ಸಬ್ಸಿಗೆ ಸೊಪ್ಪಿನ ಉಪ್ಪಿಟ್ಟು ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
ಬನ್ಸಿ ರವೆ- 1 ಗ್ಲಾಸ್
ಈರುಳ್ಳಿ-2
ಟೊಮೇಟೊ-1 or 2
ಹಸಿ ಮೆಣಸಿನ ಕಾಯಿ -2-4
ಕಡ್ಲೆ ಬೇಳೆ - 1 ಸ್ಪೂನ್
ಹೆಸರು ಬೇಳೆ - 1 ಸ್ಪೂನ್
ಉದ್ದಿನ ಬೇಳೆ - 1 ಸ್ಪೂನ್
ಸಬ್ಸಿಗೆ ಸೊಪ್ಪು -1 ಅಥವಾ 2 ಕಪ್ ( ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ ಎತ್ತಿಡಿ)
ಕರಿ ಬೇವು -1 ಅಥವಾ 1 ಕಡ್ಡಿ
ಸಾಸಿವೆ - 1ಸ್ಪೂನ್
ಎಣ್ಣೆ-4 ಸ್ಪೂನ್
ಮಾಡುವ ವಿಧಾನ:
ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ. ರವೆಯನ್ನು ಹಾಕಿ ಹುರಿಯಿರಿ.
10-15 ನಿಮಿಷ ಹುರಿಯಿರಿ.
ನಂತರ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಸಾಸಿವೆ , ಕರಿ ಬೇವು ಹಾಕಿ ಹುರಿಯಿರಿ.
ನಂತರ ಕಡ್ಲೆ ಬೇಳೆ,ಹೆಸರು ಬೇಳೆ, ಉದ್ದಿನ ಬೇಳೆ ಹಾಕಿ ಹುರಿಯಿರಿ.
ನಂತರ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹಸಿ ವಾಸನೆ ಹೋಗೋವರೆಗೆ ಹುರಿಯಿರಿ.
ನಂತರ ಸಬ್ಸಿಗೆ ಸೊಪ್ಪು ಹಾಕಿ ಹಸಿ ವಾಸನೆ ಹೋಗೋ ವರೆಗೆ ಹುರಿಯಿರಿ.
ನಂತರ ಟೊಮೇಟೊ ಹಾಕಿ ಹುರಿಯಿರಿ.
ನಂತರ ನೀರು ಹಾಕಿ, ರುಚಿ ಗೆ ಉಪ್ಪು ಹಾಕಿ ನೀರು ಕುದಿಯಲು ಬಿಡಿ.
ನೀರನ್ನು ರವೆ ಅಳತೆಯ ಎರಡರಷ್ಟು ಹಾಕಬೇಕು.
ನೀರು ಕುದಿಯಲು ಶುರುವಾದ ಮೇಲೆ ಹುರಿದಿಟ್ಟಿರುವ ರವೆ ಹಾಕಿ ಚೆನ್ನಾಗಿ ಕಲಕಿ.
ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
10 ನಿಮಿಷದ ನಂತರ ತೆಗೆದು, ಉಪ್ಪಿಟ್ಟನ್ನು ಬಿಸಿ ಬಿಸಿಯಾಗಿ ತಿನ್ನಲು ಕೊಡಿ
You might also like the recipes below: