Kesari Bath or Kesari Baat recipe in Kannada | ಕೇಸರಿ ಭಾತ್ ಮಾಡುವ ವಿಧಾನ


ಕೇಸರಿ ಭಾತ್ ಮಾಡುವ ವಿಧಾನ:


ಕೇಸರಿ ಭಾತ್ ದಕ್ಷಿಣ ಭಾರತದ ಸಾಮಾನ್ಯವಾಗಿ ತಯಾರಿಸೋ  ಒಂದು ಸಿಹಿ ತಿನಿಸು. ಇದನ್ನು ಮಾಡುವುದು ಸುಲಭ. ಸಾಮಾನ್ಯವಾಗಿ ಇದನ್ನ ಉಪ್ಪಿಟ್ಟು ಮಾಡುವ ದಿನ ಜೊತೆಗೆ ಮಾಡಿ ಚೌ ಚೌ ಭಾತ್ ಅಂತ ಮಾಡಿ ಬಡಿಸುತ್ತಾರೆ. 

ಇಲ್ಲಾ ಹಬ್ಬದ ದಿನ, ವಿಶೇಷವಾದ ದಿನಗಳಲ್ಲೂ ಮಾಡುವುದು ಉಂಟು. 


ಬೇಕಾಗುವ ಸಾಮಗ್ರಿಗಳು :

ರವೆ - 1 glass 
ಹಾಲು - 2 glass
ನೀರು - 1/2 glass(ಹಾಲು ಕಡಿಮೆ ಇದ್ದರೆ ನೀರನ್ನೂ ಜಾಸ್ತಿ ಬಳಸಬಹುದು). 

ಸಕ್ಕರೆ - 1 glass
ತುಪ್ಪ - 3-4 ಸ್ಪೂನ್ 

ಗೋಡಂಬಿ,ದ್ರಾಕ್ಷಿ  - 1 ಸಣ್ಣ cup
ಚಕ್ಕೆ,ಲವಂಗ - 2-3
ಏಲಕ್ಕಿ, ಏಲಕ್ಕಿ ಸಿಪ್ಪೆ - 1-2
ಕೇಸರಿ ದಳ-8-10
 ಅಥವಾ ಕೇಸರಿ ಬಣ್ಣ -ಚಿಟಿಕೆ 

ಮಾಡುವ ವಿಧಾನ: 
1) ರವೆ ಸ್ವಲ್ಪ 1 ಸ್ಪೂನ್ ಎಣ್ಣೆ ಅಥವಾ ತುಪ್ಪ ದಲ್ಲಿ  ಹುರಿದು ಕೊಂಡು ಎತ್ತಿಡಿ. ಸಣ್ಣ ಉರಿಯಲ್ಲಿ ರವೆ  ಹುರಿಯಿರಿ. 


2) ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು ಬೇರೆ ಬೇರೆಯಾಗಿ ಹುರಿದು ಎತ್ತಿಡಿ.  


 3) ನಂತರ ಹಾಲು ಸಕ್ಕರೆ, ತುಪ್ಪ ಹಾಕಿ. 

 ನಿಮ್ ಹತ್ರ ಕೇಸರಿ ದಳ ಇದ್ರೆ , 3-4 ಘಂಟೆ ಗೆ ಮುನ್ನ 7-8 ದಳ ಹಾಕಿ ಹುನಿಯಲು ಬಿಡಿ. ಆಗ ಅದು ಕೇಸರಿ ಬಣ್ಣ ಬಿಡುತ್ತೆ. ಆ ಕೇಸರಿ ನೀರನ್ನು ನೀವು ಇಲ್ಲಿ ಹಾಕಿ . 
(ಕೇಸರಿ ಬಣ್ಣ ಇದ್ದರೆ ಕೇಸರಿ ಹಾಕಿ,ಇಲ್ಲಾಂದ್ರೆ ಅರಿಶಿನ ಆದರೂ ಹಾಕಬಹುದು )

 4) ಏಲಕ್ಕಿ ಸಿಪ್ಪೆ, ಚಕ್ಕೆ ಲವಂಗ ಹಾಕಿ ಕುದಿಯಲು ಬಿಡಿ. ಲವಂಗ ಏಲಕ್ಕಿ ಕೇಸರಿ ಭಾತ್ ಗೆ ಒಳ್ಳೆ ಪರಿಮಳ  ಕೊಡುತ್ತದೆ. 


5) ಹಾಲು ಕುದಿ ಬಂದ ಮೇಲೆ ರವೆಯನ್ನು ನಿಧಾನವಾಗಿ ಹಾಕಿ ಗಂಟು ಬಾರದ ಹಾಗೆ ತಿರುವಿ. ಹುರಿದಿಟ್ಟಿರುವ ದ್ರಾಕ್ಷಿ ಗೋಡಂಬಿ ಹಾಕಿ

6) ತುಪ್ಪ ಬೇಕಿದ್ದರೆ 1-2 ಸ್ಪೂನ್ ಬೆರೆಸಿಕೊಳ್ಳಿ. 



ಈಗ ರುಚಿಯಾದ ಕೇಸರಿ  
ಕೇಸರಿ ಭಾತ್ ರೆಡಿ