How to make Healthy high protein Soya beans curry recipe in kannada | ಸೋಯಾ ಬೀನ್ಸ್ ಗೊಜ್ಜು ರೆಸಿಪಿ


        ಸೋಯಾ ಬೀನ್ಸ್ ಗೊಜ್ಜು ರೆಸಿಪಿ  


 

ಸೋಯಾ ಬೀನ್ಸ್ ಹೆಚ್ಚು ಪ್ರೊಟೀನ್ ಯುಕ್ತ ಕಾಳು.  ಸೋಯಾ ಫುಡ್ ಯಿಂದ ಹೃದಯ ಸಂಬಂಧಿ ಖಾಯಿಲೆ,ಸ್ಟ್ರೋಕ್  ಮತ್ತಿತರ ಖಾಯಿಲೆಗಳ  ರಿಸ್ಕ್ ಕಡಿಮೆ ಆಗುತ್ತೆ ಡಯಟ್ ಆಹಾರ ಕೂಡ ಇದಾಗಿದೆ. 

ಸೋಯಾ ಬೀನ್ಸ್ ಬಳಸಿ ಕರಿ, ಗೊಜ್ಜು ಮಾಡುವ ವಿಧಾನ ನೋಡೋಣ ಬನ್ನಿ. 


ಬೇಕಾಗುವ ಸಾಮಗ್ರಿಗಳು:

ಸೋಯಾ ಬೀನ್ಸ್: 1 ಲೋಟ
ಈರುಳ್ಳಿ-2
ಟೊಮಾಟೊ-1
ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಸ್ಪೂನ್
ಗರಂ ಮಸಾಲ ಪುಡಿ- 1 ಸ್ಪೂನ್
ಕೆಂಪು ಮೆಣಸಿನ ಪುಡಿ-1 ಸ್ಪೂನ್
ಉಪ್ಪು- ರುಚಿ ಗೆ ತಕ್ಕಷ್ಟು

ಮಾಡುವ ವಿಧಾನ:
1) ಸೋಯಾ ಬೀನ್ಸ್ ಅನ್ನು ತೊಳೆದು ನೀರಲ್ಲಿ 1 ರಾತ್ರಿ ನೆನೆಯಲು ಬಿಡಿ. 

2) ಸೋಯಾ ಬೀನ್ಸ್ ಅನ್ನು ಪ್ರೆಷರ್ ಕುಕ್ಕರ್ ಅಲ್ಲಿ 3-4 ವಿಷಲ್ ವರೆಗೆ ಬೇಯಿಸಿ ತೆಗೆದಿಡಿ. 

3) ಮಿಕ್ಸಿಯಲ್ಲಿ 1 ಈರುಳ್ಳಿ, ಟೊಮೇಟೊ ರುಬ್ಬಿ ಎತ್ತಿಡಿ. 

4) 1 ಬಾಣಲೆಯಲ್ಲಿ ಕಾಯಿಸಿ, 2 ಸ್ಪೂನ್ ಎಣ್ಣೆ ಹಾಕಿ. 

5) ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 

6) ನಂತರ ಟೊಮೇಟೊ ಈರುಳ್ಳಿಯ ರುಬ್ಬಿಕೊಂಡಿರುವ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ . 

7) ನಂತರ ಅರಿಶಿನ ಪೌಡರ್, ಮೇಲೆ ತಿಳಿಸಿರುವ ಎಲ್ಲಾ ಮಸಾಲಾ ಪೌಡರ್ ಹಾಕಿ ಚೆನ್ನಾಗಿ ಕಲಸಿರಿ 

8) ನಂತರ ಬೇಯಿಸಿರುವ ಸೋಯಾ ಬೀನ್ಸ್ ಅನ್ನು ಹಾಕಿ 5 ನಿಮಿಷ ಬೇಯಲು ಬಿಡಿ. 

9) ಮಸಾಲಾ ಕುದಿಯಲು ಶುರುವಾದಾಗ ಸಣ್ಣಗೆ ಕತ್ತರಿಸಿರುವ ಕೊತ್ತಂಬರಿ ಸೊಪ್ಪು ಹಾಕಿ. 

10) ಈಗ ರುಚಿಯಾದ, ಪೌಷ್ಠಿಕವಾದ ಸೋಯಾ ಬೀನ್ಸ್ ಕರಿ ತಿನ್ನಲು ರೆಡಿ . 
ಇದನ್ನು ಚಪಾತಿ, ರೋಟಿ,ದೋಸೆ, ಅನ್ನ ಯಾವುದಾದ್ರೂ ಜೊತೆಗೆ ತಿನ್ನಲು ಕೊಡಿ