ಹುರಳಿ ಕಾಳು ಸಾಂಬಾರ್ ಮತ್ತು ಪಲ್ಯ ಮಾಡುವ ವಿಧಾನ | Horse gram sambar and Palya recipe in kannada | Hurali kalu sambar and palya

   ಹುರಳಿ ಕಾಳು ಸಾಂಬಾರ್ ಮಾಡುವ ವಿಧಾನ:



ಹುರಳಿ ಕಾಳು ಕರ್ನಾಟಕ ದಲ್ಲಿ ಎಲ್ಲ ಕಡೆ ಬೇಳೆಯ ಥರ ಬಳಸುವ ಒಂದು ಕಾಳು.  
ಉತ್ತರ ಭಾರತ ಅಥವಾ modern ಅಡುಗೆಗಳಲ್ಲಿ ಅಷ್ಟೊಂದು ಫೇಮಸ್ ಅಲ್ಲದಿದ್ರೂ, ಈ ಕಾಳಿನ ಬಹು ಅರೋಗ್ಯ ಉಪಯೋಗಕಾರಿ ಗುಣಗಳನ್ನ ಕೇಳಿದ್ರೆ, ಈ ಕಾಳನ್ನು ನಿಮ್ಮ ಅಡುಗೆ ಯಲ್ಲಿ ಬಳಸಲು ಖಂಡಿತಾ ನೀವೇ ತಯಾರಾಗ್ತೀರಾ !!  

ಇದು ಉಷ್ಣಾಂಶ ಹೊಂದಿರುವ ಕಾಳು. ಇದನ್ನ ಶೀತ ಕೆಮ್ಮು ನೆಗಡಿ ಆಗಿರೋವಾಗ ದೇಹದ ಉಷ್ಣಾಂಶ ಹೆಚ್ಚಿಸಿಕೊಳ್ಳಲು ತಿನ್ನಬಹುದು. 

ದೇಹದ ಕೊಲೆಸ್ಟ್ರಾಲ್, ತೂಕ ಇಳಿಸಲು, ಡೈಯಾಬಿಟೀಸ್ ಇರುವವರಿಗೂ ಇದು ಉತ್ತಮ ಡಯಟ್ ಆಹಾರ. 

ಬನ್ನಿ ಈಗ  ಹುರಳಿ ಕಾಳು ಸಾಂಬಾರ್  ಮಾಡುವ ವಿಧಾನ ನೋಡೋಣ ..!! 

ಸಾಂಬಾರ್ ಮಾಡಲು ಬೇಕಾಗುವ ಸಾಮಗ್ರಿಗಳು: 

ಹುರಳಿ ಕಾಳು - 250grams
ಬೆಳ್ಳುಳ್ಳಿ Garlic-5-6
ಈರುಳ್ಳಿ -1 medium 
ಒಣ ಮೆಣಸಿನ ಕಾಯಿ -5-6

ಹುಣಸೆ ಹಣ್ಣಿನ ರಸ -1 ಸಣ್ಣ ಕಪ್  cup

ಕರಿ ಬೇವು - 2 ಕಡ್ಡಿ 
ಎಣ್ಣೆ  - 1-2 spoons
ಸಾಸಿವೆ ಕಾಳು  - 1 tea spoon
ಉಪ್ಪು - ರುಚಿಗೆ ತಕ್ಕಷ್ಟು 

ಕೊತ್ತಂಬರಿ ಸೊಪ್ಪು- ಅರ್ಧ ಕಪ್ 


ಮಸಾಲಾ ರುಬ್ಬುವುದಕ್ಕೆ :

ಕಾಯಿ -  ಅರ್ಧ ಕಪ್ 
ಟೊಮೇಟೊ -1
ಬೇಯಿಸಿರುವ ಕಾಳು - 1 ಕಪ್ 
ಮೇಲಿನ ಮೂರನ್ನು ರುಬ್ಬಿ ಎತ್ತಿಡಿ. 


ಮಾಡುವ ವಿಧಾನ:

1) ಹುರಳಿ ಕಾಳನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಹಾಕಿ. ನೀರು ಉಪ್ಪು ಬೆರೆಸಿ 4-5 ಸೀಟಿ ಬರುವವರೆಗೆ ಚೆನ್ನಾಗಿ ಬೇಯಿಸಿ ಕೊಳ್ಳಿ. 
ಹುರಳಿ ಕಾಳು ಬೇಯಲು ತುಂಬಾ ಸಮಯ ತೆಗೆದು ಕೊಳ್ಳುತ್ತೆ. 

2) ಬೇಯಿಸಿದ ಕಾಳು,  ನೀರು ಬಸಿದು ಎತ್ತಿಡಿ. ಈ ನೀರನ್ನು ಸಾರು ಮಾಡಲು ಉಪಯೋಗಿಸಿ. 

ಬೇಯಿಸಿರುವ ಕಾಳು

3) ಈಗ ಓಲೆ ಮೇಲೆ  ಪಾತ್ರೆ ತೆಗೆದುಕೊಂಡು ಕಾಯಲು ಬಿಡಿ. ನಂತರ ಸಾಸಿವೆ ಕಾಳು ಹಾಕಿ. 

4) ಸಾಸಿವೆ ಸಿಡಿಯಲು ಶುರು ಮಾಡಿದ ಮೇಲೆ, ಎಣ್ಣೆ ಜಜ್ಜಿದ ಬೆಳ್ಳುಳ್ಳಿ, ಒಣ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. 

5) ನಂತರ ಕತ್ತರಿಸಿರುವ ಈರುಳ್ಳಿ, ಕರಿ ಬೇವು ಹಾಕಿ ಫ್ರೈ ಮಾಡಿ. 


6) ನಂತರ ಆಡಿಸಿರುವ ಕಾಯಿ,ಟೊಮೇಟೊ,ಹುರಳಿ ಕಾಳಿನ ಮಸಾಲಾ ಪೇಸ್ಟ್ ಹಾಕಿ . ಹಸಿ ವಾಸನೆ ಹೋಗೋವರೆಗೆ ಹುರಿಯಿರಿ. 

7)  ಈಗ ಹುಣಸೆ ಹಣ್ಣಿನ ರಸವನ್ನೂ ಸೇರಿಸಿ. ಈ ಹಂತದಲ್ಲಿ ನಿಮಗೆ ಖಾರ ಕಡಿಮೆ ಅನಿಸಿದರೆ, ಸ್ವಲ್ಪ ಸಾಂಬಾರ್ ಖಾರ ಪುಡಿ ಬೆರೆಸಿ ಕೊಳ್ಳಿ. ಬೇಯಿಸಿ ಇಟ್ಟುಕೊಂಡಿರುವ ಕಾಳಿನ ನೀರು ಬೆರೆಸಿ ಕೊಳ್ಳಿ. 

8)ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ.

9) ಒಂದು ಸ್ವಲ್ಪ ಬೇಯಿಸಿರುವ ಕಾಳನ್ನು ಹಾಕಿ. 
ಕೊತ್ತಂಬರಿ ಸೊಪ್ಪು ಬೆರೆಸಿಕೊಳ್ಳಿ. 

ಹಸಿ ವಾಸನೆ ಹೋಗೋವರೆಗೆ ಸಾರನ್ನು ಚೆನ್ನಾಗಿ ಕುದಿಯಲು ಬಿಡಿ. 

ಈ ಸಾಂಬಾರ್ ಕುದಿಯುವ ವರೆಗೆ ಕಾಳಿನ ಪಲ್ಯ ಕ್ಕೆ  ಒಗ್ಗರಣೆ ಹಾಕಿ ಕೊಳ್ಳಿ. 






ಹುರಳಿ ಕಾಳಿನ ಪಲ್ಯ ಮಾಡುವ ವಿಧಾನ: 

ಹುರಳಿ ಕಾಳಿನ ಪಲ್ಯ ಕ್ಕೆ  ಬೇಕಾಗುವ ಸಾಮಗ್ರಿಗಳು: 

ಬೇಯಿಸಿ ಎತ್ತಿಟ್ಟಿರುವ ಹುರಳಿ ಕಾಳು 
ಬೆಳ್ಳುಳ್ಳಿ-    5-6
ಈರುಳ್ಳಿ -   1  
ಒಣ/ಹಸಿ  ಮೆಣಸಿನ ಕಾಯಿ -    3-4


ಕರಿ ಬೇವು - 2 ಕಡ್ಡಿ 
ಎಣ್ಣೆ  - 1-2 spoons
ಸಾಸಿವೆ ಕಾಳು  - 1 tea spoon
ಉಪ್ಪು - ರುಚಿಗೆ ತಕ್ಕಷ್ಟು 
ಕೊತ್ತಂಬರಿ ಸೊಪ್ಪು- ಅರ್ಧ ಕಪ್ 

1) ಫ್ರಯಿಂಗ್ ಪಾನ್ ತೆಗೆದುಕೊಂಡು, ಕಾಯಲು ಬಿಡಿ. ಸಾಸಿವೆ ಹಾಕಿ ಸಿಡಿಯಲು ಬಿಡಿ. 

2) ಸಾಸಿವೆ ಸಿಡಿಯಲು ಶುರು ಮಾಡಿದ ಮೇಲೆ, ಎಣ್ಣೆ ಜಜ್ಜಿದ ಬೆಳ್ಳುಳ್ಳಿ,  ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. 

3) ನಂತರ ಕತ್ತರಿಸಿರುವ ಈರುಳ್ಳಿ, ಕರಿ ಬೇವು ಹಾಕಿ ಫ್ರೈ ಮಾಡಿ. 


4)ನಂತರ ಬೇಯಿಸಿರುವ ಕಾಳು ಹಾಕಿ 2 ನಿಮಿಷ ಫ್ರೈ ಮಾಡಿ. ಉಪ್ಪು ಕಡಿಮೆ ಇದ್ದರೆ ಸ್ವಲ್ಪ ಹಾಕಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. 

5) ಈಗ ಹುರಳಿ ಕಾಳಿನ ಸಾಂಬಾರ್/ ಪಲ್ಯ ಎರಡೂ ರೆಡಿ ಆಗಿದೆ. ಇದನ್ನು ಮುದ್ದೆ ಅನ್ನದ ಜೊತೆ ಬಡಿಸಿ. 
ಹುಳಿ, ಖಾರದ ಈ ಸಾಂಬಾರ್ ನಿಮಗೆ ಖಂಡಿತಾ ಇಷ್ಟ ಆಗುತ್ತದೆ. 



ಹುರಳಿ ಕಾಳಿನ ಉಪಯೋಗಗಳು: 
=> ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.  
=>ಕೊಲೆಸ್ಟ್ರಾಲ್ ಕಡಿಮೆ, ಮತ್ತು ಕಂಟ್ರೋಲ್ ಮಾಡುತ್ತದೆ. 
=> ಮುಟ್ಟಿನ ಹಲವು ಸಮಸ್ಯೆಗಳನ್ನು ಇದು ನಿವಾರಿಸಲು ಸಹಾಯ ಮಾಡುತ್ತದೆ. 
=> ಛಳಿ,ಶೀತದ ಸಮಯದಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುತ್ತದೆ, ಜ್ವರವನ್ನು ಕಂಟ್ರೋಲ್ ಮಾಡುತ್ತದೆ. 

=>ಆಯುರ್ವೇದದಲ್ಲಿ ಹಲವು ಖಾಯಿಲೆಗಳ(ಪೈಲ್ಸ್, ಹೊಟ್ಟೆಯ ಹುಳು ) ಔಷಧಿ ತಯಾರಿಸಲು ಇದನ್ನು ಬಳಸುತ್ತಾರೆ. 


Nutrition Facts:
100 gram of Horse gram contains nutrition facts as below:

NutrientsAmounts
Energy321  Ecals
Moisture12 gm
Protein22 gm
Fat0 gm
Mineral3 gm
Fiber5 gm
Carbohydrates57 gm
Calcium287 mg
Phosphorous311 mg
Iron7 mg


Click on below images and links to view some other interesting recipes: