Egg Fried Rice Recipe
ಎಗ್ ಫ್ರೈಡ್ ರೈಸ್ ಮಾಡುವ ವಿಧಾನ - ಮೊಟ್ಟೆ ಫ್ರೈಡ್ ರೈಸ್
ಮೊಟ್ಟೆ ಆರೋಗ್ಯಕ್ಕೆ ಒಳ್ಳೇದು ಅಂತ ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ನಿಮಗೆ ಮೊಟ್ಟೆ ಹಾಗೆ ಬೇಯಿಸಿ ತಿನ್ನಲು ಇಷ್ಟ ಇಲ್ಲಾಂದ್ರೆ,ಅಥವಾ ಮಕ್ಕಳು ಮೊಟ್ಟೆ ಅಂದರೆ, ಅದನ್ನ ಬೇರೆ ರೀತಿಯಾಜಿ ರುಚಿಯಾಗಿ ತಯಾರಿಸಿ ಕೊಟ್ಟರೆ ಖಂಡಿತಾ ಎಲ್ಲರು ಅದನ್ನ ಇಷ್ಟ ಪಡ್ತಾರೆ.
Egg Nutrition Value(ಮೊಟ್ಟೆಯಲ್ಲಿರುವ ಪೋಷಕಾಂಶ ಗಳು):
1 ಮೊಟ್ಟೆ- 75 ಕ್ಯಾಲೋರಿಸ್
7 ಗ್ರಾಂ ಉತ್ತಮ ಪ್ರೊಟೀನ್
5 ಗ್ರಾಂ ಫ್ಯಾಟ್
1.6 ಗ್ರಾಂ ಸ್ಯಾಚುರೇಟೆಡ್ fat
ಕಬ್ಬಿನಾಂಶ, ವಿರಮಿನ್ಗಳು ಮಿನರಲ್ ಗಳನ್ನೂ ಹೊಂದಿರುತ್ತೆ
ಎಗ್ ಫ್ರೈಡ್ ರೈಸ್ ಒಂದು ಬೇಗನೆ ಮಾಡಬಹುದಂತಹ ರೈಸ್ ವಿಧಾನ ದಲ್ಲಿ ಒಂದು . ಕಡಿಮೆ ಸಮಯದಲ್ಲಿ ಇದನ್ನ ಮಾಡಬಹುದು.
ಮಕ್ಕಳಿಂದ ಎಲ್ಲರಿಗು ಇದು ಇಷ್ಟ ವಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಶುಂಠಿ - 1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )
ಬೆಳ್ಳುಳ್ಳಿ -1 tbl spoon(ಸಣ್ಣಗೆ ಕತ್ತರಿಸಿ ಕೊಳ್ಳಿ )
ಮಾಡಿಟ್ಟಿರುವ ಅನ್ನ - 2 cup
ಮೊಟ್ಟೆ - 3-4
ಈರುಳ್ಳಿ (ಸಣ್ಣಗೆ ಕತ್ತರಿಸಿ ಕೊಳ್ಳಿ )- 1
ಮಿಕ್ಸ್ ತರಕಾರಿಗಳು- 1 cup(Optional-ತರಕಾರಿಗಳು ಬೇಡ ಅಂದರೆ skip ಮಾಡಿ )
ಹಸಿ ಮೆಣಸಿನ ಕಾಯಿ - 4-5
ಗರಂ ಮಸಾಲಾ ಪೌಡರ್ - 1 spoon
ಕಾಲು ಮೆಣಸಿನ ಪುಡಿ - 1 spoon
ನಿಂಬೆ - Half
ಉಪ್ಪು - for paste
ಮಾಡುವ ವಿಧಾನ:
1) ಫ್ರಯಿಂಗ್ ಪಾನ್ ಅನ್ನು ಹೀಟ್ ಮಾಡಲು ಇಡಿ. 2-3 ಸ್ಪೂನ್ ಎಣ್ಣೆ ಹಾಕಿ. ನಂತರ ಹೆಚ್ಚಿರುವ ಶುಂಠಿ ಬೆಳ್ಳುಳ್ಳಿ ಹಾಕಿ
2) ಅದು ಸ್ವಲ್ಪ ಬೆಂದ ನಂತರ ಈರುಳ್ಳಿ ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ
3) ನಂತರ ಮಿಕ್ಸ್ ತರಕಾರಿ ಗಳನ್ನೂ ಹಾಕಿ ಫ್ರೈ ಮಾಡಿ. ತರಕಾರಿ ಇಲ್ಲಾಂದ್ರೆ ಈ ಸ್ಟೆಪ್ ಅನ್ನು ಸ್ಕಿಪ್ ಮಾಡಿ. ಇಲ್ಲಿ ತರಕಾರಿ ಗಳನ್ನ 4-5 ನಿಮಿಷ ಹೈ ಫ್ಲೇಮ್ ಅಲ್ಲಿ ಹುರಿಯಿರಿ.
ಹೈ ಫ್ಲೇಮ್ ಅಲ್ಲಿ ತರಕಾರಿ ಯನ್ನು ಹುರಿದರೆ ಅದು crispy ಆಗಿರುತ್ತೆ.
4) ಮೊಟ್ಟೆ ಅನ್ನು ಒಡೆದು ಹಾಕಿ ಹಸಿ ವಾಸನೆ ಹೋಗೋವರೆಗೆ ಚೆನ್ನಾಗಿ ಹುರಿಯಿರಿ.
5) ಸ್ವಲ್ಪ ಗರಂ ಮಸಾಲಾ ಹಾಕಿ ಫ್ರೈ ಮಾಡಿ
6) ನಂತರ ಬೇಯಿಸಿರುವ ಅನ್ನ, ಪೆಪ್ಪರ್ ಪೌಡರ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲ ಸೇರಿಸಿ ಚೆನ್ನಾಗಿ ಕಲಸಿ.
7) ಚೈನೀಸ್ ಸ್ಟೈಲ್ ಅಲ್ಲಿ ಮಾಡೋ ಹಾಗಿದ್ರೆ ನಿಮ್ಮ ಹತ್ರ ಇರುವ ಸೌಸೆ ಗಳು ಹಾಕಬಹುದು.
ಇಲ್ಲಾಂದ್ರೆ ನಿಂಬೆ ಜ್ಯೂಸ್ ಹಾಕಿ ಮಿಕ್ಸ್ ಮಾಡಿ. ಹೈ ಫ್ಲೇಮ್ ಅಲ್ಲಿ ೪-೫ ನಿಮಿಷ ಫ್ರೈ ಮಾಡಿ ಓಲೆ ಆರಿಸಿರಿ.
8) ಈಗ ಎಗ್ ಫ್ರೈಡ್ ರೈಸ್ ತಿನ್ನಲು ರೆಡಿ ಆಗಿದೆ . ನಿಮ್ ಹತ್ರ ಇರುವ ಟೊಮೇಟೊ ಸಾಸ್, ಚಿಲ್ಲಿ ಸಾಸ್ ಜೊತೆ ಸರ್ವ್ ಮಾಡಿ. ಇದು ಬಿಸಿ ಇರುವಾಗಲೇ ತಿಂದರೆ ಚೆನ್ನ ..
Article tags: #Egg fried rice, #Egg fried rice maduva vidhana, #Prepare Egg fried rice with available vegetables and egg at home