How to prepare Instant puliogre rice in Kannada | ಧಿಡೀರ್ ಪುಳಿಯೊಗರೆ ಮಾಡುವ ವಿಧಾನ | Quick food recipes for beginners

 


ಲಾಕ್ಡೌನ್ , ಕೊರೊನ ದ ಕಾರಣದಿಂದ ಹೊರಗೆ ಹೋಟೆಲ್ ಗಳಲ್ಲಿ,ಮೆಸ್ ಗಳಲ್ಲಿ ಊಟ ಮಾಡಲು ಸಾಧ್ಯವಿಲ್ಲ. ಅದು ಸೇಫ್ ಕೂಡ ಅಲ್ಲ. ಇದರಿಂದ  ಕೆಲಸಕ್ಕಾಗಿ ಬೆಂಗಳೂರು ಮೈಸೂರ್ ನಂಥ ಊರಿಗೆ ಹೋಗಿ ಕೆಲಸ ಮಾಡ್ತಾ ಇರೋ ಎಷ್ಟೋ ಮಂದಿಗೆ ಅಡುಗೆ ಮಾಡಿ ಕೊಳ್ಳುವುದು  ತಲೆ ನೋವಾಗಿರುತ್ತದೆ.

ಇದೇ ಕಾರಣ ಅಲ್ಲದಿದ್ರೂ ಹೊರಗೆ ಕೆಲಸಕ್ಕಾಗಿ ಉಳಿಯುವ ಎಷ್ಟೋ ಮಂದಿಗೆ ಬೇರೆ ಸಮಯದಲ್ಲೂ ಸಾಮಾನ್ಯ ಅಡುಗೆ ಮಾಡುವ ವಿಧಾನ ಗೊತ್ತಿದ್ರೆ ತುಂಬಾ ಅನುಕೂಲಕರ.

ಅಂಥವರಿಗೆ  quick and easy recipe ವಿಧಾನಗಳು ಇಲ್ಲಿವೆ.


ಅಡುಗೆ1: ಪುಳಿಯೊಗರೆ: 
ಬೇಕಾಗುವ ಸಾಮಗ್ರಿಗಳು:

ಮಾಡಲು ಬೇಕಾಗುವ ಸಮಯ: 5 ನಿಮಿಷ 

ಅನ್ನಕ್ಕೆ - 1/2 ಲೋಟ ಅಕ್ಕಿ
ರುಚಿಗೆ ಉಪ್ಪು           
ಎಣ್ಣೆ- 2 ಸ್ಪೂನ್
MTR ಪುಳಿಯೋಗರೆ ಪೌಡರ್- ಅಥವಾ ಬೇರೆ ಯಾವದಾದರೂ ನಿಮ್ಮ
favorite ಪೌಡರ್


1) ಒಂದು ಪಾತ್ರೆ ತೆಗೆದುಕೊಂಡು ಒಲೆಯಲ್ಲಿ ಇಟ್ಟು, ಓಲೆ ಹಚ್ಚಿ.

2) 2 ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ 2 ನಿಮಿಷ ಕಾಯಲು ಬಿಡಿ.

3) ಒಂದು ವೇಳೆ ನಿಮ್ಮ ಬಳಿ ಸಾಸಿವೆ, ಕರಿಬೇವು,ಕಡ್ಲೆ ಬೀಜ, ಒಣ ಮೆಣಸಿನ ಕಾಯಿ ನಿಮ್ಮ ಬಳಿ ಇದ್ದರೆ ಪೌಡರ್ ಹಾಕುವ ಮುನ್ನ ಅದನ್ನು ಹಾಕಿ 2 ನಿಮಿಷ ಹುರಿಯಿರಿ.

4)ಕಾದ ಮೇಲೆ MTR ಅಥವಾ ಬೇರೆ ಯಾವುದಾದ್ರೂ ರೆಡಿ powder  2-3 ಸ್ಪೂನ್ ಹಾಕಿ. ಚೆನ್ನಾಗಿ ಕಲಸಿ.2-3 ನಿಮಿಷ ಹುರಿಯಿರಿ.  ಈಗ  ಪುಳಿಯೋಗರೆ ಗೊಜ್ಜು ರೆಡಿ.

5) ಇದಕ್ಕೆ ಮಾಡಿಟ್ಟಿರುವ  ಅನ್ನ ಹಾಕಿ ಕಲಸಿ. ಅನ್ನ ಕ್ಕೆ ಉಪ್ಪು ಹಾಕಿಲ್ಲವಾದರೆ, ಚಿಟಿಕೆ ಉಪ್ಪು ಹಾಕಿ ಕಲಸಿಕೊಳ್ಳಿ.


6) ಈಗ ಪುಳಿಯೋಗರೆ ರೈಸ್ ತಿನ್ನಲು ರೆಡಿ.



(Note: ಈ ಪುಡಿಯಲ್ಲೇ ಎಳ್ಳು, ಕಡ್ಲೆ ಬೀಜ,ಕಾಯಿ ತುರಿ, ಬೆಲ್ಲ, ಹುಣಸೆ ಹುಳಿ ಎಲ್ಲ ಸೇರಿರುರತ್ತೆ. so, ನೀವು ಏನನ್ನು ಹೆಚ್ಚಾಗಿ ಹಾಕುವ ಅಗತ್ಯ ಇಲ್ಲ)




ಅನ್ನ ಮಾಡುವ ವಿಧಾನ:

ಅನ್ನ ಮಾಡಲು ಬೇಕಾಗುವ ಸಮಯ: 15-20 ನಿಮಿಷ 

1) ಒಂದು ಪಾತ್ರೆಯಲ್ಲಿ 1 ಲೋಟ ಅಕ್ಕಿ ತೆಗೆದು ಕೊಳ್ಳಿ
2) ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
3) ಅದಕ್ಕೆ 2 ಲೋಟ ನೀರು ಹಾಕಿ  , 1/2 ಸ್ಪೂನ್ ಉಪ್ಪು ಹಾಕಿ ಅಕ್ಕಿ ಬೇಯಲು ಬಿಡಿ(1ಲೋಟ  ಅಕ್ಕಿಗೆ, 2 ಲೋಟ ನೀರಿನ ಪ್ರಮಾಣ ).
4) ಕುಕ್ಕರ್ ಇದ್ರೆ, ಕುಕ್ಕರ್ ಗೆ  ಅಕ್ಕಿ ಹಾಕಿ,ನೀರು ಹಾಕಿ  ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ ಅನ್ನ ಬೇಯಲು ಬಿಡಿ . 2 ವಿಶಲ್ ಬಂದ್ರೆ ಅನ್ನ ಬೆಂದು ರೆಡಿ ಆಗಿರುತ್ತೆ.

5) ಕುಕ್ಕರ್ ಇಲ್ಲಾಂದ್ರೆ, ಮಧ್ಯಮ ಉರಿಯಲ್ಲಿ ಮುಚ್ಚಳ ತೆಗೆದು ಅನ್ನ ಬೇಯಲು ಬಿಡಿ. 10 ನಿಮಿಷದ ನಂತರ ಅಥವಾ ಅರ್ಧ ಬೆಂದ ಮೇಲೆ ಮುಚ್ಚಳ ಮುಚ್ಚಿ ಅನ್ನ ಬೇಯಲು ಬಿಡಿ.

6) ಅನ್ನ ಬೆಂದಿದೆ ಅಂತ ನೋಡಲು, ಸ್ಪೂನ್ ಅಲ್ಲಿ ಸ್ವಲ್ಪ ಅನ್ನ ತೆಗೆದು ಕೈಯಲ್ಲಿ ಹಿಸಿಕಿ ನೋಡಿ.ಅದು ಚೆನ್ನಾಗಿ ಹಿಸಿಕಿ ಹೋದರೆ ಅನ್ನ ಆಗಿದೆ ಎಂದರ್ಥ.

7) ನೀರು ಕಡಿಮೆ ಆಗಿದ್ರೆ ಸ್ವಲ್ಪ ಬಿಸಿ ನೀರು ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.
8) 15-20 ನಿಮಿಷದಲ್ಲಿ ಅನ್ನ ರೆಡಿ ಆಗಿರುತ್ತೆ