Tasty and colorful Masala Rice bath |Masala Rice bath recipe in kannada | ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ

 


ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ:




ಬೇಕಾಗುವ ಸಾಮಗ್ರಿಗಳು:


ಅಕ್ಕಿ - 250 grams 

ನಿಮಗೆ ಬೇಕಾದ ಆಯ್ಕೆಯ ತರಕಾರಿ ತೆಗೆದುಕೊಳ್ಳಿ 
(ಇಲ್ಲಿ ನಾನು ಬೀನ್ಸ್,ಕ್ಯಾರಟ್, ಆಲೂಗಡ್ಡೆ ಮತ್ತು ಬಟಾಣಿ ಬಳಸಿದ್ದೇನೆ)
ಲವಂಗ -> 4-5 
ಸ್ಟಾರ್ ಮೊಗ್ಗು -> 1-2
 ಬಿರಿಯಾನಿ ಎಲೆ-> 2 
ಚಕ್ಕೆ ->1 
ಏಲಕ್ಕಿ->2
ಈರುಳ್ಳಿ->2
ಟೊಮೇಟೊ ->2
ಶುಂಠಿ ಬೆಳ್ಳುಳಿ ಪೇಸ್ಟ್ -> 1 ಸ್ಪೂನ್ 
 ಕರಿ ಮೆಣಸು -> 3-4
ಕೊತ್ತಂಬರಿ ಸೊಪ್ಪು - 1 ಕಟ್ಟು 
ಮೊಸರು-> 1 ಸಣ್ಣ ಕಪ್  
ಎಣ್ಣೆ -> 4 spoon
ಉಪ್ಪು -> ರುಚಿಗೆ ತಕ್ಕಂತೆ 

ಮಸಾಲಾ ರೈಸ್ ಬಾತ್ ಗೆ ಮುಖ್ಯ ಸಾಮಗ್ರಿಗಳು: 
ಬ್ಯಾಡಗಿ ಮೆಣಸಿನ ಕಾಯಿ:   8-10
ಒಣ ಮೆಣಸಿನ ಕಾಯಿ:          2-3
ಧನ್ಯ ಕಾಳು:         1 tbl spoon


ಮಿಕ್ಸಿಗೆ ರುಬ್ಬಲು:.
(ಈ ಎಲ್ಲ ಕೆಳಗಿನ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದು ರುಬ್ಬಿಕೊಳ್ಳಿ.)

ಬ್ಯಾಡಗಿ ಮೆಣಸಿನ ಕಾಯಿ->   8-10
ಒಣ ಮೆಣಸಿನ ಕಾಯಿ->         2-3
ಧನ್ಯ ಕಾಳು->         1 tbl spoon

 ಈರುಳ್ಳಿ -> 1
2 ಸಣ್ಣ ಟೊಮೇಟೊ 
ಲವಂಗ -> 3 to 4
ಚಕ್ಕೆ ->  2 ಸಣ್ಣ ತುಂಡು 
ಕರಿ ಮೆಣಸು-> 8-10

ತೆಂಗಿನಕಾಯಿ-> 1 ಸಣ್ಣ ಕಪ್ 
ಕೊತ್ತಂಬರಿ ಸೊಪ್ಪು->1 ಸಣ್ಣ ಕಪ್ 


ಮಾಡುವ ವಿಧಾನ: 

1.ಪತ್ರೆ ಬಿಸಿಯಾಗಲು ಇಟ್ಟು, 2 ಸ್ಪೂನ್ ಎಣ್ಣೆ ಹಾಕಿ. 
2. ನಂತರ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಅನೀಸ್, ಬಿರಿಯಾನಿ ಎಲೆ ಹಾಕಿ ಸ್ವಲ್ಪ ಹುರಿಯಿರಿ. 

3. ನಂತರ ೧ ಹೆಚ್ಚಿರುವ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ (ಘಮ ವಾಸನೆ ಬರುವವರೆಗೆ, ಮತ್ತು ಈರುಳ್ಳಿ ಸ್ವಲ್ಪ ಕೆಂಪಾಗುವ ವರೆಗೆ ) ಹುರಿಯಿರಿ. 

4. ನಂತರ ಹೆಚ್ಚಿಟ್ಟಿರುವ ಎಲ್ಲಾ ತರಕಾರಿ ಹಾಕಿ ಫ್ರೈ ಮಾಡಿ(ತರಕಾರಿ ಚೆನ್ನಾಗಿ ಬೇಯುವ ವರೆಗೆ ಹುರಿಯಿರಿ. ಅಗತ್ಯವಿದ್ದರೆ ಸ್ವಲ್ಪ ಎಣ್ಣೆ ಹಾಕಿ ಕೊಳ್ಳಿ). 

5. ನಂತರ ರುಬ್ಬಿರುವ ಕಾಯಿ, ಟೊಮೇಟೊ ಮಸಾಲಾ ವನ್ನು ಹಾಕಿ ಹುರಿಯಿರಿ. 

6. ಈಗ ಸ್ವಲ್ಪ ಮೊಸರು ಹಾಕಿ ಸ್ವಲ್ಪ ಕಲಸಿ ಹುರಿಯಿರಿ. 

7. ನಂತರ ತೊಳೆದಿರುವ ಅಕ್ಕಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ವಲ್ಪ ಹುರಿಯಿರಿ. 

8. ನಂತರ ಅಕ್ಕಿಗೆ ತಕ್ಕಷ್ಟು ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಅನ್ನ ಬೇಯಲು ಬಿಡಿ. 15-20 ನಿಮಿಷ ತೆಗೆದು ಕೊಳ್ಳುತ್ತೆ. 

ಅನ್ನಕ್ಕೆ ನೀರಿನ ಅಳತೆ : 
ಅಕ್ಕಿ 1 ಲೋಟ ತೆಗೆದು ಕೊಂಡರೆ 2 ಲೋಟ ನೀರು ಹಾಕಬೇಕು. ಮಸಾಲೆ ಯಲ್ಲೂ ಸ್ವಲ್ಪ ನೀರು ಇರುವುದರಿಂದ, ಸ್ವಲ್ಪ ಕಡಿಮೆ ನೀರು ಹಾಕಿಕೊಳ್ಳಿ. 

9. ನೀವು ಪ್ರೆಷರ್ ಕುಕ್ಕರ್ ಅಲ್ಲಿ ಅಡುಗೆ ಮಾಡುತ್ತಿದ್ದಾರೆ, 2 ವಿಸಲ್ ಬರುವವರೆಗೆ ಅನ್ನ ಬೇಯಿಸಿದರೆ ಸಾಕು.  

ಈಗ ನಿಮ್ಮ ಬಿಸಿಬಿಸಿ ಮತ್ತು ರುಚಿಕರ ಮಸಾಲಾ ರೈಸ್ ಬಾತ್ ತಿನ್ನಲು ರೆಡಿ. ಇದು ನೋಡಲೂ ಕೂಡ ಒಳ್ಳೆ ಬಣ್ಣ ಇರೋದಕ್ಕೆ, ಎಲ್ಲರಿಗೂ ಖಂಡಿತಾ ಇಷ್ಟವಾಗುತ್ತೆ.  
ಇದನ್ನು ಮಾಡಿ ನಿಮಗೆ ಇಷ್ಟವಾದಲ್ಲಿ ತಿಳಿಸಿ. 





You might also like recipes below: