How to prepare vegetable Fried Rice/ Veg Fried Rice | Try this recipe of Veg Fried rice with available vegetables at home | How to prepare Vegetable Fried Rice

Vegetable Fried Rice Recipe



Category:Breakfasts /snack item 

Fried rice is most of the people's favorite street food. It can be prepared as an evening snack item. Preparing this is very simple and also quick.

If you have all the vegetables available at home or with whatever vegetables are available, you can prepare this very quickly and serve it.

If kids don't like to eat vegetables, include this in your menu, and kids going to love this recipe too..!!


How to prepare Fried Rice:

Sauces required:
Soya sauce, red/green chilli sauce and vinegar.

(if you want to skip these sauces, you can add lemon juice and red chilli powder/or paste)


Ingredients:

Ginger-1 tbl spoon(finely chopped)
Garlic-1 tbl spoon(finely chopped)

Cooked Rice- 2 cup

Vegetables:
Carrot -1 small cup
Beans -1 small cup
Capsicum-1 small cup
Cabbage -1 small cup

Pepper powder
Salt- for paste

Sauces:
vinegar-1 tbl spoon
Soya sauce-1/2 tbl spoon
Green/Red chilli sauce-1 tbl spoon

Method:
Finely chop all the vegetables







=>In a pan, take 2-3 spoons of oil. heat it. add finely chopped ginger-garlic to it.



=>Next add beans first. and fry it. Later add all the other vegetables and fry it. Fry all vegetables on high flame.




=>Later add soya sauce(add very little of it. this gives dark color and also a little sour taste to fried rice. be careful and put only little quantity, because it adds sour taste to the food).

=>Add red chili sauce, green chili sauce, 1 spoon vinegar(adding these items make it Chinese style).


=>Later add cooked rice, pepper powder and salt and fix well.


Now the fried rice is ready to eat.serve it hot along with sauces.
                                     



Article tags: #vegetable fried rice, #vegetable fried rice maduva vidhana, #Prepare Veg fried rice with available vegetables at home 
Veg Fried Rice | How to prepare Vegetable Fried Rice | Breakfasts for mornings | Roadside Style Vegetable Fried Rice 

About me

Hello to all Food Lovers...


I am Mamatha, and I am a working woman.I learned cooking, only after my marriage. Once I got introduced to cooking, I started to explore more and became more passionate about cooking.

Here in this blog, I have listed a few of the recipes which I have learned from my mother, inlaw, sisters, and friends..

As the name of the blog, the recipes I have listed here are either easy to make, or steps are broken down into easy and doable ones. Hope this will help all the food lovers and learners. 


Please visit my blog all recipe collections and hope you all like them.


Thank you...

How to make Healthy high protein Soya beans curry recipe in kannada | ಸೋಯಾ ಬೀನ್ಸ್ ಗೊಜ್ಜು ರೆಸಿಪಿ


        ಸೋಯಾ ಬೀನ್ಸ್ ಗೊಜ್ಜು ರೆಸಿಪಿ  


 

ಸೋಯಾ ಬೀನ್ಸ್ ಹೆಚ್ಚು ಪ್ರೊಟೀನ್ ಯುಕ್ತ ಕಾಳು.  ಸೋಯಾ ಫುಡ್ ಯಿಂದ ಹೃದಯ ಸಂಬಂಧಿ ಖಾಯಿಲೆ,ಸ್ಟ್ರೋಕ್  ಮತ್ತಿತರ ಖಾಯಿಲೆಗಳ  ರಿಸ್ಕ್ ಕಡಿಮೆ ಆಗುತ್ತೆ ಡಯಟ್ ಆಹಾರ ಕೂಡ ಇದಾಗಿದೆ. 

ಸೋಯಾ ಬೀನ್ಸ್ ಬಳಸಿ ಕರಿ, ಗೊಜ್ಜು ಮಾಡುವ ವಿಧಾನ ನೋಡೋಣ ಬನ್ನಿ. 


ಬೇಕಾಗುವ ಸಾಮಗ್ರಿಗಳು:

ಸೋಯಾ ಬೀನ್ಸ್: 1 ಲೋಟ
ಈರುಳ್ಳಿ-2
ಟೊಮಾಟೊ-1
ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಸ್ಪೂನ್
ಗರಂ ಮಸಾಲ ಪುಡಿ- 1 ಸ್ಪೂನ್
ಕೆಂಪು ಮೆಣಸಿನ ಪುಡಿ-1 ಸ್ಪೂನ್
ಉಪ್ಪು- ರುಚಿ ಗೆ ತಕ್ಕಷ್ಟು

ಮಾಡುವ ವಿಧಾನ:
1) ಸೋಯಾ ಬೀನ್ಸ್ ಅನ್ನು ತೊಳೆದು ನೀರಲ್ಲಿ 1 ರಾತ್ರಿ ನೆನೆಯಲು ಬಿಡಿ. 

2) ಸೋಯಾ ಬೀನ್ಸ್ ಅನ್ನು ಪ್ರೆಷರ್ ಕುಕ್ಕರ್ ಅಲ್ಲಿ 3-4 ವಿಷಲ್ ವರೆಗೆ ಬೇಯಿಸಿ ತೆಗೆದಿಡಿ. 

3) ಮಿಕ್ಸಿಯಲ್ಲಿ 1 ಈರುಳ್ಳಿ, ಟೊಮೇಟೊ ರುಬ್ಬಿ ಎತ್ತಿಡಿ. 

4) 1 ಬಾಣಲೆಯಲ್ಲಿ ಕಾಯಿಸಿ, 2 ಸ್ಪೂನ್ ಎಣ್ಣೆ ಹಾಕಿ. 

5) ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 

6) ನಂತರ ಟೊಮೇಟೊ ಈರುಳ್ಳಿಯ ರುಬ್ಬಿಕೊಂಡಿರುವ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ . 

7) ನಂತರ ಅರಿಶಿನ ಪೌಡರ್, ಮೇಲೆ ತಿಳಿಸಿರುವ ಎಲ್ಲಾ ಮಸಾಲಾ ಪೌಡರ್ ಹಾಕಿ ಚೆನ್ನಾಗಿ ಕಲಸಿರಿ 

8) ನಂತರ ಬೇಯಿಸಿರುವ ಸೋಯಾ ಬೀನ್ಸ್ ಅನ್ನು ಹಾಕಿ 5 ನಿಮಿಷ ಬೇಯಲು ಬಿಡಿ. 

9) ಮಸಾಲಾ ಕುದಿಯಲು ಶುರುವಾದಾಗ ಸಣ್ಣಗೆ ಕತ್ತರಿಸಿರುವ ಕೊತ್ತಂಬರಿ ಸೊಪ್ಪು ಹಾಕಿ. 

10) ಈಗ ರುಚಿಯಾದ, ಪೌಷ್ಠಿಕವಾದ ಸೋಯಾ ಬೀನ್ಸ್ ಕರಿ ತಿನ್ನಲು ರೆಡಿ . 
ಇದನ್ನು ಚಪಾತಿ, ರೋಟಿ,ದೋಸೆ, ಅನ್ನ ಯಾವುದಾದ್ರೂ ಜೊತೆಗೆ ತಿನ್ನಲು ಕೊಡಿ 

 


ಬೇಳೆ ಸಾರು । ದಾಲ್ ಸಾಂಬಾರ್ ಮಾಡುವ ವಿಧಾನ | Easy Toor Dal Sambar recipe in Kannada | ಸುಲಭವಾದ ಬೇಳೆ ಸಾಂಬಾರ್ ಮಾಡುವ ವಿಧಾನ ಕನ್ನಡದಲ್ಲಿ

 ಬೇಳೆ ಸಾರು   । ದಾಲ್ ಸಾಂಬಾರ್ ಮಾಡುವ ವಿಧಾನ 



ಬೇಕಾಗುವ ಸಾಮಗ್ರಿಗಳು:

ಬೇಳೆ- 1 ಕಪ್
ನೀರು-2 ಕಪ್

ಒಗ್ಗರಣೆಗೆ:
ಸಾಸಿವೆ-1 ಸಣ್ಣ ಟೀ ಸ್ಪೂನ್
ಕರಿಬೇವು - 2 ಕಡ್ಡಿ 
ಜೀರಿಗೆ -1 ಸಣ್ಣ ಟೀ ಸ್ಪೂನ್
ಈರುಳ್ಳಿ-1 
ಕೊತ್ತಂಬರಿ ಸೊಪ್ಪು- ಸ್ವಲ್ಪ 

ಬೆಳ್ಳುಳ್ಳಿ - 2,3 ಎಸಳು
ಶುಂಠಿ - 1 ಸ್ಪೂನ್ 
ಒಣ ಮೆಣಸಿನ ಕಾಯಿ -2
ಅರಿಶಿನ -1 ಚಿಟಿಕೆ
ತುಪ್ಪ - 1-2 ಸ್ಪೂನ್ 
ಹಿಂಗು - 1 ಚಿಟಿಕೆ 

ದಾಲ್ 
ಸಾರು ಮಾಡುವ ವಿಧಾನ:

ಮಾಡುವ ವಿಧಾನ :
1) ಪ್ರೆಷರ್ ಕುಕ್ಕರ್ ನಲ್ಲಿ ಬೇಳೆ,ನೀರು ಹಾಕಿ 2 ವಿಸಲ್ ಬರುವ ವರೆಗೆ ಬೇಯಲು ಬಿಡಿ. 

2) ಮತ್ತೊಂದು ಪಾತ್ರೆಯನ್ನು ಓಲೆ ಮೇಲಿಟ್ಟು ಕಾದ ನಂತರ ಸಾಸಿವೆ,ಜೀರಿಗೆ, ಎಣ್ಣೆ ಹಾಕಿ. 

3)ಸಾಸಿವೆ ಸಿಡಿಯಲು ಶುರುವಾದ ನಂತರ ಈರುಳ್ಳಿ, ಬೆಳ್ಳುಳ್ಳಿ,ಕರಿ ಬೇವು ,ಒಣ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿಯಿರಿ. 

4) ಕೊನೆಯಲ್ಲಿ 1 ಚಿಟಿಕೆ ಹಿಂಗು ಹಾಕಿ.  

5)ನಂತರ ಬೆಂದಿರುವ ಬೇಳೆ ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುದಿಯಲು ಬಿಡಿ. (ಬೇಳೆಯನ್ನು ಬೇಕಿದ್ದರೆ ಸೌಟಿನಲ್ಲಿ ತಿರುವಿ ಮ್ಯಾಶ್  ಮಾಡಿಕೊಳ್ಳಿ). ಕೊನೆಯಲ್ಲಿ ತುಪ್ಪ, ಕೊತ್ತಂಬರಿ ಸೊಪ್ಪು  ಹಾಕಿಕೊಳ್ಳಿ 

6) ಈಗ ತುಂಬ ಸುಲಭವಾದ ಬೇಳೆ ಸಾರು ತಿನ್ನಲು ರೆಡಿ. ಇದನ್ನು ಅನ್ನ,ಮುದ್ದೆ, ಅಥವಾ ರೋಟಿ/ಚಪಾತಿಯ  ಜೊತೆ ತಿನ್ನಲು ಕೊಡಿ. ರೋಟಿ ಜೊತೆಗೆ ಬೇಳೆ ಕಟ್ಟು ಗಟ್ಟಿ ಇದ್ದರೆ ಚೆನ್ನ.


spicy chicken pepper Fry recipe for spice lovers | ಪೆಪ್ಪರ್ ಚಿಕನ್ ಡ್ರೈ in Kannada | Non veg recipe in kannada

 

            ಪೆಪ್ಪರ್ ಚಿಕನ್ ಡ್ರೈ ರೆಸಿಪಿ ಕನ್ನಡ ದಲ್ಲಿ 



ಬೇಕಾಗುವ ಸಾಮಗ್ರಿಗಳು :

ಚಿಕನ್ -500grams

ಈರುಳ್ಳಿ -2
ಹಸಿ ಮೆಣಸಿನ ಕಾಯಿ -4
ಟೊಮೇಟೊ -1 or 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ -1 spoon

ಅರಿಶಿನ - 1 tea spoon
ಗರಂ ಮಸಾಲಾ - 1 spoon
ಕೆಂಪು ಮೆಣಸಿನ ಪುಡಿ - 1/2 spoon
ಕಾಳು ಮೆಣಸಿನ ಪೌಡರ್ - 2 spoon
ಧನ್ಯ ಪೌಡರ್ - 1 spoon
ಎಣ್ಣೆ - ೩-೪ spoon
ಉಪ್ಪು - ರುಚಿಗೆ ತಕ್ಕಷ್ಟು 


ಮಾಡುವ ವಿಧಾನ:

1. ಚಿಕನ್ ಅನ್ನು ಚೆನ್ನಾಗಿ ಅರಿಶಿನ ಉಪ್ಪು ಹಾಕಿ ತೊಳೆಯಿರಿ . 

2. ಫ್ರಯಿಂಗ್ ಪಾನ್ ಅನ್ನು ತೆಗೆದುಕೊಂಡು 2
 ಸ್ಪೂನ್ ಎಣ್ಣೆ ಹಾಕಿರಿ. ಅದಕ್ಕೆ ಉದ್ದಕ್ಕೆ ಕತ್ತರಿಸಿರುವ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ನಂತರ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. 

3.ನಂತರ ಟೊಮೇಟೊ ಹಾಕಿ ಹುರಿಯಿರಿ. ಟೊಮೇಟೊ ಬೆಂದ ನಂತರ ಗರಂ ಮಸಾಲಾ ಪೌಡರ್, ಕೆಂಪು ಮೆಣಸಿನ ಪೌಡರ್, ಧನ್ಯ ಪೌಡರ್,ಉಪ್ಪು ಹಾಕಿ ಹಸಿ ವಾಸನೆ ಹೋಗೋ ವರೆಗೆ ಹುರಿಯಿರಿ.
 
4. ನಂತರ ಚಿಕನ್ ಹಾಕಿ ಚೆನ್ನಾಗಿ ಕಲಸಿ ಮುಚ್ಚಳ  ಬೇಯಿಸಿರಿ. 

5.ಕೊನೆಗೆ ಕಾಳು ಮೆಣಸಿನ ಪೌಡರ್ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ ಅಲಂಕರಿಸಿ. 

6. ಈಗ ಪೆಪ್ಪರ್ ಚಿಕನ್ ತಿನ್ನಲು ರೆಡಿ. 




ಚಿಕನ್ ಪಕೋಡ | Chicken Pakoda Recipe in kannada | Crispy chicken Pakora Recipe | yummy chicken starters recipe in kannada

                                 ಚಿಕನ್ ಪಕೋಡ 

ಈ ಥರ ಚಿಕನ್ ಪಕೋಡ ನೀವು ಯಾವತ್ತಾದ್ರೂ ಮಾಡಿದ್ದೀರಾ? ಟ್ರೈ ಮಾಡಿ ಈ ಹೊಸ ರುಚಿ ।
ನೋಡಲು ಥೇಟ್ ಪಕೋಡ ಥರಾನೇ ಇರುತ್ತೆ !! ಮತ್ತು ತಿನ್ನಲು ಬಹಳಾ ರುಚಿ ಇದು....  

Chicken Liver Fry Recipe in kannada | How to prepare Chicken Liver Fry | Quick and simple chicken Liver Fry recipes

 Liver fry(ಈಲಿ  ಫ್ರೈ ):



ಬೇಕಾಗುವ ಸಾಮಗ್ರಿಗಳು :

ಚಿಕನ್ ಲಿವರ್ ತುಂಡುಗಳು:  ಕಾಲು k.g
ಈರುಳ್ಳಿ - 2
ಹಸಿ ಮೆಣಸಿನ ಕಾಯಿ - 3-4
ಶುಂಠಿ- ಬೆಳ್ಳುಳ್ಳಿ paste -4 tbl spoon
ಟೊಮೇಟೊ -1

ಗರಂ ಮಸಾಲಾ ಪುಡಿ - 1 spoon
ಕೆಂಪು ಮೆಣಸಿನ ಪುಡಿ -1 spoon
ಧನ್ಯ ಕಾಳಿನ ಪುಡಿ -1 spoon

ಮಾಡುವ ವಿಧಾನ:

ಬಾಣಲೆಗೆ 2 spoon ಎಣ್ಣೆ ಹಾಕಿ ಈರುಳ್ಳಿ, ಹಸಿ ಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ನಂತರ ಟೊಮೇಟೊ ಹಾಕಿ ಹುರಿಯಿರಿ.

ನಂತರ ಗರಂ ಮಸಾಲಾ ಪುಡಿ,ಕೆಂಪು ಮೆಣಸಿನ ಪುಡಿ ಮತ್ತು ಧನ್ಯ ಕಾಳಿನ ಪುಡಿ ಹಾಕಿ.


ನಂತರ ಲಿವರ್ ತುಂಡು ಹಾಕಿ,ಉಪ್ಪು ಹಾಕಿ ಕಲಸಿ  ಬಾಣಲೆಯ ಮುಚ್ಚಳ ಮುಚ್ಚಿ ಬೇಯಲು ಬಿಡಿ.




ಲಿವರ್ ಫ್ರೈ ಈಗ ತಿನ್ನಲು ರೆಡಿ. 


ಬೇಗ ಫ್ರೈ ಮಾಡಲು ಕುಕ್ಕರ್ ಹಾಕಿ ಕೂಡ ಇದನ್ನು ಬೇಯಿಸಬಹುದು.



Bangada Fish fry Recipie in kannada | Bangda Fish fry - Easy n Delicious method (ಬಂಗುಡೆ ಮೀನಿನ ಫ್ರೈ) | How to prepare Bangda fish fry-steps by step process with pictures

 Bangda fish fry easy way |  ಬಂಗುಡೆ ಮೀನಿನ ಫ್ರೈ ಮಾಡುವ ವಿಧಾನ 



Bangda/Bangude Fish Fry Recipe is one of the easiest and quickest fish fry recipes.  Read and learn how to do Bangude fry recipe in Kannada.

How to make Fish Tava fry in Kannada /Quick Fish recipes in Kannada/ Spicy and tastier Fish Fry Recipe in Kannada

Quick and Easy Lemon rice recipe in Kannada | Chitranna Recipe | South Indian breakfast recipes | Quick breakfasts for busy mornings

Quick and Easy Lemon rice recipe in Kannada





ಬೇಕಾಗುವ ಸಾಮಗ್ರಿಗಳು:

ತಯಾರಿಸಿರುವ ಅನ್ನ -1 ಕಪ್
ಈರುಳ್ಳಿ -1
ಬೆಳ್ಳುಳ್ಳಿ - 5-6 ಎಸಳು 
ಕರಿ ಬೇವು - 2 ಕಡ್ಡಿ 
ಹಸಿರು ಮೆಣಸಿನ ಕಾಯಿ -3
ಸಾಸಿವೆ -1 tbl spoon

ಉದ್ದಿನ ಕಾಳು -1 tblspoon
ಕಡ್ಲೆ ಕಾಳು -1tblspoon
ಅಥವಾ 
ಕಡ್ಲೆ ಬೀಜ

ನಿಂಬೆ ಹಣ್ಣು - ಅರ್ಧ ಹೋಳು
ಕೊತ್ತಂಬರಿ ಸೊಪ್ಪು- 1 ಸಣ್ಣ ಕಪ್ 

ಮಾಡುವ ವಿಧಾನ:

1. ಬಾಣಲೆಯಲ್ಲಿ ಎಣ್ಣೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಮೇಲೆ ಕಡ್ಲೆ ಕಾಳು,ಉದ್ದಿನ ಕಾಳು, ಹಾಕಿ ಸ್ವಲ್ಪ ಹುರಿಯಿರಿ.
2. ನಂತರ ಬೆಳ್ಳುಳ್ಳಿ,ಈರುಳ್ಳಿ, ಹಸಿರು ಮೆಣಸಿನ ಕಾಯಿ, ಕರಿ ಬೇವು  ಹಾಕಿ ಕಂದು ಚೆನ್ನಾಗಿ ಹುರಿಯಿರಿ.
3. ಸ್ವಲ್ಪ ಈರುಳ್ಳಿ ಬೆಂದ ಮೇಲೆ ಅರಿಶಿನ ಪುಡಿ ಹಾಕಿ. 


4. ನಂತರ ಕೊನೆಯಲ್ಲಿ ಉಪ್ಪು,ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.

5. ನಂತರ ಬೇಯಿಸಿಟ್ಟು ಕೊಂಡ ಅನ್ನ ಹಾಕಿ ಕಲಸಿ(ಅನ್ನ ಆರಿಸಿದ್ದರೆ ಚಿತ್ರಾನ್ನ 
ಹುಡಿ ಹುಡಿಯಾಗಿ ಬರುತ್ತದೆ .ಅನ್ನ ಸ್ವಲ್ಪ ಬಿಸಿಯಾಗಿದ್ದರೆ ಕಲಸುವಾಗ ಅನ್ನ ಮುದ್ದೆ ಆಗಿಬಿಡುತ್ತದೆ).  ಕೊನೆಯಲ್ಲಿ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಕಲಸಿ.



6.ಈಗ ನಿಂಬೆ ಚಿತ್ರಾನ್ನ ತಿನ್ನಲು ರೆಡಿ. 




Tags: #Quick Karnatak breakfast recipes, #Breakfast with Rice item

ವೆಜ್ ಫ್ರೈಡ್ ರೈಸ್ - Veg Fried Rice Recipe in kannada | ವೆಜ್ ಫ್ರೈಡ್ ರೈಸ್ ಮಾಡುವ ವಿಧಾನ ಕನ್ನಡದಲ್ಲಿ

 

Veg Fried Rice( ವೆಜ್ ಫ್ರೈಡ್ ರೈಸ್ )

                

ಹೊರಗೆ ಹೋಟೆಲ್ ನಲ್ಲಿ, ಸ್ಟಾಲ್ ಗಳಲ್ಲಿ ಎಲ್ಲರು ತಿನ್ನುವ ಅಥವಾ ತಿನ್ನಲು ಬಯಸುವ ಸಾಮಾನ್ಯ ತಿನಿಸು ವೆಜ್ ಫ್ರೈಡ್ ರೈಸ್...!!! 

ಎಲ್ಲರಿಗೂ ಇಷ್ಟವಾಗುವ ಈ ತಿನಿಸು ಮಾಡುವ ವಿಧಾನ ತುಂಬ ಸುಲಭ. ಹೇಗೆ ಎಂದು ತಿಳಿಯಲು ಕೆಳಗಿನ ಈ ಬ್ಲಾಗ್  ಓದಿ ನೋಡಿ. 


Healthy Sabsige Soppina Uppittu recipie in kannada | ಸಬ್ಸಿಗೆ ಸೊಪ್ಪಿನ ಉಪ್ಪಿಟ್ಟು ಮಾಡುವ ವಿಧಾನ | Healthy DiI leaves upma - Recipe steps with pictures

 


ಸಬ್ಸಿಗೆ ಸೊಪ್ಪಿನ ಉಪ್ಪಿಟ್ಟು ಮಾಡುವ ವಿಧಾನ 


ಬೇಕಾಗುವ ಸಾಮಗ್ರಿಗಳು:

ಬನ್ಸಿ  ರವೆ- 1 ಗ್ಲಾಸ್
ಈರುಳ್ಳಿ-2
ಟೊಮೇಟೊ-1 or 2
ಹಸಿ ಮೆಣಸಿನ ಕಾಯಿ -2-4

ಕಡ್ಲೆ ಬೇಳೆ - 1 ಸ್ಪೂನ್
ಹೆಸರು ಬೇಳೆ - 1 ಸ್ಪೂನ್
ಉದ್ದಿನ ಬೇಳೆ - 1 ಸ್ಪೂನ್

ಸಬ್ಸಿಗೆ ಸೊಪ್ಪು -1 ಅಥವಾ  2 ಕಪ್ ( ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿ ಎತ್ತಿಡಿ)

ಕರಿ ಬೇವು -1 ಅಥವಾ 1 ಕಡ್ಡಿ
ಸಾಸಿವೆ -  1ಸ್ಪೂನ್
ಎಣ್ಣೆ-4 ಸ್ಪೂನ್

ಮಾಡುವ ವಿಧಾನ:
ಪಾತ್ರೆಯಲ್ಲಿ 1  ಚಮಚ ಎಣ್ಣೆ ಹಾಕಿ. ರವೆಯನ್ನು ಹಾಕಿ ಹುರಿಯಿರಿ.
10-15 ನಿಮಿಷ ಹುರಿಯಿರಿ.


ನಂತರ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ. ಸಾಸಿವೆ , ಕರಿ ಬೇವು ಹಾಕಿ ಹುರಿಯಿರಿ.
ನಂತರ ಕಡ್ಲೆ ಬೇಳೆ,ಹೆಸರು ಬೇಳೆ, ಉದ್ದಿನ ಬೇಳೆ ಹಾಕಿ ಹುರಿಯಿರಿ.
ನಂತರ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹಸಿ ವಾಸನೆ ಹೋಗೋವರೆಗೆ ಹುರಿಯಿರಿ.



ನಂತರ ಸಬ್ಸಿಗೆ ಸೊಪ್ಪು ಹಾಕಿ ಹಸಿ ವಾಸನೆ ಹೋಗೋ ವರೆಗೆ ಹುರಿಯಿರಿ.




ನಂತರ ಟೊಮೇಟೊ ಹಾಕಿ ಹುರಿಯಿರಿ. 


ನಂತರ ನೀರು ಹಾಕಿ, ರುಚಿ ಗೆ ಉಪ್ಪು ಹಾಕಿ ನೀರು ಕುದಿಯಲು  ಬಿಡಿ.
ನೀರನ್ನು ರವೆ ಅಳತೆಯ ಎರಡರಷ್ಟು ಹಾಕಬೇಕು.
ನೀರು ಕುದಿಯಲು ಶುರುವಾದ ಮೇಲೆ ಹುರಿದಿಟ್ಟಿರುವ ರವೆ ಹಾಕಿ ಚೆನ್ನಾಗಿ ಕಲಕಿ.
ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.


10 ನಿಮಿಷದ ನಂತರ ತೆಗೆದು, ಉಪ್ಪಿಟ್ಟನ್ನು ಬಿಸಿ ಬಿಸಿಯಾಗಿ ತಿನ್ನಲು ಕೊಡಿ 


You might also like the recipes below:


























Moong dal payasa.. Hesaru bele payasa recipe | ಹೆಸರು ಬೇಳೆ ಪಾಯಸ | maduva sulabha vidhana kannadadalli

 


ಹೆಸರು ಬೇಳೆ ಪಾಯಸ ಬೇಕಾಗುವ ಸಾಮಗ್ರಿಗಳು:

ಹೆಸರು ಬೇಳೆ- 1 ಕಪ್
ಹಾಲು-1 ಕಪ್(optional)
ಬೆಲ್ಲ- 2 ಅಚ್ಚು 
ನೀರು- 1.5 ಕಪ್
ಕಾಯಿ ತುರಿ - 2-3 ಸ್ಪೂನ್ 


ಡ್ರೈ ಫ್ರೂಟ್ಸ್ - 2-3 spoon 
(ಗೋಡಂಬಿ, ದ್ರಾಕ್ಷಿ,ಪಿಸ್ತಾ )

ಏಲಕ್ಕಿ ಪುಡಿ - ೧ ಸ್ಮಾಲ್ ಟೀ ಸ್ಪೂನ್ 
ತುಪ್ಪ-2 ಸ್ಪೂನ್


ಮಾಡುವ ವಿಧಾನ:

Dry fruits ಅನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ಎತ್ತಿಟ್ಟುಕೊಳ್ಳಿ.ಎಲ್ಲವನ್ನೂ ಬೇರೆ ಬೇರೆಯಾಗಿ ಕಡಿಮೆ ಉರಿಯಲ್ಲಿ ಹುರಿದು ಕೊಳ್ಳಿ.  
ಹೆಸರು ಬೇಳೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ.



ನಂತರ ಪಾತ್ರೆಯಲ್ಲಿ  ಹಾಲು, ಅಳತೆಗೆ ತಕ್ಕಸ್ಟು ನೀರು(ಒಟ್ಟು 2.5 ಲೋಟ ) ಹಾಕಿ ಬೇಯಲು ಬಿಡಿ. ಪ್ರೆಷರ್ ಕುಕ್ ಮಾಡಿದರೆ ಇದು ಬೇಗ ಬೇಯುತ್ತದೆ,
ಹಾಲು ಇಲ್ಲವಾದರೆ ಬರೀ ನೀರನ್ನು ಹಾಕಿ ಕೂಡ ಪಾಯಸ ಮಾಡಬಹುದು.
 
ಬೆಲ್ಲ ದಲ್ಲಿ ಕಲ್ಲು/ಕಲ್ಮಶ ಇರೋದಂದರಿಂದ ಬೆಲ್ಲವನ್ನು ನೀರಿಗೆ ಹಾಕಿ ಕರಗಲು ಬಿಡಿ. ನಂತರ ಶೋಧಿಶಿ ಬೆಂದಿರುವ ಹೆಸರು ಬೇಳೆಗೆ ಬೆರೆಸಿಕೊಳ್ಳಿ. 


ಕೊನೆಗೆ ಕಾಯಿ ತುರಿ, ಏಲಕ್ಕಿ ಪುಡಿ, ಹುರಿದಿರುವ ಡ್ರೈ ಫ್ರೂಟ್ಸ್ ಹಾಕಿ ಚೆನ್ನಾಗಿ ತಿರುವಿ.  
(ನಾನು ಇಲ್ಲಿನ ರೆಸಿಪಿ ಯಲ್ಲಿ ಕಾಯಿ ತುರಿ ಹಾಕಿಲ್ಲ. ಇದು ಕೂಡ optional )



ಸರ್ವಿಂಗ್ ಬೌಲ್ ಗೆ ಪಾಯಸ ಹಾಕಿ ಸವಿಯಲು ಕೊಡಿ.


Churumuri Recipe in kannada | Spicy and delicious snack item | Quick snack for evening

 ಚುರುಮುರಿ:




ಬೇಕಾಗುವ ಸಾಮಗ್ರಿಗಳು: 
ಕಡ್ಲೆ ಪುರಿ - ೧ ಸಣ್ಣ
ಈರುಳ್ಳಿ - ಕಾಲು ಭಾಗ
ಟೊಮೇಟೊ -ಕಾಲು ಭಾಗ
ಸೌತೆ ಕಾಯಿ- ೨ ಸಣ್ಣ ಹೋಳು
ಹಸಿರು ಮೆಣಸಿನ ಕಾಯಿ ಖಾರ
ಅಚ್ಚ ಖಾರ ಪುಡಿ
ನಿಂಬೆ ರಸ-೧ ಸ್ಪೂನ್
ಬೂ೦ದಿ  ಖಾರ  /ಮಿಕ್ಸ್  ಖಾರ -೨ ಸ್ಪೂನ್
ಕೊತ್ತಂಬರಿ ಸೊಪ್ಪು- ೧ಸ್ಪೂನ್
ರುಚಿ ಗೆ ಉಪ್ಪು

ಎಣ್ಣೆ -೨ ಸ್ಪೂನ್

ಮಾಡುವ ವಿಧಾನ :

1. ಒಂದು ಅಗಲ ಬಾಯಿ ಇರುವ  ಪಾತ್ರೆಯಲ್ಲಿ ಎಣ್ಣೆ, ಈರುಳ್ಳಿ,ಟೊಮೇಟೊ ,ಸೌತೆ, ಹಸಿ ಮೆಣಸಿನ ಖಾರ, ಚೂರು ಅಚ್ಚ ಖಾರದ ಪುಡಿ,ಉಪ್ಪು ಹಾಕಿ ಕಲಸಿ.

2. ನಂತರ  ಬೂ೦ದಿ  ಖಾರ  /ಮಿಕ್ಸ್  ಖಾರ, ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ.
3. ಕೊನೆಯಲ್ಲಿ ಕಡ್ಲೆ ಪುರಿ ಹಾಕಿ ಕಲಸಿ.

4. ಈಗ spicy ಮತ್ತು ಸುಲಭವಾಗಿ ಮಾಡುವ ಚುರುಮುರಿ ತಿನ್ನಲು ರೆಡಿ.



Oyster mushroom fry | ಆಯ್ ಸ್ಟರ್ ಮಶ್ರೂಮ್ ಫ್ರೈ | try this different mashroom fry recipe

 ಆಯ್ ಸ್ಟರ್ ಮಶ್ರೂಮ್ ಫ್ರೈ :



Paneer Tikka starter recipe in kannada | Easiest and tastiest veg snacks/starter for evenings / parties / or dinner

 ಪನೀರ್ ಟಿಕ್ಕಾ:


ಬೇಕಾಗುವ ಸಾಮಗ್ರಿಗಳು:

ಪನೀರ್
ಈರುಳ್ಳಿ -1
ಕ್ಯಾಪ್ಸಿಕಂ (ದಪ್ಪ ಮೆಣಸಿನ ಕಾಯಿ)-1

ಪೇಸ್ಟ್ ಗೆ:
ಮೊಸರು : 3-4ಸ್ಪೂನ್
ಗರಂ ಮಸಾಲಾ -1 ಸ್ಪೂನ್
ಅಚ್ಚ ಖಾರದ ಪುಡಿ - 1 ಸ್ಪೂನ್
ಉಪ್ಪು -ರುಚಿಗೆ
ಧನ್ಯ ಪುಡಿ -1 ಸ್ಪೂನ್

ಮಾಡುವ ವಿಧಾನ:

ಪೇಸ್ಟ್ ತಯಾರಿಸುವ ವಿಧಾನ:

ಬಟ್ಟಲಿನಲ್ಲಿ ಮೊಸರು, ಗರಂ ಮಸಾಲಾ,ಅಚ್ಚ ಖಾರದ ಪುಡಿ, ಧನ್ಯ ಪುಡಿ, ಉಪ್ಪು ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ

ಪನೀರ್, ಈರುಳ್ಳಿ, ದಪ್ಪ ಮೆಣಸಿನ ಕಾಯಿ ಎಲ್ಲವನ್ನು ಸಮ ಆಕಾರದಲ್ಲಿ ಕತ್ತರಿಸಿ.
ನಂತರ ತಯಾರಿಸಿರುವ ಪೇಸ್ಟ್ ಒಳಗೆ ಹಾಕಿ ಚೆನ್ನಾಗಿ ಕಲಸಿ.

 ಅದನ್ನು 30 ನಿಮಿಷದವರೆಗೆ ಹೊಂದಲು ಬಿಡಿ.

ನಂತರ ತವಾದಲ್ಲಿ 2-3 ಸ್ಪೂನ್ ಎಣ್ಣೆ ಹಾಕಿ ಪನೀರ್ ಈರುಳ್ಳಿ, ಕ್ಯಾಪ್ಸಿಕಂ ಎಲ್ಲವನ್ನು ಚೆನ್ನಾಗಿ ಫ್ರೈ ಮಾಡಿ. 
2 ಕಡೆ ಚೆನ್ನಾಗಿ ತಿರುವಿ ಫ್ರೈ ಮಾಡಿ. 

ಟೂತ್ ಪಿಕ್ ನಲ್ಲಿ ಪನೀರ್, ಈರುಳ್ಳಿ, ಕ್ಯಾಪ್ಸಿಕಂ  ಅನ್ನು ಅಲಂಕರಿಸಿ ತಿನ್ನಲು ಕೊಡಿ .


How to prepare Vegetable Upma-ತರಕಾರಿ ಉಪ್ಪಿಟ್ಟು | Easy morning breakfasts | South Indian Breakfast items

 Vegetable Upma-ತರಕಾರಿ ಉಪ್ಪಿಟ್ಟು




ಬೇಕಾಗುವ ಸಾಮಗ್ರಿಗಳು :

ರವೆ - 1 glass 
ಈರುಳ್ಳಿ -2
ಟೊಮೇಟೊ -1 or 2
ಮೆಣಸಿನ ಕಾಯಿ-3-4
ಕಡ್ಲೆ ಕಾಳು -1 spoon
ಹೆಸರು ಬೇಳೆ -1spoon
ಉದ್ದಿನ ಬೇಳೆ -1 spoon

ತರಕಾರಿ- 1 ಅಥವಾ  2 ಕಪ್ (ಬೀನ್ಸ್,ಕ್ಯಾರಟ್, ಆಲೂಗಡ್ಡೆ ಸಣ್ಣಗೆ ಕತ್ತರಿಸಿಡಿ)

ಕರಿಬೇವು - 2ಕಡ್ಡಿ
ಸಾಸಿವೆ - 1 ಟೇಬಲ್ spoon
ಎಣ್ಣೆ -3 spoons

ಮಾಡುವ ವಿಧಾನ: 
1) ರವೆ ಸ್ವಲ್ಪ ೧ ಸ್ಪೂನ್ ಎಣ್ಣೆಯಲ್ಲಿ ಹುರಿದು ಕೊಂಡು ಎತ್ತಿಡಿ. ಸಣ್ಣ ಉರಿಯಲ್ಲಿ ರವೇ ಹುರಿಯಿರಿ. 


2) ಬಾಣಲೆಯಲ್ಲಿ ಎಣ್ಣೆ, ಸಾಸಿವೆ,ಕರಿಬೇವು ಹಾಕಿ. ನಂತರ ಕಡ್ಲೆ ಕಾಳು, ಹೆಸರು ಬೇಳೆ,ಉದ್ದಿನ ಬೇಳೆ ಹಾಕಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ.


 3) ನಂತರ ಕತ್ತರಿಸಿ ಇಟ್ಟುಕೊಂಡಿರುವ ತರಕಾರಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.ಹಸಿ ವಾಸನೆ ಹೋಗುವವರೆಗೆ  ೧೦ ನಿಮಿಷ ತರಕಾರಿ ಹುರಿಯ ಬೇಕಾಗುತ್ತೆ. 

 4) ನಂತರ ಟೊಮೇಟೊ ಹಾಕಿ ಹುರಿಯಿರಿ. .


5) ಇದಾದ ನಂತರ ರವೆಗೆ ಅಳತೆಗೆ ತಕ್ಕಂತೆ ನೀರು ಹಾಕಿ.ರುಚಿಗೆ ತಕ್ಕಂತೆ  ಉಪ್ಪು ಹಾಕಿ ಕುದಿಯಲು ಬಿಡಿ.
(1 ಲೋಟ ರವೆಗೆ 2 ಲೋಟ ನೀರು ಹಾಕಿರಿ. )

6) ಕುಡಿ ಬಂದ ಮೇಲೆ ಹಿರಿದು ಇಟ್ಟಿರುವ ರವೆ ಹಾಕಿ ಚೆನ್ನಾಗಿ ತಿರುವಿ. ಗಂಟು ಬರದ ಹಾಗೆ ತಿರುವಿ

ಈಗ ರವೆ ಉಪ್ಪಿಟ್ಟು ತಿನ್ನಲು ರೆಡಿ