ಟೊಮೇಟೊ ಗೊಜ್ಜು ಮಾಡುವ ವಿಧಾನ ಕನ್ನಡ ದಲ್ಲಿ:
ಬೇಕಾಗುವ ಸಾಮಗ್ರಿಗಳು:
ಟೊಮೇಟೊ-೨-೩
ಈರುಳ್ಳಿ-೧.
ಮೆಣಸಿನ ಕಾಯಿ-೨-೩
ಒಗ್ಗರಣೆಗೆ:
ಎಣ್ಣೆ-೨ ಸ್ಪೂನ್
ಸಾಸಿವೆ
ಕಡ್ಲೆ ಕಾಳು
ಜೀರಿಗೆ
ಕರಿ ಬೇವು
ಮಾಡುವ ವಿಧಾನ:
ಈರುಳ್ಳಿ,ಟೊಮೇಟೊ ಅನ್ನು ಸಣ್ಣಗೆ ಗೆ ಹೆಚ್ಚಿ ರೆಡಿ ಮಾಡಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ, ಸಾಸಿವೆ ಹಾಕಿ ಸಿಡಿಯಲು ಬಿಡಿ. ಅದಕ್ಕೆ ಕಡ್ಲೆ ಕಾಳು, ಜೀರಿಗೆ, ಕರಿ ಬೇವು ಹಾಕಿ.
ನಂತರ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಟೊಮೇಟೊ ಹಾಕಿ ಚೆನ್ನಾಗಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಈಗ ಟೊಮೇಟೊ ಗೊಜ್ಜು ರೆಡಿ.
ಚಪಾತಿ /ರೊಟ್ಟಿ/ಅಥವಾ ಅನ್ನದ ಜೊತೆ ಇದನ್ನು ತಿನ್ನಬಹುದು.