spicy chicken pepper Fry recipe for spice lovers | ಪೆಪ್ಪರ್ ಚಿಕನ್ ಡ್ರೈ in Kannada | Non veg recipe in kannada

 

            ಪೆಪ್ಪರ್ ಚಿಕನ್ ಡ್ರೈ ರೆಸಿಪಿ ಕನ್ನಡ ದಲ್ಲಿ 



ಬೇಕಾಗುವ ಸಾಮಗ್ರಿಗಳು :

ಚಿಕನ್ -500grams

ಈರುಳ್ಳಿ -2
ಹಸಿ ಮೆಣಸಿನ ಕಾಯಿ -4
ಟೊಮೇಟೊ -1 or 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ -1 spoon

ಅರಿಶಿನ - 1 tea spoon
ಗರಂ ಮಸಾಲಾ - 1 spoon
ಕೆಂಪು ಮೆಣಸಿನ ಪುಡಿ - 1/2 spoon
ಕಾಳು ಮೆಣಸಿನ ಪೌಡರ್ - 2 spoon
ಧನ್ಯ ಪೌಡರ್ - 1 spoon
ಎಣ್ಣೆ - ೩-೪ spoon
ಉಪ್ಪು - ರುಚಿಗೆ ತಕ್ಕಷ್ಟು 


ಮಾಡುವ ವಿಧಾನ:

1. ಚಿಕನ್ ಅನ್ನು ಚೆನ್ನಾಗಿ ಅರಿಶಿನ ಉಪ್ಪು ಹಾಕಿ ತೊಳೆಯಿರಿ . 

2. ಫ್ರಯಿಂಗ್ ಪಾನ್ ಅನ್ನು ತೆಗೆದುಕೊಂಡು 2
 ಸ್ಪೂನ್ ಎಣ್ಣೆ ಹಾಕಿರಿ. ಅದಕ್ಕೆ ಉದ್ದಕ್ಕೆ ಕತ್ತರಿಸಿರುವ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ನಂತರ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. 

3.ನಂತರ ಟೊಮೇಟೊ ಹಾಕಿ ಹುರಿಯಿರಿ. ಟೊಮೇಟೊ ಬೆಂದ ನಂತರ ಗರಂ ಮಸಾಲಾ ಪೌಡರ್, ಕೆಂಪು ಮೆಣಸಿನ ಪೌಡರ್, ಧನ್ಯ ಪೌಡರ್,ಉಪ್ಪು ಹಾಕಿ ಹಸಿ ವಾಸನೆ ಹೋಗೋ ವರೆಗೆ ಹುರಿಯಿರಿ.
 
4. ನಂತರ ಚಿಕನ್ ಹಾಕಿ ಚೆನ್ನಾಗಿ ಕಲಸಿ ಮುಚ್ಚಳ  ಬೇಯಿಸಿರಿ. 

5.ಕೊನೆಗೆ ಕಾಳು ಮೆಣಸಿನ ಪೌಡರ್ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ ಅಲಂಕರಿಸಿ. 

6. ಈಗ ಪೆಪ್ಪರ್ ಚಿಕನ್ ತಿನ್ನಲು ರೆಡಿ.