ಪೆಪ್ಪರ್ ಚಿಕನ್ ಡ್ರೈ :
ಬೇಕಾಗುವ ಸಾಮಗ್ರಿಗಳು:
ಚಿಕನ್ : ೨೫೦ grams
ಈರುಳ್ಳಿ-೨
ಹಸಿ ಮೆಣಸಿನ ಕಾಯಿ-೪
ಟೊಮೇಟೊ-೧
ಶುಂಠಿ ಬೆಳ್ಳುಳ್ಳಿ ಪೇಸ್ಟ್ -೧ ಸ್ಪೂನ್
ಅರಿಶಿನ- ೧ ಟೀ ಸ್ಪೂನ್
ಗರಂ ಮಸಾಲಾ- ೧ ಸ್ಪೂನ್
ಕೆಂಪು ಮೆಣಸಿನ ಪುಡಿ -೧ ಸ್ಪೂನ್
ಕಾಳು ಮೆಣಸಿನ ಪುಡಿ -೧ ಸ್ಪೂನ್
ಮಾಡುವ ವಿಧಾನ:
ಚಿಕನ್ ಅನ್ನು ತೊಳೆದು ಸ್ವಲ್ಪ ಉಪ್ಪು, ಅರಿಶಿನ ಹಾಕಿ ನೆನೆಸಿಡಿ.
೧ ಬಾಣಲೆಗೆ ೧ ಸ್ಪೂನ್ ಎಣ್ಣೆ ಹಾಕಿ.ಸಣ್ಣಗೆ ಹಚ್ಚಿದ ಈರುಳ್ಳಿ,ಮೆಣಸಿನ ಕಾಯಿ ಹಾಕಿ ಬಾಡಿಸಿ.
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬೇಯಿಸಿ.
ಟೊಮಾಟೊ ಹಾಕಿ ಬೇಯಿಸಿ. ಟೊಮಾಟೊ ಬೆಂದ ನಂತರ ಅದಕ್ಕೆ ಗರಂ ಮಸಾಲಾ ಚಿಲ್ಲಿ ಪೌಡರ್, ಧನ್ಯ ಪುಡಿ ಅರಿಶಿನ ಹಾಕಿ ಕಲಸಿ.
ನಂತರ ಚಿಕನ್ ಹಾಕಿ ಕಲಸಿ, ಮುಚ್ಚಳ ಮುಚ್ಚಿ ಬೇಯಿಸಿ ಚೆನ್ನಾಗಿ ಬೇಯಿಸಿ.
ಬೆಂದ ನಂತರ ಕೊನೆಯಲ್ಲಿ ಪೆಪ್ಪರ್ ಪೌಡರ್ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ಪೆಪ್ಪರ್ ಚಿಕನ್ ತಿನ್ನಲು ರೆಡಿ.