ಆಯ್ ಸ್ಟರ್ ಮಶ್ರೂಮ್ ಫ್ರೈ | try this different mashroom fry recipe

 ಆಯ್ ಸ್ಟರ್ ಮಶ್ರೂಮ್ ಫ್ರೈ :





ಬೇಕಾಗುವ ಸಾಮಗ್ರಿಗಳು:

ಆಯ್ ಸ್ಟರ್ ಮಶ್ರೂಮ್ -250 grams
ಈರುಳ್ಳಿ-2
ಹಸಿರು ಮೆಣಸಿನ ಕಾಯಿ-4-5
ಅರಿಶಿನ- 1 ಟೀ ಸ್ಪೂನ್
ಗರಂ ಮಸಾಲಾ -1 ಸ್ಪೂನ್
ಧನಿಯಾ ಪೌಡರ್-1 ಸ್ಪೂನ್
ಚಿಲ್ಲಿ ಪೌಡರ್-1 ಸ್ಪೂನ್
ಉಪ್ಪು-ರುಚಿಗೆ ತಕ್ಕಷ್ಟು
ಸಾಸಿವೆ-1 ಟೀ ಸ್ಪೂನ್
ಉದ್ದಿನ ಕಾಳು -1 ಟೀ ಸ್ಪೂನ್

ಮಾಡುವ ವಿಧಾನ :
 ಆಯ್ ಸ್ಟರ್ ಮಶ್ರೂಮ್ ಅನ್ನು ಕೈಲಿ ಹರಿದು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಇಡಿ.




ಬಾಣಲೆಗೆ ಎಣ್ಣೆ ಸಾಸಿವೆ, ಉದ್ದಿನ ಕಾಲು ಹಾಕಿ ಸಣ್ಣಗೆ ಬಾಡಿಸಿ. 


ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ,ಮೆಣಸಿನ ಕಾಯಿ,ಕರಿ ಬೇವು  ಹಾಕಿ ಕಂದು ಬಣ್ಣಗೆ ಬರುವವರೆಗೆ ಹುರಿಯಿರಿ.

ನಂತರ ಕರಿ ಬೇವು,ಅರಿಶಿನ  ಹಾಕಿ ತಿರುವಿ. . 

ನಂತರ ಅದಕ್ಕೆ ಆಯ್ಸ್ ಸ್ಟರ್ ಮಶ್ರೂಮ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಧನಿಯಾ ಪೌಡರ್,ರುಚಿಗೆ ತಕ್ಕಷ್ಟು ಉಪ್ಪು  ಹಾಕಿ ಕಲಸಿ, ಚೆನ್ನಾಗಿ ಬೇಯಲು ಬಿಡಿ.


ಈಗ ಆಯ್ ಸ್ಟರ್ ಮಶ್ರೂಮ್ ಫ್ರೈ ತಿನ್ನಲು ರೆಡಿ.




ನೀರನ್ನು ಪೂರ್ತಿ ಇಂಗಿಸಿ  ಡ್ರೈ ಫ್ರೈ ತರವು ಇದನ್ನು ತಯಾರಿಸಬಹುದು