Methi Egg Bhurji(ಮೆಂತ್ಯ ಮೊಟ್ಟೆ ಬುರ್ಜಿ) Recipe | Easy Egg Burji recipe in Kannada | Mentya soppu mattu motteya palya




ಬೇಕಾಗುವ ಸಾಮಗ್ರಿಗಳು:
ಈರುಳ್ಳಿ - 1
ಮೆಂತ್ಯ ಸೊಪ್ಪು - 2 ಕಟ್ಟು 
ಹಸಿ ಮೆಣಸಿನ ಕಾಯಿ- 2-3
ಎಣ್ಣೆ - 2-3 spoon
ಮೊಟ್ಟೆ - 4


ಮಾಡುವ ವಿಧಾನ:

1. 
ಮೆಂತ್ಯ ಸೊಪ್ಪನ್ನು ಚೆನ್ನಾಗಿ ಸೋಸಿ ತೊಳೆದು ತುಂಡರಿಸಿ ಇಟ್ಟುಕೊಳ್ಳಿ 



2. ಬಾಣಲೆಯಲ್ಲಿ ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಈರುಳ್ಳಿ,ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ.





2. ಈರುಳ್ಳಿ ಬೆಂದ ನಂತರ ರುಚಿಗೆ ಉಪ್ಪು ಹಾಕಿ. ನಂತರ ಮೆಂತ್ಯ ಸೊಪ್ಪು ಹಾಕಿ ಹುರಿಯಿರಿ.



3. ಸೊಪ್ಪಿನಲ್ಲಿರುವ ನೀರು ಇಂಗಬೇಕು. ಸೊಪ್ಪು ಬೆಂದ ಮೇಲೆ ಮೊಟ್ಟೆ ಯನ್ನು ಒಡೆದು  ಬಾಣಲೆಗೆ ಸುರಿದು ಚೆನ್ನಾಗಿ ತಿರುವಿತ್ತಿರಿ.


4. ನೀರಿನ ಅಂಶ ಆರಿ, ಸ್ವಲ್ಪ ಮೊಟ್ಟೆ ಯ ಬಣ್ಣ ಕಂದು ಮಿಶ್ರಿತ ಬಣ್ಣ ಬರೋವರೆಗೆ ತಿರುವಿ.




5. ಈಗ ಮೆಂತ್ಯ ಮೊಟ್ಟೆ ಪಲ್ಯ ತಿನ್ನಲು ರೆಡಿ


Pepper chicken dry(ಪೆಪ್ಪರ್ ಚಿಕನ್ ಡ್ರೈ) | Pepper chicken dry recipe in kannada | Easy chicken recipes in Kannada

 ಪೆಪ್ಪರ್ ಚಿಕನ್ ಡ್ರೈ :




Vegetarian Manchurian(ವೆಜ್ ಮಂಚೂರಿಯನ್ ಮಾಡುವ ವಿಧಾನ ಕನ್ನಡದಲ್ಲಿ) | Healthy snacks at home | snacks recipe in Kannada

 





ಬೇಕಾಗುವ ಸಾಮಗ್ರಿಗಳು:

ವೆಜ್ ಮಂಚೂರಿಯನ್ ಉಂಡೆಗೆ:
ಎಲೆ ಕೋಸು- 1/2 ಕಪ್ 
ಕ್ಯಾರಟ್ -1/2 ಕಪ್ 
ದಪ್ಪ ಮೆಣಸಿನ ಕಾಯಿ-1/4 ಕಪ್ 
ಬೀನ್ಸ್-1/4 ಕಪ್ 
ಈರುಳ್ಳಿ ಎಲೆ ಅಥವಾ  ಈರುಳ್ಳಿ -1/4 ಕಪ್ (ಈ ಅಡುಗೆ ಯಲ್ಲಿ ಈರುಳ್ಳಿ ಎಲೆ ಬಳಸಿಲ್ಲ) 

ವೆಜ್ ಮಂಚೂರಿಯನ್ ಗ್ರೇವಿ ಗೆ(ಗೊಜ್ಜು):
1 tbl spoon ಸಣ್ಣಗೆ ಉತ್ತರಿಸಿರುವ ಶುಂಠಿ 
1 tbl spoon ಸಣ್ಣಗೆ ಉತ್ತರಿಸಿರುವ ಬೆಳ್ಳುಳ್ಳಿ 
4 tbl spoon ಸಣ್ಣಗೆ ಉತ್ತರಿಸಿರುವ ಈರುಳ್ಳಿ 
2 ಹಸಿ ಮೆಣಸಿನ ಕಾಯಿ 
1 tbl spoon ಸಣ್ಣಗೆ ಉತ್ತರಿಸಿರುವ ಕೊತ್ತಂಬರಿ ಸೊಪ್ಪು 
1-2 tbl spoon ಎಣ್ಣೆ 
1 tbl spoon ಕಾಳು ಮೆಣಸು ಪೌಡರ್ 

1/2 tbl spoon ಸೋಯಾ ಸಾಸ್ 
1 tbl spoon ಟೊಮೇಟೊ ಸಾಸ್ 
3 spoons ರೆಡ್ ಚಿಲ್ಲಿ ಸಾಸ್ 

ಮಾಡುವ ವಿಧಾನ:
-> ಎಲ್ಲ ತರಕಾರಿಗಳನ್ನು ಸಣ್ಣಗೆ ಉತ್ತರಿಸಿ. ಒಂದು ಸಣ್ಣ ಪಾತ್ರೆಗೆ ಹಾಕಿ.  

-> 2 spoon ಮೈದ ,1 spoon ಕಾರ್ನ್ flour, 1/2 spoon ಕಾಳು ಮೆಣಸು ಪೌಡರ್, ಉಪ್ಪು ಹಾಕಿ. ಮಿಕ್ಸ್ ಮಾಡಿ. 


-> ಮಿಕ್ಸ್ ಮಾಡಿರುವ ತರಕಾರಿ ಯಿಂದ ಉಂಡೆ ಕಟ್ಟಿ.  ಉಂಡೆ ಕಟ್ಟಲು ಕಷ್ಟವಾದರೆ ಸ್ವಲ್ಪ ಮೈದಾ ಹಾಕಿಕೊಳ್ಳಿ. Mixture ಒಣಗಿದೆ ಅನಿಸಿದರೆ 1-2 spoon ನೀರು ಹಾಕಿ ಕೊಳ್ಳಿ. ತರಕಾರಿ ನೀರು ಬಿಡುವುದರಿಂದ ನೀರನ್ನು ಉಂಡೆ ಕಟ್ಟಲು ಅನುಕೂಲವಾಗುವಷ್ಟು ಮಾತ್ರ ಹಾಕಿ.


-> ಉಂಡೆ ತಯಾರಾದ ಮೇಲೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. 
ಕಾದ ನಂತರ ಉಂಡೆಯನ್ನು ಹಾಕಿ ಫ್ರೈ ಮಾಡಿ. ಅದು ಫ್ರೈ ಆದ ಮೇಲೆ ತಟ್ಟೆ ಮೇಲೆ tissue ಪೇಪರ್ ಹರಡಿ . ಬೆಂದಿರುವ ಉಂಡೆ ಹಾಕಿ ಹೆಚ್ಚಿನ ಎಣ್ಣೆ ಹೀರಲು ಹಾಕಿ ಎತ್ತಿಡಿ. 



ಕಾರ್ನ್ ಪೌಡರ್ ನ ಪೇಸ್ಟ್ ಗೆ: 
1 tbl spoon ಕಾರ್ನ್ ಪೌಡರ್ (ಜೋಳದ ಹಿಟ್ಟು)
2 tbl spoon ನೀರು 
ಸಣ್ಣ ಕಪ್ ನಲ್ಲಿ ಕಾರ್ನ್ ಪೌಡರ್, ನೀರು ಹಾಕಿ ಮಿಕ್ಸ್ ಮಾಡಿ ಎತ್ತಿಡಿ. 


ವೆಜ್ ಮಂಚೂರಿಯನ್ ಗ್ರೇವಿಗೆ (ಗೋಜ್ಜಿಗೆ):

-> ಪ್ಯಾನ್ನಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಹೆಚ್ಚಿರುವ ಶುಂಠಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. 
ಹೆಚ್ಚಿರುವ ಈರುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. 
(ಹಸಿ ಮೆಣಸಿನಕಾಯಿ ಬೇಕಿದ್ರೆ ಬಿಟ್ಟು ಹಾಕಿ ) 



-> 1/2 spoon ಸೋಯಾ ಸಾಸ್, 1 tbl spoon ಟೊಮೇಟೊ ಸಾಸ್, 2-3 spoon ರೆಡ್ ಚಿಲ್ಲಿ ಸಾಸ್ ಹಾಕಿ. ನಂತರ ಕಾರ್ನ್ flour ಹಾಕಿ, ಚೆನ್ನಾಗಿ ಕಲಸಿ. 



-> ಕಾಳು ಮೆಣಸು ಪೌಡರ್ ಬೇಕಿದ್ರೆ ಹಾಕಿ. 

-> ಮಂಚೂರಿಯನ್ ಉಂಡೆ ಹಾಕಿ ತಿರುವಿ.

-> ಕೊತ್ತಂಬರಿ ಸೊಪ್ಪು ಹೆಚ್ಚಿ ಉದುರಿಸಿ. ಬಿಸಿ ಇರುವಾಗಲೇ ರುಚಿಯಾದ ವೇಗ್ ಮಂಚೂರಿಯನ್ ಬಡಿಸಿ 








 ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ

Fish Fry with tamarind| How to make catla Fish Fry in kannad| Authentic karnataka style recipes | Easy and quick fish recipes

ಕ್ಯಾಟ್ಲಾ ಮೀನಿನ ಫ್ರೈ:




ಮೀನಿನ ಫ್ರೈ ಅಥವಾ ಮೀನಿನ ಯಾವುದೇ ಅಡುಗೆಯನ್ನು ನಾವು ಯಾವಾಗಲು ಕಷ್ಟ ಎಂದು ಭಾವಿಸುತ್ತೇವೆ. ಆದರೆ ಅದೆಲ್ಲಾ ಸುಳ್ಳು. ಬೇರೆಲ್ಲ ಅಡುಗೆ ಗಿಂತ ಅತಿ ಬೇಗ ಮೀನಿನ ಅಡುಗೆಗಳನ್ನು ಮಾಡಬಹುದು. 


ಈಗ ನಾವು ಫಿಶ್ ಫ್ರೈ ಅನ್ನು ಹೇಗೆ ತಯಾರಿಸೋದು ನೋಡೋಣ ಬನ್ನಿ 

ಅದರಲ್ಲೂ ಕೆಳಗಿನ ರೆಸಿಪಿ ಯಲ್ಲಿ ನಾನು ತುಂಬಾ ಕಡಿಮೆ ಎಣ್ಣೆ ಉಪಯೋಗಿಸಿದ್ದೇನೆ. 


ಮಾಡಲು ಬೇಕಾಗಿವೆ ಸಮಯ: 30 min

ಬೇಕಾಗುವ ಸಾಮಗ್ರಿಗಳು:


ಮೀನಿನ ತುಂಡು : 4-6
(ಇಲ್ಲಿ ಕ್ಯಾಟ್ಲಾ ಮೀನನ್ನು ಬಳಸಿದ್ದೇನೆ)

ಮೀನಿನ ಕೆಬಾಬ್ ಪುಡಿ - 1 pack
ಉಪ್ಪು -ರುಚಿಗೆ ತಕ್ಕಸ್ಟು 
ಹುಣಸೆ ಹಣ್ಣಿನ ರಸ-1 cup
ಚಿರೋಟಿ ರವೆ- 1 cup

ಎಣ್ಣೆ- 5 tbl spoon

( ಕಬಾಬ್ ಪೌಡರ್ ಬೇಡ ಅನಿಸಿದರೆ, ಮಸಾಲ ಮಿಶ್ರಣ ನೀವೇ ತಯಾರಿಯಿಸಿ ಕೊಳ್ಳಿ. 1 tbl spoon ಗರಂ ಮಸಾಲಾ ಪೌಡರ್,  1 tbl spoon ಕೆಂಪು ಮೆಣಸಿನ ಪುಡಿ, 1 tspn -ಅರೀಶಿನ ಪುಡಿ,  1/2 spoon ಧನಿಯಾ ಪುಡಿ ಬೆರೆಸಿದರೆ ರುಚಿಯಾದ ಮಸಾಲ ಮಿಶ್ರಣ ರೆಡಿ )

ಹುಣಸೆ ರಸಕ್ಕೆ : ಸಣ್ಣ ಕಪ್ ನ ಅಳತೆಯಲಿ ಹುಣಸೆ ಹಣ್ಣು ತೆಗೆದು ಕೊಂಡು ನೀರಲ್ಲಿ ನೆನೆ ಹಾಕಿ, ರಸವನ್ನು ಹಿಂದಿ ತೆಗೆದು ಇಟ್ಟು  ಕೊಳ್ಲಿ.


ಮಾಡುವ ವಿಧಾನ: 

1. ಮೀನನು ಚೆನ್ನಾಗಿ ಕ್ಲೀನ್ ಮಾಡಿ ಪಕ್ಕಕ್ಕೆ ಇಡಿ. 

2. ಪಾತ್ರೆಯೊಂದರಲ್ಲಿ ಕಬಾಬ್ ಪೌಡರ್, ಹುಣಸೆ ರಾಸ್, ಉಪ್ಪು ಹಾಕಿ ಗಟ್ಟಿ ಮಿಶ್ರಣ ಮಾಡಿಕೊಳ್ಳಿ. 

3. ಇದು ತಯಾರಾಗುವ ತನಕ, ತವಾದಲ್ಲಿ 4-5 ಸ್ಪೂನ್ ಎಣ್ಣೆ ಹಾಕಿ ಕಾಯಲು ಬಿಡಿ. ( ಇಲ್ಲಿ ನಾನು ಪೂರ್ತಿ ಕಡಿಮೆ ಎಣ್ಣೆ ಬಳಸಿ shallow ಫ್ರೈ ಮಾಡ್ತಾ ಇದ್ದೇನೆ )

4. ಒಂದು ತಟ್ಟೆಯಲ್ಲಿ ಚಿರೋಟಿ ರವೆ ಎತ್ತೆಟ್ಟುಕೊಳ್ಳಿ.  

5. ಮೀನನ್ನು ಮಸಾಲಾ ಗೆ ಅದ್ದಿ ನಂತರ ಚಿರೋಟಿ  ರವೆ ಯ ತಟ್ಟೆಯಲ್ಲಿ ಒಂದು ಹೊರಳು  ಹಾಕಿಸಿ.

ಹೀಗೆ ರವೆಯಲ್ಲಿ ಹೊರಲು ಹಾಕಿಸಿದರೆ ಫಿಶ್ ಫ್ರೈ ಗರಿಗರಿಯಾಗಿ ಬರುತ್ತದೆ.  



6. ಈಗ ಕಾದಿರುವ ಪಾನ್ ನಲ್ಲಿ ಮೀನು ಹಾಕಿ ಫ್ರೈ ಆಗಲು ಬಿಡಿ. ಫಿಶ್ ಚಿನ್ನದ ಬಣ್ಣ, ಇಲ್ಲವೇ  ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿ. 

ಈ ನಡುವೆ ಬೇಕಿದ್ದರೆ 1-2 ಸ್ಪೂನ್ ಎಣ್ಣೆ ಹಾಕಿ ಕೊಳ್ಳಿ. ಮತ್ತೆ ಅದನ್ನು ತಿರುಗಿಸಿ ಎರಡು ಕಡೆ ಚೆನ್ನಾಗಿ ಫ್ರೈ ಮಾಡಿ. 



7. ಬೆಂದ ಫ್ರೈ ಅನ್ನು ಟಿಶ್ಯೂ ಪೇಪರ್ ಮೇಲೆ ಎಣ್ಣೆ ಹೀರಲು ಬಿಡಿ. ಈಗ ಫಿಶ್ ಫ್ರೈ ಅನ್ನು ನಿಂಬೆ ಹಣ್ಣು, ಈರುಳ್ಳಿ ಜೊತೆ ತಿನ್ನಲು ಕೊಡಿ. 



How to prepare Instant puliogre rice in Kannada | ಧಿಡೀರ್ ಪುಳಿಯೊಗರೆ ಮಾಡುವ ವಿಧಾನ | Quick food recipes for beginners

 


ಲಾಕ್ಡೌನ್ , ಕೊರೊನ ದ ಕಾರಣದಿಂದ ಹೊರಗೆ ಹೋಟೆಲ್ ಗಳಲ್ಲಿ,ಮೆಸ್ ಗಳಲ್ಲಿ ಊಟ ಮಾಡಲು ಸಾಧ್ಯವಿಲ್ಲ. ಅದು ಸೇಫ್ ಕೂಡ ಅಲ್ಲ. ಇದರಿಂದ  ಕೆಲಸಕ್ಕಾಗಿ ಬೆಂಗಳೂರು ಮೈಸೂರ್ ನಂಥ ಊರಿಗೆ ಹೋಗಿ ಕೆಲಸ ಮಾಡ್ತಾ ಇರೋ ಎಷ್ಟೋ ಮಂದಿಗೆ ಅಡುಗೆ ಮಾಡಿ ಕೊಳ್ಳುವುದು  ತಲೆ ನೋವಾಗಿರುತ್ತದೆ.

ಇದೇ ಕಾರಣ ಅಲ್ಲದಿದ್ರೂ ಹೊರಗೆ ಕೆಲಸಕ್ಕಾಗಿ ಉಳಿಯುವ ಎಷ್ಟೋ ಮಂದಿಗೆ ಬೇರೆ ಸಮಯದಲ್ಲೂ ಸಾಮಾನ್ಯ ಅಡುಗೆ ಮಾಡುವ ವಿಧಾನ ಗೊತ್ತಿದ್ರೆ ತುಂಬಾ ಅನುಕೂಲಕರ.

ಅಂಥವರಿಗೆ  quick and easy recipe ವಿಧಾನಗಳು ಇಲ್ಲಿವೆ.


ಅಡುಗೆ1: ಪುಳಿಯೊಗರೆ: 
ಬೇಕಾಗುವ ಸಾಮಗ್ರಿಗಳು:

ಮಾಡಲು ಬೇಕಾಗುವ ಸಮಯ: 5 ನಿಮಿಷ 

ಅನ್ನಕ್ಕೆ - 1/2 ಲೋಟ ಅಕ್ಕಿ
ರುಚಿಗೆ ಉಪ್ಪು           
ಎಣ್ಣೆ- 2 ಸ್ಪೂನ್
MTR ಪುಳಿಯೋಗರೆ ಪೌಡರ್- ಅಥವಾ ಬೇರೆ ಯಾವದಾದರೂ ನಿಮ್ಮ
favorite ಪೌಡರ್


1) ಒಂದು ಪಾತ್ರೆ ತೆಗೆದುಕೊಂಡು ಒಲೆಯಲ್ಲಿ ಇಟ್ಟು, ಓಲೆ ಹಚ್ಚಿ.

2) 2 ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ 2 ನಿಮಿಷ ಕಾಯಲು ಬಿಡಿ.

3) ಒಂದು ವೇಳೆ ನಿಮ್ಮ ಬಳಿ ಸಾಸಿವೆ, ಕರಿಬೇವು,ಕಡ್ಲೆ ಬೀಜ, ಒಣ ಮೆಣಸಿನ ಕಾಯಿ ನಿಮ್ಮ ಬಳಿ ಇದ್ದರೆ ಪೌಡರ್ ಹಾಕುವ ಮುನ್ನ ಅದನ್ನು ಹಾಕಿ 2 ನಿಮಿಷ ಹುರಿಯಿರಿ.

4)ಕಾದ ಮೇಲೆ MTR ಅಥವಾ ಬೇರೆ ಯಾವುದಾದ್ರೂ ರೆಡಿ powder  2-3 ಸ್ಪೂನ್ ಹಾಕಿ. ಚೆನ್ನಾಗಿ ಕಲಸಿ.2-3 ನಿಮಿಷ ಹುರಿಯಿರಿ.  ಈಗ  ಪುಳಿಯೋಗರೆ ಗೊಜ್ಜು ರೆಡಿ.

5) ಇದಕ್ಕೆ ಮಾಡಿಟ್ಟಿರುವ  ಅನ್ನ ಹಾಕಿ ಕಲಸಿ. ಅನ್ನ ಕ್ಕೆ ಉಪ್ಪು ಹಾಕಿಲ್ಲವಾದರೆ, ಚಿಟಿಕೆ ಉಪ್ಪು ಹಾಕಿ ಕಲಸಿಕೊಳ್ಳಿ.


6) ಈಗ ಪುಳಿಯೋಗರೆ ರೈಸ್ ತಿನ್ನಲು ರೆಡಿ.



(Note: ಈ ಪುಡಿಯಲ್ಲೇ ಎಳ್ಳು, ಕಡ್ಲೆ ಬೀಜ,ಕಾಯಿ ತುರಿ, ಬೆಲ್ಲ, ಹುಣಸೆ ಹುಳಿ ಎಲ್ಲ ಸೇರಿರುರತ್ತೆ. so, ನೀವು ಏನನ್ನು ಹೆಚ್ಚಾಗಿ ಹಾಕುವ ಅಗತ್ಯ ಇಲ್ಲ)




ಅನ್ನ ಮಾಡುವ ವಿಧಾನ:

ಅನ್ನ ಮಾಡಲು ಬೇಕಾಗುವ ಸಮಯ: 15-20 ನಿಮಿಷ 

1) ಒಂದು ಪಾತ್ರೆಯಲ್ಲಿ 1 ಲೋಟ ಅಕ್ಕಿ ತೆಗೆದು ಕೊಳ್ಳಿ
2) ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
3) ಅದಕ್ಕೆ 2 ಲೋಟ ನೀರು ಹಾಕಿ  , 1/2 ಸ್ಪೂನ್ ಉಪ್ಪು ಹಾಕಿ ಅಕ್ಕಿ ಬೇಯಲು ಬಿಡಿ(1ಲೋಟ  ಅಕ್ಕಿಗೆ, 2 ಲೋಟ ನೀರಿನ ಪ್ರಮಾಣ ).
4) ಕುಕ್ಕರ್ ಇದ್ರೆ, ಕುಕ್ಕರ್ ಗೆ  ಅಕ್ಕಿ ಹಾಕಿ,ನೀರು ಹಾಕಿ  ಕುಕ್ಕರ್ ಮುಚ್ಚಿ ಮಧ್ಯಮ ಉರಿಯಲ್ಲಿ ಅನ್ನ ಬೇಯಲು ಬಿಡಿ . 2 ವಿಶಲ್ ಬಂದ್ರೆ ಅನ್ನ ಬೆಂದು ರೆಡಿ ಆಗಿರುತ್ತೆ.

5) ಕುಕ್ಕರ್ ಇಲ್ಲಾಂದ್ರೆ, ಮಧ್ಯಮ ಉರಿಯಲ್ಲಿ ಮುಚ್ಚಳ ತೆಗೆದು ಅನ್ನ ಬೇಯಲು ಬಿಡಿ. 10 ನಿಮಿಷದ ನಂತರ ಅಥವಾ ಅರ್ಧ ಬೆಂದ ಮೇಲೆ ಮುಚ್ಚಳ ಮುಚ್ಚಿ ಅನ್ನ ಬೇಯಲು ಬಿಡಿ.

6) ಅನ್ನ ಬೆಂದಿದೆ ಅಂತ ನೋಡಲು, ಸ್ಪೂನ್ ಅಲ್ಲಿ ಸ್ವಲ್ಪ ಅನ್ನ ತೆಗೆದು ಕೈಯಲ್ಲಿ ಹಿಸಿಕಿ ನೋಡಿ.ಅದು ಚೆನ್ನಾಗಿ ಹಿಸಿಕಿ ಹೋದರೆ ಅನ್ನ ಆಗಿದೆ ಎಂದರ್ಥ.

7) ನೀರು ಕಡಿಮೆ ಆಗಿದ್ರೆ ಸ್ವಲ್ಪ ಬಿಸಿ ನೀರು ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.
8) 15-20 ನಿಮಿಷದಲ್ಲಿ ಅನ್ನ ರೆಡಿ ಆಗಿರುತ್ತೆ


Types of fish for cooking in Kannada and English

 Bangda Fish / Indian mackerel In English  : 

ಬಂಗುಡೆ ಮೀನು in kannada(Bangude meenu)




Catla Fish in English : 

ಕ್ಯಾಟ್ಲಾ ಮೀನು in kannada(Catla meenu)




Pomfret Fish in English :

ಮಂಜಿ, ಬಿಳಿಮಂಜಿ in kannada(Manji, bilimanji)






Sardine fish in English: 
ಮತ್ತಿ ಮೀನು in Kannada(matti meenu) 


ನಾಟಿ ಕೋಳಿ ಸಾರು | How to prepare Nati koli saaru with less ingredients | Karnataka style Nati Koli Saaru | Quick and easy to prepare healthy Chicken sambar

 ನಾಟಿ ಕೋಳಿ ಸಾರು ಮಾಡುವ ವಿಧಾನ:

(Nati koli saaru Recipe in Kannada )

 



ಇಂದು ನಾವು ತುಂಬ ಕಡಿಮೆ ಮಸಾಲೆ ಗಳನ್ನೂ ಬಳಸಿಯೂ ಕೂಡ, ತುಂಬ ರುಚಿಕರವಾದಂತ, ಪೌಷ್ಟಿಕಉಳ್ಳ  ನಾಟಿ  ಕೋಳಿ ಸಾಂಬಾರ್ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ. 
 










ಹುಚ್ಚೆಳ್ಳಿನ ಹಾಲು ಮಾಡುವ ವಿಧಾನ:
ಹುಚ್ಚೆಳ್ಳು:1 ಕಪ್ (10 ನಿಮಿಷ ನೀರಲ್ಲಿ ಹಾಕಿ ಹುನಿಯಲು ಬಿಡಿ)

ಹುಚ್ಚೆಳ್ಳನ್ನು ಮಿಕ್ಸಿಯಲ್ಲಿ ರುಬ್ಬಿ, ಸೋಸಿ ಅದರ ಹಾಲು ಎತ್ತಿಡಿ



           



ನಾಟಿ ಕೋಳಿ ಮಾಡುವ ವಿಧಾನ :

-> ಒಲೆ ಹಚ್ಚಿ ಪ್ರೆಷರ್ ಕುಕ್ಕರ್ ಅನ್ನು ಸ್ವಲ್ಪ ಬಿಸಿಯಾಗಲು ಬಿಡಿ. 


-> ನಂತರ  3-4 ಸ್ಪೂನ್ ಎಣ್ಣೆ ಹಾಕಿ 2 ಈರುಳ್ಳಿಯನ್ನು ಹಾಕಿ ಹುರಿಯಿರಿ. 
(2 ಈರುಳ್ಳಿ ಯನ್ನು ಕತ್ತರಿಸಿ  ಎಣ್ಣೆಯಲ್ಲಿ ಹುರಿಯಿರಿ.  ಹುರಿದಿರುವ  ಅರ್ಧ ಭಾಗ  ಈರುಳ್ಳಿ ಯನ್ನು ಮಿಕ್ಸಿಗೆ ಹಾಕಿ ರುಬ್ಬಲು ಎತ್ತಿಡಿ)

-> ನಂತರ 
ಪ್ರೆಷರ್ ಕುಕ್ಕರ್ ಗೆ  ರುಬ್ಬಿರುವ ಶುಂಠಿ ಬೆಳ್ಳುಳ್ಳಿ paste ಹಾಕಿ ಹುರಿಯಿರಿ. 




->ನಂತರ ಚೆನ್ನಾಗಿ ತೊಳೆದಿರುವ ಕೋಳಿ ಮಾಂಸ ಹಾಕಿ, ಉಪ್ಪು ಅರಿಶಿಣ ಹಾಕಿ ನೀರು ಹಿಂಗುವವರೆಗೆ ಚೆನ್ನಾಗಿ ಹುರಿಯಿರಿ. 

->ಮೇಲೆ ತಿಳಿಸಿರುವ ಮಸಾಲೆ ಸಾಮಾನುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. 

->ನಂತರ  ಅದಕ್ಕೆ  ರುಬ್ಬಿರುವ ಮಸಾಲಾ, ಸಾರಿನ ಖಾರದ  ಪುಡಿ,  
 ಸ್ವಲ್ಪ ನೀರು ಹಾಕಿ ಪ್ರೆಷರ್ ಕುಕ್ಕರ್ ಮುಚ್ಚಳ ಮುಚ್ಚಿ, 4-5 ವಿಷಲ್ ಬರುವ ವರೆಗೆ ಬೇಯಲು ಬಿಡಿ.





->ಕುಕ್ಕರ್ ಅನ್ನು ತೆಗೆದ ಮೇಲೆ ಹುಚ್ಚೆಳ್ಳಿನ ಹಾಲು  ಬೆರೆಸಿ ಮತ್ತೆ ಕುದಿಯಲು ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ




ಈಗ ನಾಟಿ ಕೋಳಿ ಸಾರು ತಿನ್ನಲು ರೆಡಿ




ಇದನ್ನು ಬಿಸಿ ಮುದ್ದೆ, ಅನ್ನ ದ ಜೊತೆ ತಿನ್ನಲು ಕೊಡಿ. 

ಈ ಸಾಂಬಾರ್ ಪೌಷ್ಟಿಕವಾಗಿರುವುದರಿಂದ ಒಳ್ಳೆಯ ಅರೋಗ್ಯ ಮತ್ತು ಶಕ್ತಿ ಕೊಡುತ್ತದೆ. ಶೀತದ ಸಮಯ ದಲ್ಲಿ  ಈ ಸಾಂಬಾರ್  ಅನ್ನು ಮಕ್ಕಳಿಗೆ, ಬಾಣಂತಿಯರಿಗೆ, ಮತ್ತು ಎಲ್ಲರಿಗೂ ಸೂಪ್ ಥರವೂ ಕೂಡ ಕುಡಿಯಲು ಕೊಡಬಹುದು. 



You might also like the recipes below:

































Tasty and colorful Masala Rice bath |Masala Rice bath recipe in kannada | ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ

 


ಮಸಾಲಾ ರೈಸ್ ಬಾತ್ ಮಾಡುವ ವಿಧಾನ ಕನ್ನಡದಲ್ಲಿ:




ಬೇಕಾಗುವ ಸಾಮಗ್ರಿಗಳು:


ಅಕ್ಕಿ - 250 grams 

ನಿಮಗೆ ಬೇಕಾದ ಆಯ್ಕೆಯ ತರಕಾರಿ ತೆಗೆದುಕೊಳ್ಳಿ 
(ಇಲ್ಲಿ ನಾನು ಬೀನ್ಸ್,ಕ್ಯಾರಟ್, ಆಲೂಗಡ್ಡೆ ಮತ್ತು ಬಟಾಣಿ ಬಳಸಿದ್ದೇನೆ)
ಲವಂಗ -> 4-5 
ಸ್ಟಾರ್ ಮೊಗ್ಗು -> 1-2
 ಬಿರಿಯಾನಿ ಎಲೆ-> 2 
ಚಕ್ಕೆ ->1 
ಏಲಕ್ಕಿ->2
ಈರುಳ್ಳಿ->2
ಟೊಮೇಟೊ ->2
ಶುಂಠಿ ಬೆಳ್ಳುಳಿ ಪೇಸ್ಟ್ -> 1 ಸ್ಪೂನ್ 
 ಕರಿ ಮೆಣಸು -> 3-4
ಕೊತ್ತಂಬರಿ ಸೊಪ್ಪು - 1 ಕಟ್ಟು 
ಮೊಸರು-> 1 ಸಣ್ಣ ಕಪ್  
ಎಣ್ಣೆ -> 4 spoon
ಉಪ್ಪು -> ರುಚಿಗೆ ತಕ್ಕಂತೆ 

ಮಸಾಲಾ ರೈಸ್ ಬಾತ್ ಗೆ ಮುಖ್ಯ ಸಾಮಗ್ರಿಗಳು: 
ಬ್ಯಾಡಗಿ ಮೆಣಸಿನ ಕಾಯಿ:   8-10
ಒಣ ಮೆಣಸಿನ ಕಾಯಿ:          2-3
ಧನ್ಯ ಕಾಳು:         1 tbl spoon


ಮಿಕ್ಸಿಗೆ ರುಬ್ಬಲು:.
(ಈ ಎಲ್ಲ ಕೆಳಗಿನ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದು ರುಬ್ಬಿಕೊಳ್ಳಿ.)

ಬ್ಯಾಡಗಿ ಮೆಣಸಿನ ಕಾಯಿ->   8-10
ಒಣ ಮೆಣಸಿನ ಕಾಯಿ->         2-3
ಧನ್ಯ ಕಾಳು->         1 tbl spoon

 ಈರುಳ್ಳಿ -> 1
2 ಸಣ್ಣ ಟೊಮೇಟೊ 
ಲವಂಗ -> 3 to 4
ಚಕ್ಕೆ ->  2 ಸಣ್ಣ ತುಂಡು 
ಕರಿ ಮೆಣಸು-> 8-10

ತೆಂಗಿನಕಾಯಿ-> 1 ಸಣ್ಣ ಕಪ್ 
ಕೊತ್ತಂಬರಿ ಸೊಪ್ಪು->1 ಸಣ್ಣ ಕಪ್ 


ಮಾಡುವ ವಿಧಾನ: 

1.ಪತ್ರೆ ಬಿಸಿಯಾಗಲು ಇಟ್ಟು, 2 ಸ್ಪೂನ್ ಎಣ್ಣೆ ಹಾಕಿ. 
2. ನಂತರ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಅನೀಸ್, ಬಿರಿಯಾನಿ ಎಲೆ ಹಾಕಿ ಸ್ವಲ್ಪ ಹುರಿಯಿರಿ. 

3. ನಂತರ ೧ ಹೆಚ್ಚಿರುವ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ (ಘಮ ವಾಸನೆ ಬರುವವರೆಗೆ, ಮತ್ತು ಈರುಳ್ಳಿ ಸ್ವಲ್ಪ ಕೆಂಪಾಗುವ ವರೆಗೆ ) ಹುರಿಯಿರಿ. 

4. ನಂತರ ಹೆಚ್ಚಿಟ್ಟಿರುವ ಎಲ್ಲಾ ತರಕಾರಿ ಹಾಕಿ ಫ್ರೈ ಮಾಡಿ(ತರಕಾರಿ ಚೆನ್ನಾಗಿ ಬೇಯುವ ವರೆಗೆ ಹುರಿಯಿರಿ. ಅಗತ್ಯವಿದ್ದರೆ ಸ್ವಲ್ಪ ಎಣ್ಣೆ ಹಾಕಿ ಕೊಳ್ಳಿ). 

5. ನಂತರ ರುಬ್ಬಿರುವ ಕಾಯಿ, ಟೊಮೇಟೊ ಮಸಾಲಾ ವನ್ನು ಹಾಕಿ ಹುರಿಯಿರಿ. 

6. ಈಗ ಸ್ವಲ್ಪ ಮೊಸರು ಹಾಕಿ ಸ್ವಲ್ಪ ಕಲಸಿ ಹುರಿಯಿರಿ. 

7. ನಂತರ ತೊಳೆದಿರುವ ಅಕ್ಕಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ವಲ್ಪ ಹುರಿಯಿರಿ. 

8. ನಂತರ ಅಕ್ಕಿಗೆ ತಕ್ಕಷ್ಟು ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಅನ್ನ ಬೇಯಲು ಬಿಡಿ. 15-20 ನಿಮಿಷ ತೆಗೆದು ಕೊಳ್ಳುತ್ತೆ. 

ಅನ್ನಕ್ಕೆ ನೀರಿನ ಅಳತೆ : 
ಅಕ್ಕಿ 1 ಲೋಟ ತೆಗೆದು ಕೊಂಡರೆ 2 ಲೋಟ ನೀರು ಹಾಕಬೇಕು. ಮಸಾಲೆ ಯಲ್ಲೂ ಸ್ವಲ್ಪ ನೀರು ಇರುವುದರಿಂದ, ಸ್ವಲ್ಪ ಕಡಿಮೆ ನೀರು ಹಾಕಿಕೊಳ್ಳಿ. 

9. ನೀವು ಪ್ರೆಷರ್ ಕುಕ್ಕರ್ ಅಲ್ಲಿ ಅಡುಗೆ ಮಾಡುತ್ತಿದ್ದಾರೆ, 2 ವಿಸಲ್ ಬರುವವರೆಗೆ ಅನ್ನ ಬೇಯಿಸಿದರೆ ಸಾಕು.  

ಈಗ ನಿಮ್ಮ ಬಿಸಿಬಿಸಿ ಮತ್ತು ರುಚಿಕರ ಮಸಾಲಾ ರೈಸ್ ಬಾತ್ ತಿನ್ನಲು ರೆಡಿ. ಇದು ನೋಡಲೂ ಕೂಡ ಒಳ್ಳೆ ಬಣ್ಣ ಇರೋದಕ್ಕೆ, ಎಲ್ಲರಿಗೂ ಖಂಡಿತಾ ಇಷ್ಟವಾಗುತ್ತೆ.  
ಇದನ್ನು ಮಾಡಿ ನಿಮಗೆ ಇಷ್ಟವಾದಲ್ಲಿ ತಿಳಿಸಿ. 





You might also like recipes below: 



  

How to prepare Onion chatni with easy steps in kannada | ಈರುಳ್ಳಿ ಚಟ್ನಿ ಮಾಡುವ ವಿಧಾನ ಕನ್ನಡ ದಲ್ಲಿ

 ಈರುಳ್ಳಿ ಚಟ್ನಿ ಮಾಡುವ ವಿಧಾನ ಕನ್ನಡ ದಲ್ಲಿ: 






ಮನೆಯಲ್ಲಿ ಚಟ್ನಿ ಮಾಡಲು ಕಾಯಿ, ಟೊಮೇಟೊ ಏನೂ ಇಲ್ಲದ ಸಮಯದಲ್ಲಿ ನೀವು ಈರುಳ್ಳಿ ಚಟ್ನಿ ಮಾಡಬಹುದು. 
ಈ ಚಟ್ನಿ ನೋಡಲು ಟೊಮೇಟೊ ಚಟ್ನಿ ಹಾಗೆ ಕಾಣುತ್ತೆ. 


ಬೇಕಾಗುವ ಸಾಮಗ್ರಿಗಳು:

ಈರುಳ್ಳಿ- 2
ಬೆಳ್ಳುಳ್ಳಿ- 1-2 ಎಸಳು
ಕಡ್ಲೆ ಬೇಳೆ/ಉದ್ದಿನ ಬೇಳೆ -  1 spoon
ಒಣ  ಮೆಣಸಿನ ಕಾಯಿ -2-3


ಬ್ಯಾಡಗಿ  ಮೆಣಸಿನ ಕಾಯಿ -2-3
ಅರಿಶಿನ - ೧ ಚಿಟಿಕೆ 
ಉಪ್ಪು - ರುಚಿಗೆ ತಕ್ಕಷ್ಟು
ಜೀರಿಗೆ - 1/2 spoon
ಹುಣಸೆ ಹಣ್ಣು - 1 tbl spoon 
ಎಣ್ಣೆ - 1 spoon


ಮಾಡುವ ವಿಧಾನ: 

1. ಬಾಣಲೆ ಬಿಸಿಯಾಗಲು ಬಿಟ್ಟು,ಎಣ್ಣೆ ಹಾಕಿ ಸಾಸಿವೆ,ಜೀರಿಗೆ ಹಾಕಿ . ನಂತರ ಕಡ್ಲೆ ಬೇಳೆ ಹಾಕಿ ಸ್ವಲ್ಪ ಹುರಿಯಿರಿ. 

2. ನಂತರ ಈರುಳ್ಳಿ,ಬೆಳ್ಳುಳ್ಳಿ ಮತ್ತು  ಮೆಣಸಿನ ಕಾಯಿ, ಚಿಟಿಕೆ ಅರಿಶಿಣ ಹಾಕಿ ಹುರಿಯಿರಿ.ರುಚಿಗೆ ತಕ್ಕಷ್ಟು ಉಪ್ಪು ಹಾಕಿ. 

3.  ಈ ಗೊಜ್ಜನ್ನು ಆರಲು ಸ್ವಲ್ಪ ಹೊತ್ತು ಬಿಟ್ಟು ಮಿಕ್ಸಿ ಗೆ ಹಾಕಿ ರುಬ್ಬಿರಿ. 


5.  ಈಗ ಈರುಳ್ಳಿ ಚಟ್ನಿ ರೆಡಿ. 
ಇದನ್ನು ಚಪಾತಿ/ ರೊಟ್ಟಿ/ ಅಥವಾ ದೋಸೆಯ ಜೊತೆ ತಿನ್ನಲು  ಕೊಡಿ. ಇದನ್ನು ಅನ್ನದ ಜೊತೆ ಕೂಡ ತಿನ್ನಬಹುದು