ಬೇಳೆ ಸಾರು । ದಾಲ್ ಸಾಂಬಾರ್ ಮಾಡುವ ವಿಧಾನ | Easy Toor Dal Sambar recipe in Kannada | ಸುಲಭವಾದ ಬೇಳೆ ಸಾಂಬಾರ್ ಮಾಡುವ ವಿಧಾನ ಕನ್ನಡದಲ್ಲಿ

 ಬೇಳೆ ಸಾರು   । ದಾಲ್ ಸಾಂಬಾರ್ ಮಾಡುವ ವಿಧಾನ 



ಬೇಕಾಗುವ ಸಾಮಗ್ರಿಗಳು:

ಬೇಳೆ- 1 ಕಪ್
ನೀರು-2 ಕಪ್

ಒಗ್ಗರಣೆಗೆ:
ಸಾಸಿವೆ-1 ಸಣ್ಣ ಟೀ ಸ್ಪೂನ್
ಕರಿಬೇವು - 2 ಕಡ್ಡಿ 
ಜೀರಿಗೆ -1 ಸಣ್ಣ ಟೀ ಸ್ಪೂನ್
ಈರುಳ್ಳಿ-1 
ಕೊತ್ತಂಬರಿ ಸೊಪ್ಪು- ಸ್ವಲ್ಪ 

ಬೆಳ್ಳುಳ್ಳಿ - 2,3 ಎಸಳು
ಶುಂಠಿ - 1 ಸ್ಪೂನ್ 
ಒಣ ಮೆಣಸಿನ ಕಾಯಿ -2
ಅರಿಶಿನ -1 ಚಿಟಿಕೆ
ತುಪ್ಪ - 1-2 ಸ್ಪೂನ್ 
ಹಿಂಗು - 1 ಚಿಟಿಕೆ 

ದಾಲ್ 
ಸಾರು ಮಾಡುವ ವಿಧಾನ:

ಮಾಡುವ ವಿಧಾನ :
1) ಪ್ರೆಷರ್ ಕುಕ್ಕರ್ ನಲ್ಲಿ ಬೇಳೆ,ನೀರು ಹಾಕಿ 2 ವಿಸಲ್ ಬರುವ ವರೆಗೆ ಬೇಯಲು ಬಿಡಿ. 

2) ಮತ್ತೊಂದು ಪಾತ್ರೆಯನ್ನು ಓಲೆ ಮೇಲಿಟ್ಟು ಕಾದ ನಂತರ ಸಾಸಿವೆ,ಜೀರಿಗೆ, ಎಣ್ಣೆ ಹಾಕಿ. 

3)ಸಾಸಿವೆ ಸಿಡಿಯಲು ಶುರುವಾದ ನಂತರ ಈರುಳ್ಳಿ, ಬೆಳ್ಳುಳ್ಳಿ,ಕರಿ ಬೇವು ,ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿಯಿರಿ. 

4) ಕೊನೆಯಲ್ಲಿ 1 ಚಿಟಿಕೆ ಹಿಂಗು ಹಾಕಿ.  

5)ನಂತರ ಬೆಂದಿರುವ ಬೇಳೆ ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಬಿಡಿ. (ಬೇಳೆಯನ್ನು ಬೇಕಿದ್ದರೆ ಸೌಟಿನಲ್ಲಿ ತಿರುವಿ ಮ್ಯಾಶ್  ಮಾಡಿಕೊಳ್ಳಿ). ಕೊನೆಯಲ್ಲಿ ತುಪ್ಪ, ಕೊತ್ತಂಬರಿ ಸೊಪ್ಪು  ಹಾಕಿಕೊಳ್ಳಿ 

6) ಈಗ ತುಂಬ ಸುಲಭವಾದ ಬೇಳೆ ಸಾರು ತಿನ್ನಲು ರೆಡಿ. ಇದನ್ನು ಅನ್ನ,ಮುದ್ದೆ, ಅಥವಾ ರೋಟಿ/ಚಪಾತಿಯ  ಜೊತೆ ತಿನ್ನಲು ಕೊಡಿ. ರೋಟಿ ಜೊತೆಗೆ ಬೇಳೆ ಕಟ್ಟು ಗಟ್ಟಿ ಇದ್ದರೆ ಚೆನ್ನ.