ಪನೀರ್ ಟಿಕ್ಕಾ:
ಬೇಕಾಗುವ ಸಾಮಗ್ರಿಗಳು:
ಪನೀರ್
ಈರುಳ್ಳಿ -1
ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ)-1
ಪೇಸ್ಟ್ ಗೆ:
ಮೊಸರು : 3-4ಸ್ಪೂನ್
ಗರಂ ಮಸಾಲಾ -1 ಸ್ಪೂನ್
ಅಚ್ಚ ಖಾರದ ಪುಡಿ - 1 ಸ್ಪೂನ್
ಉಪ್ಪು -ರುಚಿಗೆ
ಧನ್ಯ ಪುಡಿ -1 ಸ್ಪೂನ್
ಮಾಡುವ ವಿಧಾನ:
ಪೇಸ್ಟ್ ತಯಾರಿಸುವ ವಿಧಾನ:
ಬಟ್ಟಲಿನಲ್ಲಿ ಮೊಸರು, ಗರಂ ಮಸಾಲಾ,ಅಚ್ಚ ಖಾರದ ಪುಡಿ, ಧನ್ಯ ಪುಡಿ, ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ
ಪನೀರ್, ಈರುಳ್ಳಿ, ದಪ್ಪ ಮೆಣಸಿನ ಕಾಯಿ ಎಲ್ಲವನ್ನು ಸಮ ಆಕಾರದಲ್ಲಿ ಕತ್ತರಿಸಿ.
ನಂತರ ತಯಾರಿಸಿರುವ ಪೇಸ್ಟ್ ಒಳಗೆ ಹಾಕಿ ಚೆನ್ನಾಗಿ ಕಲಸಿ.
ಅದನ್ನು 30 ನಿಮಿಷದವರೆಗೆ ಹೊಂದಲು ಬಿಡಿ.
ನಂತರ ತವಾದಲ್ಲಿ 2-3 ಸ್ಪೂನ್ ಎಣ್ಣೆ ಹಾಕಿ ಪನೀರ್ ಈರುಳ್ಳಿ, ಕ್ಯಾಪ್ಸಿಕಂ ಎಲ್ಲವನ್ನು ಚೆನ್ನಾಗಿ ಫ್ರೈ ಮಾಡಿ.