ಈರುಳ್ಳಿ ಚಟ್ನಿ ಮಾಡುವ ವಿಧಾನ ಕನ್ನಡ ದಲ್ಲಿ:
ಮನೆಯಲ್ಲಿ ಚಟ್ನಿ ಮಾಡಲು ಕಾಯಿ, ಟೊಮೇಟೊ ಏನೂ ಇಲ್ಲದ ಸಮಯದಲ್ಲಿ ನೀವು ಈರುಳ್ಳಿ ಚಟ್ನಿ ಮಾಡಬಹುದು.
ಈ ಚಟ್ನಿ ನೋಡಲು ಟೊಮೇಟೊ ಚಟ್ನಿ ಹಾಗೆ ಕಾಣುತ್ತೆ.
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ- 2
ಬೆಳ್ಳುಳ್ಳಿ- 1-2 ಎಸಳು
ಕಡ್ಲೆ ಬೇಳೆ/ಉದ್ದಿನ ಬೇಳೆ - 1 spoon
ಕಡ್ಲೆ ಬೇಳೆ/ಉದ್ದಿನ ಬೇಳೆ - 1 spoon
ಒಣ ಮೆಣಸಿನ ಕಾಯಿ -2-3
ಬ್ಯಾಡಗಿ ಮೆಣಸಿನ ಕಾಯಿ -2-3
ಉಪ್ಪು - ರುಚಿಗೆ ತಕ್ಕಷ್ಟು
ಜೀರಿಗೆ - 1/2 spoon
ಹುಣಸೆ ಹಣ್ಣು - 1 tbl spoon
ಜೀರಿಗೆ - 1/2 spoon
ಹುಣಸೆ ಹಣ್ಣು - 1 tbl spoon
ಎಣ್ಣೆ - 1 spoon
ಮಾಡುವ ವಿಧಾನ:
1. ಬಾಣಲೆ ಬಿಸಿಯಾಗಲು ಬಿಟ್ಟು,ಎಣ್ಣೆ ಹಾಕಿ ಸಾಸಿವೆ,ಜೀರಿಗೆ ಹಾಕಿ . ನಂತರ ಕಡ್ಲೆ ಬೇಳೆ ಹಾಕಿ ಸ್ವಲ್ಪ ಹುರಿಯಿರಿ.
2. ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು ಮೆಣಸಿನ ಕಾಯಿ, ಚಿಟಿಕೆ ಅರಿಶಿಣ ಹಾಕಿ ಹುರಿಯಿರಿ.ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
3. ಈ ಗೊಜ್ಜನ್ನು ಆರಲು ಸ್ವಲ್ಪ ಹೊತ್ತು ಬಿಟ್ಟು ಮಿಕ್ಸಿ ಗೆ ಹಾಕಿ ರುಬ್ಬಿರಿ.
5. ಈಗ ಈರುಳ್ಳಿ ಚಟ್ನಿ ರೆಡಿ.
ಇದನ್ನು ಚಪಾತಿ/ ರೊಟ್ಟಿ/ ಅಥವಾ ದೋಸೆಯ ಜೊತೆ ತಿನ್ನಲು ಕೊಡಿ. ಇದನ್ನು ಅನ್ನದ ಜೊತೆ ಕೂಡ ತಿನ್ನಬಹುದು