How to prepare Vegetable Upma-ತರಕಾರಿ ಉಪ್ಪಿಟ್ಟು | Easy morning breakfasts | South Indian Breakfast items

 Vegetable Upma-ತರಕಾರಿ ಉಪ್ಪಿಟ್ಟು




ಬೇಕಾಗುವ ಸಾಮಗ್ರಿಗಳು :

ರವೆ - 1 glass 
ಈರುಳ್ಳಿ -2
ಟೊಮೇಟೊ -1 or 2
ಮೆಣಸಿನ ಕಾಯಿ-3-4
ಕಡ್ಲೆ ಕಾಳು -1 spoon
ಹೆಸರು ಬೇಳೆ -1spoon
ಉದ್ದಿನ ಬೇಳೆ -1 spoon

ತರಕಾರಿ- 1 ಅಥವಾ  2 ಕಪ್ (ಬೀನ್ಸ್,ಕ್ಯಾರಟ್, ಆಲೂಗಡ್ಡೆ ಸಣ್ಣಗೆ ಕತ್ತರಿಸಿಡಿ)

ಕರಿಬೇವು - 2ಕಡ್ಡಿ
ಸಾಸಿವೆ - 1 ಟೇಬಲ್ spoon
ಎಣ್ಣೆ -3 spoons

ಮಾಡುವ ವಿಧಾನ: 
1) ರವೆ ಸ್ವಲ್ಪ ೧ ಸ್ಪೂನ್ ಎಣ್ಣೆಯಲ್ಲಿ ಹುರಿದು ಕೊಂಡು ಎತ್ತಿಡಿ. ಸಣ್ಣ ಉರಿಯಲ್ಲಿ ರವೇ ಹುರಿಯಿರಿ. 


2) ಬಾಣಲೆಯಲ್ಲಿ ಎಣ್ಣೆ, ಸಾಸಿವೆ,ಕರಿಬೇವು ಹಾಕಿ. ನಂತರ ಕಡ್ಲೆ ಕಾಳು, ಹೆಸರು ಬೇಳೆ,ಉದ್ದಿನ ಬೇಳೆ ಹಾಕಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.


 3) ನಂತರ ಕತ್ತರಿಸಿ ಇಟ್ಟುಕೊಂಡಿರುವ ತರಕಾರಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.ಹಸಿ ವಾಸನೆ ಹೋಗುವವರೆಗೆ  ೧೦ ನಿಮಿಷ ತರಕಾರಿ ಹುರಿಯ ಬೇಕಾಗುತ್ತೆ. 

 4) ನಂತರ ಟೊಮೇಟೊ ಹಾಕಿ ಹುರಿಯಿರಿ. .


5) ಇದಾದ ನಂತರ ರವೆಗೆ ಅಳತೆಗೆ ತಕ್ಕಂತೆ ನೀರು ಹಾಕಿ.ರುಚಿಗೆ ತಕ್ಕಂತೆ  ಉಪ್ಪು ಹಾಕಿ ಕುದಿಯಲು ಬಿಡಿ.
(1 ಲೋಟ ರವೆಗೆ 2 ಲೋಟ ನೀರು ಹಾಕಿರಿ. )

6) ಕುಡಿ ಬಂದ ಮೇಲೆ ಹಿರಿದು ಇಟ್ಟಿರುವ ರವೆ ಹಾಕಿ ಚೆನ್ನಾಗಿ ತಿರುವಿ. ಗಂಟು ಬರದ ಹಾಗೆ ತಿರುವಿ

ಈಗ ರವೆ ಉಪ್ಪಿಟ್ಟು ತಿನ್ನಲು ರೆಡಿ